Heath Benefits of clove water:
ಬೆಳಗ್ಗೆ ಎದ್ದ ತಕ್ಷಣವೇ HEATH BENEFITS OF CLOVE WATER ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಜೊತೆಗೆ ಕೂದಲಿಗೆ ಒಳ್ಳೆಯದು, ಚರ್ಮ ಮತ್ತು ಜೀರ್ಣಕ್ರಿಯೆ ಸೇರಿದಂತೆ ಹಲವು ಕಾಯಿಲೆಗಳಿಗಳಿಗೆ ಪ್ರಯೋಜನಕಾರಿ ಎಂದು ವೈದ್ಯರು ಹೇಳಿದ್ದಾರೆ.
ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ ಗುಣಗಳು ಹಾಗೂ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಲವಂಗದ ನೀರನ್ನು ಬೆಳಗ್ಗೆ ಸಮಯದಲ್ಲಿ ಸೇವಿಸುವುದರಿಂದ ಶುಗರ್ ನಿಯಂತ್ರಣದ ಜೊತೆಗೆ ಚರ್ಮ ಮತ್ತು ಕೂದಲಿನ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
HEATH BENEFITS OF CLOVE WATER ಇದರೊಂದಿಗೆ ಒಟ್ಟಾರೆ ಆರೋಗ್ಯಕ್ಕೆ ಅನೇಕ ಲಾಭಗಳನ್ನು ನೈಸರ್ಗಿಕವಾಗಿ ಒದಗಿಸುತ್ತದೆ. ಲವಂಗವನ್ನು ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹಾಗೂ ತೂಕ ನಿರ್ವಹಣೆಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞೆ ಮತ್ತು ತೂಕ ನಿರ್ವಹಣಾ ತಜ್ಞೆ ಡಾ.ಪ್ರತ್ಯಕ್ಷ ಭಾರದ್ವಾಜ್ ತಿಳಿಸಿದ್ದಾರೆ.
Health Benefits of Clove Water:
-
Promotes digestion & relieves flatulence:
ಲವಂಗದ ನೀರನ್ನು ನಿಮಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದಾಗಿದೆ. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಅಜೀರ್ಣ ಕಡಿಮೆ ಮಾಡುತ್ತದೆ. ಲವಂಗದ ನೀರು ತೇಗುವಿಕೆ ಮತ್ತು ಗ್ಯಾಸ್ಟ್ರಿಕ್ ತೊಂದರೆಗಳಿಗೆ ನೈಸರ್ಗಿಕವಾಗಿ ಪರಿಹಾರ ಒದಗಿಸುತ್ತದೆ. ನಿರ್ವಿಶೀಕರಣ ಪ್ರಕ್ರಿಯೆ ಸಹಾಯ ಮಾಡುತ್ತದೆ ಎಂದು ಡಾ.ಭಾರದ್ವಾಜ್ ವಿವರಿಸುತ್ತಾರೆ.
-
Helps in weight loss:
ಲವಂಗದ ನೀರು ನಿಮ್ಮ ಚಯಾಪಚಯ ಕ್ರಿಯೆಗೆ ಅಗತ್ಯವಾದ ರಸಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದರ ಸಕ್ರಿಯ ಸಂಯುಕ್ತವಾದ ಯುಜೆನಾಲ್, ಕೊಬ್ಬಿನ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದು ದೈನಂದಿನ ತೂಕ ನಿರ್ವಹಣೆಯಲ್ಲಿ ಹೆಚ್ಚು ಸಹಾಯಕವಾಗಿದೆ.
-
Sugar regulates:
ನಿಮ್ಮ ರಕ್ತದಲ್ಲಿನ ಶುಗರ್ ಲೆವಲ್ನ್ನು ನೈಸರ್ಗಿಕವಾಗಿ ನಿಯಂತ್ರಿಸಲು ನೀವು ಬಯಸಿದರೆ, ಲವಂಗದ ನೀರನ್ನು ಸೇವನೆ ಮಾಡಬಹುದು. ಲವಂಗದಲ್ಲಿರುವ ಯುಜೆನಾಲ್ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಒಟ್ಟಾರೆ ಚಯಾಪಚಯ ಆರೋಗ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
-
Strengthens Immunity:
ಲವಂಗದ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇರುವುದರಿಂದ, ನಿಮ್ಮ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಸಾಮಾನ್ಯ ಸೋಂಕುಗಳು ಹಾಗೂ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
-
Good for teeth:
ಲವಂಗದ ನೀರಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಉರಿಯೂತ ಕಡಿಮೆ ಮಾಡುತ್ತದೆ. ಜೊತೆಗೆ ಬಾಯಿ ಮತ್ತು ಹಲ್ಲುಗಳ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಲವಂಗದ ನೀರಿನಿಂದ ತೊಳೆಯುವುದು ಸಹ ನಿಮ್ಮ ಉಸಿರಾಟ ತಾಜಾ ಆಗಿಸುತ್ತದೆ.
-
Treats Acne and Blemishes:
ಲವಂಗದ ನೀರು ಉರಿಯೂತ ನಿವಾರಕ, ಆ್ಯಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಜೊತೆಗೆ ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಹಾಗೂ ಚರ್ಮದಲ್ಲಿ ಅಲ್ಲಲ್ಲಿ ಕೆಂಪಗಾಗುವುದನ್ನು ಕಡಿಮೆ ಮಾಡಲು ಹಾಗೂ ಕ್ಲೀನ್ ಆಗಿರುವ ಚರ್ಮ ಹೊಂದಲು ಸಹಾಯ ಮಾಡುತ್ತದೆ.
-
Glowing skin:
ಲವಂಗದ ನೀರಿನಲ್ಲಿನ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಮಂದವಾಗಿಸುವ ಹಾಗೂ ಅಕಾಲಿಕ ವಯಸ್ಸಾಗುವಂತೆ ಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಲವಂಗದ ನೀರನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ನಿಮ್ಮ ಚರ್ಮವು ಕಾಂತಿಯುತ ಹಾಗೂ ಆರೋಗ್ಯಕರವಾಗಿರುತ್ತದೆ.
-
Soothes skin irritations:
ನಿಮ್ಮ ಚರ್ಮದಲ್ಲಿ ತುರಿಕೆ ಹಾಗೂ ಕಿರಿಕಿರಿ ಕಂಡುಬಂದರೆ, ಲವಂಗದ ನೀರು ಸೇವನೆ ಮಾಡುವುದರಿಂದ ಈ ತೊಂದರೆ ಪರಿಹಾರ ಲಭಿಸುತ್ತದೆ.
-
Strengthens hair follicles:
ಲವಂಗ ನೀರು ಸೇವನೆ ಮಾಡುವುದರಿಂದ ತಲೆಯನ್ನು ಪೋಷಿಸುತ್ತದೆ. ಜೊತೆಗೆ ಕೂದಲು ಕಿರುಚೀಲಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆ ಮಾಡುತ್ತದೆ. ಜೊತೆಗೆ ಕೂದಲುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
-
Reduces Dandruff:
ಲವಂಗದ ನೀರಿನಲ್ಲಿರುವ ಆ್ಯಂಟಿಮೈಕ್ರೊಬಿಯಲ್ ಗುಣಗಳು ತಲೆಹೊಟ್ಟು ಹಾಗೂ ತುರಿಕೆ ಕಡಿಮೆ ಮಾಡುತ್ತದೆ. ನಿಮ್ಮ ತಲೆಯ ಆರೋಗ್ಯವನ್ನು ಕಾಪಾಡುತ್ತದೆ.
-
Hair Shine:
ಲವಂಗದ ನೀರಿಂದ ಕೂದಲನ್ನು ತೊಳೆಯುವುದರಿಂದ ನೈಸರ್ಗಿಕವಾಗಿ ಹೊಳಪು ಹಾಗೂ ಸಾಫ್ಟ್ ಆಗುತ್ತವೆ. ಇದು ನಿಮ್ಮ ಕೂದಲನ್ನು ಹೆಚ್ಚು ಚೈತನ್ಯಯುತವಾಗಿರುತ್ತದೆ.
-
How to prepare clove water?:
ಲವಂಗದ ನೀರನ್ನು ತಯಾರಿಸುವುದು ಸುಲಭವಾಗಿದೆ. ಇದನ್ನು ಮಾಡುವ ವಿಧಾನ ಬಗ್ಗೆ ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
Materials required
- 1 ಟೀಸ್ಪೂನ್- ಲವಂಗ
- 1 ಗ್ಲಾಸ್- ನೀರು
- 1 ಪೀಸ್ ನಿಂಬೆ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)
- 1 ಟೀಸ್ಪೂನ್ ಜೇನುತುಪ್ಪ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)
Method of preparation:
ಮೊದಲು ಒಂದು ಕಪ್ ನೀರು ಕುದಿಸಬೇಕಾಗುತ್ತದೆ. ನಂತರ ಅದರೊಳಗೆ ಲವಂಗ ಸೇರಿಸಿ 10 ರಿಂದ 15 ನಿಮಿಷ ನೆನೆಯಲು ಬಿಡಬೇಕಾಗುತ್ತದೆ. ಬಳಿಕ ಲವಂಗದ ನೀರನ್ನು ಸೋಸಿಕೊಳ್ಳಬೇಕಾಗುತ್ತದೆ. ಸ್ವಲ್ಪ ಈ ನೀರು ಆರಲು ಬಿಡಬೇಕಾಗುತ್ತದೆ. ಹೆಚ್ಚಿನ ರುಚಿ ಹಾಗೂ ಮತ್ತಷ್ಟು ಪ್ರಯೋಜನಗಳಿಗೆ, ಒಂದು ಪೀಸ್ ನಿಂಬೆ, ಒಂದು ಟೀಸ್ಪೂನ್ ಜೇನುತುಪ್ಪ ಸೇರಿಸಬಹುದು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಲವಂಗದ ನೀರನ್ನು ಕುಡಿಯುವುದರಿಂದ ಹಲವು ಲಾಭಗಳು ದೊರೆಯುತ್ತವೆ.
ಇದನ್ನು ಓದಿರಿ : Cristiano Ronaldo Pays Emotional Tribute To Marcelo Viera