Heavy rain in Karnataka:
ರಾಜ್ಯದಲ್ಲಿ ಡಿಸೆಂಬರ್ 17 ಮತ್ತು 18 ಕ್ಕೆ ಮತ್ತೆ ಮಳೆಯಾಗಲಿದೆ. ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಮಳೆಯಾಗಲಿದೆ ಎನ್ನಲಾಗಿದೆ. ಮುಂದಿನ ಐದು ದಿನಗಳ ಹವಾಮಾನ ಮಾಹಿತಿ ಇಲ್ಲಿದೆ. ಹೌದು ನೀವು ಓದುತ್ತಿರುವ ಮಾತು ಸರಿಯಾಗಿದೆ ಡಿಸೆಂಬರ್ 17 ಮತ್ತು 18 ಕ್ಕೆ ಮತ್ತೆ ಮಳೆಯಾಗಲಿದೆ. ಒಂದು ವಾರಗಳ ಕಾಲ ರಾಜ್ಯಾದಾದ್ಯಂತ ಬೆಳಿಗ್ಗೆ ದಟ್ಟಮಂಜು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Bengaluru Rain:
ಡಿಸೆಂಬರ್ 15 ಹಾಗೂ 16 ರಂದು ರಾಜ್ಯದಾದ್ಯಂತ ಒಣ ಹವೆಯಿರುವ ಸಾಧ್ಯತೆಯಿದ್ದು, ಡಿಸೆಂಬರ್ 17 ರಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಬಾರಿ ಮಳೆಯಾಗಲಿದೆ. ಮತ್ತು ಡಿಸೆಂಬರ್ 19 ರಿಂದ ಕರಾವಳಿ, ಮಲೆನಾಡು & ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯು ಪುನಶ್ಚೇತನಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಡಿಸೆಂಬರ್ 17 ಹಾಗೂ 18 ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ, ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿ.19 ಮತ್ತು 20 ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
Kerala News:
ಹಗಲು ತಾಪಮಾನ ಹೆಚ್ಚು ಇರುವ ಕಾರಣ ದೇವರನಾಡು ಬೆವರುತ್ತಿದೆ. ಹವಾಮಾನದಲ್ಲಿ ಬರುವ ಈ ಬದಲಾವಣೆಯು ಶೈತ್ಯ ಕಾಲದ ಬೆಳೆಗಳ ಉತ್ಪಾದನೆಯನ್ನು ಬಾಧಿಸಲಿದೆ ಎಂಬ ಆತಂಕ ಕೃಷಿಕರದ್ದಾಗಿದೆ. ಹೌದು ಚಳಿಗಾಲದ ಕಾಲಾವಧಿ ಆರಂಭಗೊಂಡರೂ ಕೇರಳದಲ್ಲಿ ಇನ್ನೂ ಚಳಿ ಅನುಭವಕ್ಕೆ ಬಂದಿಲ್ಲ.ಉತ್ತರ ಕೇರಳದಲ್ಲಿಅಷ್ಟೊಂದು ಚಳಿ ಅನುಭವಕ್ಕೆ ಬರುತ್ತಿಲ್ಲ. ಮಲೆನಾಡು ವಲಯದಲ್ಲಿತಂಪು ಇದ್ದರೂ ಗತ ವರ್ಷಗಳನ್ನು ಹೋಲಿಸಿದರೆ ತೀರಾ ಕಡಿಮೆಯಾಗಿದೆ. ನ.28 ಹಾಗೂ ಡಿ.10ರ ಮಧ್ಯೆ ರಾಷ್ಟ್ರದಲ್ಲಿಅತ್ಯಧಿಕ ತಾಪಮಾನ ದಾಖಲಾದ ನಗರಗಳ ಪಟ್ಟಿಯಲ್ಲಿಮೂರು ಬಾರಿಯೂ ಕಣ್ಣೂರು ಬಂದಿದೆ.ಸೋಮವಾರ ಅತ್ಯಧಿಕ ತಾಪಮಾನ 34.7 ಡಿಗ್ರಿ ಸೆಲ್ಶಿಯಸ್ ಆಗಿತ್ತು. ಇದು ರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಆಗಿದೆ. ಮಳೆ ಮುಂದುವರಿಯುತ್ತಿರುವುದು ಚಳಿಗೆ ಅಡ್ಡಿಯಾಗುತ್ತಿರುವುದಾಗಿ ಹವಾಮಾನ ತಜ್ಞ ರಾಜೀವನ್ ಎರಿಕ್ಕುಳಂ ಅಭಿಪ್ರಾಯಪಟ್ಟಿದ್ದಾರೆ.
Karnatakaದಲ್ಲಿ ದಟ್ಟ ಮಂಜು?
Bengaluru ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶನಿವಾರ, ಭಾನುವಾರ ಬೆಳಗ್ಗೆ 11 ಗಂಟೆಯಾದರೂ ಮಂಜು ಆವರಿಸಿದ್ದ ಕಾರಣ ಸೂರ್ಯ ಕಿರಣ ಭೂಮಿಗೆ ಬೀಳಲಿಲ್ಲ. ಜತೆಗೆ ದಿನವಿಡೀ ಜನರನ್ನು ಚಳಿ ನಡುಗಿಸಿತು. ಕರ್ನಾಟಕದಲ್ಲಿ ಚಳಿಗಾಲ ಅಬ್ಬರಿಸುತ್ತಿದ್ದು, ಮುಂದಿನ ಒಂದು ವಾರ ರಾಜ್ಯದಾದ್ಯಂತ ಸಾಧಾರಣ ಹಾಗೂ ಕೆಲವೆಡೆ ದಟ್ಟ ಮಂಜು ಆವರಿಸುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.