spot_img
spot_img

ತಮಿಳುನಾಡಿನಲ್ಲಿ ಮಳೆ ಅಬ್ಬರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಚೆನ್ನೈ: ನವೆಂಬರ್​ 29ರಂದು ಮಳೆ ಆರಂಭವಾಗಿದ್ದು, ಕ್ರಮೇಣ ಇದು ಅನೇಕ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮಡಿಪಕ್ಕಮ್​ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಫ್ಲೈವರ್​ನ ಎರಡು ರಸ್ತೆ ಬದಿ ಜಲಾವೃತಗೊಂಡಿದೆ.

ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇಂದು ಮಧ್ಯಾಹ್ನ ಪುದುಚೇರಿ ಕರಾವಳಿ ತೀರದತ್ತ ಅಪ್ಪಳಿಸಲಿದ್ದು, ಪರಿಣಾಮವಾಗಿ ತಮಿಳುನಾಡಿನಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಭಾರೀ ಮಳೆ ಹಿನ್ನೆಲೆ ಜನರು ಸುರಕ್ಷಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದ್ದು, ರಸ್ತೆಗಳು ನಿರ್ಜನವಾಗಿವೆ. ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮಳೆ ಅತಿ ಹೆಚ್ಚಿನ ಪರಿಣಾಮದ ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.

ಮಳೆ- ಗಾಳಿ ಹಿನ್ನೆಲೆ ವಿಮಾನ ಸಂಚಾರದಲ್ಲೂ ಕೂಡ ವ್ಯತ್ಯಯ ಉಂಟಾಗಿದೆ. ಇನ್ನು ಚೆನ್ನೈ ಮೆಟ್ರೋ ರೈಲು ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಪ್ರವಾಹಕ್ಕೆ ಒಳಗಾಗುವ ನಿರ್ದಿಷ್ಟ ನಿಲ್ದಾಣಗಳಲ್ಲಿನ ಪಾರ್ಕಿಂಗ್ ಪ್ರದೇಶಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ರಾಜ್ಯ ಸಾರಿಗೆ ನಿಗಮಗಳು ಸೀಮಿತ ಕಾರ್ಯಾಚರಣೆ ನಡೆಸಿದೆ.

ಶುಕ್ರವಾರದಿಂದಲೇ ಮಳೆ ಆರಂಭವಾಗಿದ್ದು, ಕ್ರಮೇಣ ಇದು ಅನೇಕ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮಡಿಪಕ್ಕಮ್​ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಫ್ಲೈಓವರ್​ನ ಎರಡು ರಸ್ತೆ ಬದಿ ಜಲಾವೃತಗೊಂಡಿದೆ.
ಸಮುದ್ರ ತೀರ ಪ್ರದೇಶ, ಮರಿನಾ ಮತ್ತು ಮಮ್ಮಲಪುರಮ್​ ಬೀಚ್​ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರಕಾರಿಸಲಾಗಿದ್ದು, ಬ್ಯಾರಿಕೇಡ್​​ಗಳನ್ನು ಹಾಕಲಾಗಿದೆ. ರಾಜ್ಯದಲ್ಲಿ ವಿದ್ಯುತ್​ ಮತ್ತು ವ್ಯವಸ್ಥೆಯಲ್ಲಿಯೂ ಯಾವುದೇ ವ್ಯತ್ಯಯವಾಗಿಲ್ಲ.

ಸಮುದ್ರದ ಪ್ರಕ್ಷುಬ್ಧತೆ ಮತ್ತು ಉಬ್ಬರವಿಳಿತದಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಹವಾಮಾನ ಇಲಾಖೆ ತಿಳಿಸಿದೆ.

ಮಳೆಯಿಂದಾಗಿ ಈಗಾಗಲೇ ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.

ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ಕಡಲೂರು, ವಿಲ್ಲುಪುರಂ, ಕಲ್ಲಕುರಿಚಿ ಮತ್ತು ಮೈಲಾಡುತುರೈ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.

ಸದ್ಯ ತಿರುವರೂರ್ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ನಿರಾಶ್ರಿತ ಶಿಬಿರ ತೆರೆದಿದ್ದು, 164 ಕುಟುಂಬಗಳನ್ನು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಮುಂದೆ ಅಗತ್ಯವಿದ್ದಲ್ಲಿ ಮತ್ತಷ್ಟು ಸ್ಥಳಾಂತರ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಮಳೆ ಹಿನ್ನೆಲೆ ಅನಗತ್ಯವಾಗಿ ಮನೆಯಿಂದ ಹೊರಬಾರದು, ಜನರು ಸುರಕ್ಷತಾ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಮಳೆ ಪರಿಣಾಮ ಎದುರಿಸಲು ಸರ್ಕಾರ ಸಜ್ಜಾಗಿದ್ದು, ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ಇರುವ ಪ್ರದೇಶಗಳಲ್ಲಿ 2,229 ಪರಿಹಾರ ಕೇಂದ್ರಗಳನ್ನು ತೆರೆದಿದೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

INDIA FOREST INCREASED – ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ

INDIA FOREST NEWS : ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ...

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...