spot_img
spot_img

HIGH COURT : ಅವಾಚ್ಯ ಪದ ಬಳಕೆ ಆರೋಪ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಪ್ರಕರಣದಲ್ಲಿ ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ HIGH COURT ಮಧ್ಯಂತರ ಆದೇಶ ನೀಡಿದೆ.ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಕೋರಿ ಸಿ.ಟಿ.ರವಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿರುವ ಆರೋಪದಲ್ಲಿ ಮಾಜಿ ಸಚಿವ ಮತ್ತು ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ ವಿರುದ್ಧ ಜನವರಿ 30ರವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ HIGH COURT ಮಧ್ಯಂತರ ಆದೇಶ ನೀಡಿದೆ.

What did the High Court bench say?: ಜೊತೆಗೆ, ಅರ್ಜಿದಾರರ ಪರ ವಕೀಲರು ಸೀತಾ ಸೊರೆನ್​ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏಳು ಮಂದಿ ನ್ಯಾಯಮೂರ್ತಿಗಳ ನೀಡಿರುವ ತೀರ್ಪು ಉಲ್ಲೇಖಿಸಿ, ವಿಧಾನಮಂಡಲದಲ್ಲಿ ನಡೆಯುವ ಶಾಸಕರ ನಡುವೆ ನಡೆಯುವ ಚರ್ಚೆಗಳು ಅವರಿಗೆ ಲಭ್ಯವಾಗಿರುವ ಹಕ್ಕಾಗಿದ್ದು, ಈ ಪ್ರಕ್ರಿಯೆಯಲ್ಲಿ ವಿನಾಯ್ತಿ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ” ಎಂದು ಪೀಠವು ಹೇಳಿತು.

”ಅರ್ಜಿದಾರರು ವಿಧಾನಪರಿಷತ್​ನಲ್ಲಿ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದ್ದಾಗಿದ್ದು, ಈ ಸಂಬಂಧ 2024ರ ಡಿಸೆಂಬರ್​ 19ರಂದು ದೂರು ದಾಖಲಾಗಿದೆ. ದೂರು ದಾಖಲಾಗುವುದಕ್ಕೂ ಮುನ್ನ ವಿಧಾನಪರಿಷತ್​ ಸಭಾಧ್ಯಕ್ಷರು ಆ ಕುರಿತ ವಿಚಾರಣಾ ಪ್ರಕ್ರಿಯೆ ಮುಕ್ತಾಯಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಮುಕ್ತಾಯಗೊಳಿಸಬಹುದೇ ಇಲ್ಲವೇ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಬಹುದೇ ಎಂಬುದಕ್ಕೆ ಸಂಬಂಧ ಸುಧೀರ್ಘ ವಿಚಾರಣೆ ನಡೆದು ಅದಕ್ಕೆ ಉತ್ತರಿಸಬೇಕಾಗಿದೆ” ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.

ಅಲ್ಲದೆ, ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿ ಆದೇಶಿಸಿತು.”ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ಎಸ್​ಪಿಪಿ, ಶಾಸನ ಸಭೆಯಲ್ಲಿ ಈ ರೀತಿಯ ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ಈ ಹಕ್ಕುಗಳು ಲಭ್ಯವಾಗುವುದಿಲ್ಲ. ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಪ್ರಕರಣದ ಕುರಿತ ವಿಷಯ ವಿಚಾರಣೆಗೆ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ್ದಾಗಿದ್ದು, ಪ್ರಕರಣವನ್ನು ಸ್ಪೀಕರ್​,

The argument was as follows: ಇದಕ್ಕೆ ಪೀಠ, ”ಘಟನೆ ನಡೆಸಿರುವುದು ವಿಧಾನಪರಿಷತ್​ನಲ್ಲಿಯೇ” ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು ”ಹೌದು” ಎಂದು ತಿಳಿಸಿದರು.ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ವಕೀಲರು, ”ಘಟನೆ ಶಾಸನ ಸಭೆಯಲ್ಲಿ ನಡೆದಿದ್ದಾಗಿದ್ದು, ಕಾರ್ಯಾಂಗ (ಪೊಲೀಸ​ರು) ಶಾಸಕಾಂಗದ ಕಾರ್ಯಗಳಿಗೆ ಪ್ರವೆಶಿಸಬಹುದೇ ಎಂಬ ಅಂಶ ಪರಿಶೀಲಿಸಬೇಕಾಗಿದೆ” ಎಂದು ತಿಳಿಸಿದರು.

ಸರ್ಕಾರಿ ವಕೀಲರನ್ನು ಉದ್ದೇಶಿಸಿದ ಪೀಠ, ”ಪ್ರಕರಣ ವಿಧಾನಪರಿಷತ್​ಗೆ ಸಂಬಂಧಿಸಿದ ವಿಚಾರವಾಗಿದೆ. ತನಿಖೆಯನ್ನು ಸಿಐಡಿಗೆ ವಹಿಸಿರುವುದು ಕಾನೂನಿಗೆ ವಿರುದ್ಧವಾಗಿದೆ. ಈ ಬಗ್ಗೆ ಸಭಾಪತಿಯೊಂದಿಗೆ ಚರ್ಚೆಸಲಾಗಿದೆಯೇ?” ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾರಿ ವಕೀಲರು, ”ಘಟನೆ ನಡೆದ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿರಲಿಲ್ಲ” ಎಂದು ಪೀಠಕ್ಕೆ ಮಾಹಿತಿ ನೀಡಿದರು.ರೆಕಾರ್ಡ್ ಆಗಿರುವುದಲ್ಲಿ ಅರ್ಜಿದಾರರು ಬಳಸಿದ್ದಾರೆ ಎನ್ನಲಾದ ಪದಗಳು ಬಹಿರಂಗಗೊಂಡಿಲ್ಲ.

ಹೀಗಾಗಿ ಸ್ಪೀಕರ್​ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ” ಎಂದು ವಿವರಿಸಿದರು.ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಪೀಠದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ”ನಮ್ಮ ಕಕ್ಷಿದಾರರು ಮಾತನಾಡಿರುವ ಕುರಿತು ಸ್ಪೀಕರ್​ ವಿಚಾರಣೆ ನಡೆಸಿದ್ದು, ಆರೋಪದಂತೆ ಏನೂ ನಡೆದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪೀಠ, ”ಅಧಿವೇಶನ ನಡೆಯಲಿ, ಇಲ್ಲವೇ ನಡೆಯದೇ ಇರಲಿ. ಶಾಸಕರಿಗೆ ಹಕ್ಕಿದೆ ಎಂದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದು ಎಂದು ಸಲಹೆ ನೀಡುವಿರೇ” ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು, ”ಸದನದ ಒಳಗೆ ಏನೇ ಮಾತನಾಡಿದರೂ ಅದಕ್ಕೆ ಶಾಸಕರಿಗೆ ವಿನಾಯ್ತಿ ಇರಲಿದೆ” ಎಂದು ತಿಳಿಸಿದರು.

The Chairman has no power to conduct inquiry because he is not in his position: ಆದ್ದರಿಂದ ಘಟನೆ ನಡೆದ ಸಂದರ್ಭದಲ್ಲಿ ಸಭಾಪತಿ ತಮ್ಮ ಸ್ಥಾನದಲ್ಲಿ ಇಲ್ಲದ ಕಾರಣ ವಿಚಾರಣೆ ನಡೆಸುವ ಅಧಿಕಾರ ಅವರಿಗೆ ಇರುವುದಿಲ್ಲ. ಸರ್ಕಾರವೇ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಅರ್ಜಿದಾರರು ಬಳಸಿರುವ ಪದಗಳನ್ನು ಸೆರೆಹಿಡಿದಿವೆ.

ಘಟನೆ ಸಂಬಂಧ ಧ್ವನಿಸುರಳಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ರವಾನಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ” ಎಂದು ಪೀಠಕ್ಕೆ ತಿಳಿಸಿದರು.ಈ ವೇಳೆ ದೂರಿನ ಸಂಬಂಧ ವಿವರಿಸಿದ ಸರ್ಕಾರಿ ವಕೀಲರು, ”ಘಟನೆ ನಡೆದ ದಿನ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ವಿಧಾನಪರಿಷತ್​ನಲ್ಲಿ ನಡೆದ ವಿರೋಧ ಪಕ್ಷಗಳ ಪ್ರತಿಭಟನೆಯಿಂದ ಸದನವನ್ನು ಮುಂದೂಡಲಾಗಿತ್ತು.

ಹೀಗಾಗಿ, ಸಭಾಪತಿ ತಮ್ಮ ಸ್ಥಾನದಲ್ಲಿರಲಿಲ್ಲ. ಅಲ್ಲದೆ, ಪ್ರಕರಣ ಬಿಎನ್​ಎಸ್​ನ ಸೆಕ್ಷನ್​ 79ರ (ಮಹಿಳೆ ಘನೆತೆಗೆ ಧಕ್ಕೆ) ಅಡಿಯಲ್ಲಿ ದಾಖಲಾಗಿದ್ದು, ಕ್ರಿಮಿನಲ್​ ಕೃತ್ಯ ಶಾಸಕರಿಗೆ ನೀಡಿರುವ ಹಕ್ಕು ಎಂಬುದಾಗಿ ವಿನಾಯ್ತಿ ಅಡಿಯಲ್ಲಿ ಬರಲಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ” ಎಂದು ವಿವರಿಸಿದರು.ಈ ವೇಳೆ ಪೀಠ, ”ಸಭಾಪತಿಗಳು ತಮ್ಮ ಸ್ಥಾನದಲ್ಲಿ ಇಲ್ಲ ಎಂದ ಮಾತ್ರಕ್ಕೆ ಏನು ಬೇಕಾದರೂ ವಿಚಾರಣೆ ನಡೆಸಬಹುದೇ” ಎಂದು ಮೌಖಿಕವಾಗಿ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

ಇದಕ್ಕೆ ಸರ್ಕಾರಿ ವಕೀಲರು, ”ಘಟನೆ ನಡೆದ ವೇಳೆ ಸದನವನ್ನು ಮುಂದೂಡಲಾಗಿದೆ. ಈ ವಿಷಯವನ್ನು ಸವಿವರವಾಗಿ ವಿಚಾರಣೆ ನಡೆಸಬೇಕಾಗಿದೆ. ವಾದ ಆಲಿಸಿದ ನ್ಯಾಯಪೀಠ, ಅಂತಿಮವಾಗಿ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.

ಇದನ್ನು ಓದಿರಿ : KAPIL SHARMA NET WORTH : 500 ರೂ. ಸಂಬಳ ಪಡೆಯುತ್ತಿದ್ದವರೀಗ 300 ಕೋಟಿಯ ಮಾಲೀಕ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

VIVO V50 LAUNCHED IN INDIA:ಪ್ರೀಮಿಯಂ ಸ್ಲಿಮ್ ಡಿಸೈನ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ, ಮಿಡಲ್ ರೇಂಜ್ನಲ್ಲಿ ಇದೇ ಟಾಪ್

Vivo V50 Launched in India News : ವಿವೋ ಇಂದು ತನ್ನ ಹೊಸ ಸ್ಮಾರ್ಟ್‌ಫೋನ್ VIVO V50 ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ....

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

New Delhi News: ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ...

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...