Hyderabad News:
ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ ಅವಕಾಶಕ್ಕಾಗಿ ಕಾಯುತ್ತಿರುವ THIEVESಗೆ ಅಂತಾನೇ ಮನೆ ಮಾಲೀಕನೊಬ್ಬ ವಿಶೇಷ ಪತ್ರವೊಂದನ್ನು ಬರೆದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಹಬ್ಬ ಹರಿದಿನಗಳು ಬಂದರೆ ಊರಿಗೆ ಹೋಗುವ ಸಂಭ್ರಮ ಸಾಮಾನ್ಯ ಜನರಲ್ಲಿ ಮನೆ ಮಾಡಿದರೆ, THIEVESಗೆ ಮಾಲೀಕರಿಲ್ಲದಾಗ ದರೋಡೆ ಮಾಡುವ ಉತ್ತಮ ಅವಕಾಶದ ಸಂದರ್ಭವೂ ಏರ್ಪಡುತ್ತದೆ. ಸಂಕ್ರಾಂತಿ ಸಂಭ್ರಮದ ಆಚರಣೆ ಜೊತೆಗೆ ಬುದ್ದಿವಂತಿಕೆ ಉಪಯೋಗಿಸಿರುವ ಮನೆ ಮಾಲೀಕ, ಹಬ್ಬದ ದಿನ ಖನ್ನ ಹಾಕುವ ವ್ಯರ್ಥ ಪ್ರಯತ್ನ ನಡೆಸದಂತೆ ಕೈ ಬರಹದ ಲೆಟರ್ವೊಂದನ್ನು ಬರೆದು ಮನೆಯ ಮುಂದೆ ಅಂಟಿಸಿ ಹೋಗಿದ್ದಾರೆ.
ಈ ಮೂಲಕ THIEVES ಹಣ ಒಡವೆ ಆಸೆಗೆ ವ್ಯರ್ಥ ಪ್ರಯತ್ನ ನಡೆಸದಂತೆ ಕಿವಿಮಾತನ್ನೂ ಕೂಡಾ ಹೇಳಲಾಗಿದೆ.ನಾವು ಸಂಕ್ರಾಂತಿಗೆಗೆ ಊರಿಗೆ ಹೋಗುತ್ತಿದ್ದೇವೆ. ಹೋಗುವಾಗ ಮನೆಯಲ್ಲಿದ್ದ ಆಭರಣ ಮತ್ತು ಹಣ ಕೊಂಡೊಯ್ಯುತ್ತಿದ್ದೇವೆ. ಹಾಗಾಗಿ ನಮ್ಮ ಮನೆಗೆ ಬರಬೇಡಿ. ನಿಮ್ಮ ಹಿತೈಷಿ ಎಂಬ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆಈ ನಿಟ್ಟಿನಲ್ಲಿ ಮನೆ ಮಾಲೀಕ ಮಾಡಿರುವ ಈ ಕ್ರಿಯಾತ್ಮಕ ಯೋಜನೆ ಹಾಗೂ ಚಾಲಕಿತನ ಪ್ರಶಂಸಗೆ ಅರ್ಹವಾಗಿದೆ.
ಇದು THIEVESಗೆ ಸೂಚನೆ ಜೊತೆಗೆ ಮನೆ ಮಾಲೀಕರು ಕೂಡ THIEVES ಎಣಿಸಿದಂತೆ ದಡ್ಡರಾಗಿರುವುದಿಲ್ಲ ಎಂಬುದನ್ನು ಸಾರಿದೆ.ಈ ರೀತಿಯ ವಿಚಿತ್ರ ಪತ್ರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ದೊರೆಯುತ್ತಿದೆ. ಹಬ್ಬದ ಸಂದರ್ಭದಲ್ಲಿ ಊರಿಗೆ ತೆರಳುವ ಮನೆಗಳನ್ನೇ ಗುರಿಯಾಗಿಸಿ, ಕೈ ಚಳಕ ತೋರುವ ಖದೀಮರ ಸಂಖ್ಯೆ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಪೊಲೀಸರ ಗಸ್ತಿನಿಂದ ಕಣ್ತಪ್ಪಿ ಮನೆ ಲೂಟಿ ಮಾಡುವ ಚೋರರು ಇದ್ದೇ ಇರುತ್ತಾರೆ.
ಇನ್ನು ಕಳ್ಳನೊಂದಿಗೆಯೇ ನೇರವಾಗಿ ಪತ್ರದ ಮೂಲಕ ಸಂಭಾಷಣೆಗೆ ಮುಂದಾದ ಮನೆ ಮಾಲೀಕನ ಈ ಕ್ರಿಯೆ ಹಾಸ್ಯಕ್ಕೆ ಮುಂದಾದರೂ, ಇದರ ಗಂಭೀರ ಆಲೋಚನೆಗೆ ಮೆಚ್ಚಲೇಬೇಕು ಎಂಬ ಮಾತುಗಳು ಕೇಳಿ ಬಂದಿದೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿರುವ ಈ ಪತ್ರ ಮನೆ ಮಾಲೀಕನೊಬ್ಬನ ಸರಿಯಾದ ಮುನ್ನೆಚ್ಚರಿಕೆಯ ಭದ್ರತೆಯಾಗಿದೆ. ಈ ರೀತಿಯ ಪ್ರಯತ್ನಗಳ ಮೂಲಕ ನೆರೆ ಹೊರೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ನಡುವೆ ತಮ್ಮ ಅಗೈರಿನಲ್ಲೂ ಭದ್ರತೆ ಏರ್ಪಾಡು ಮಾಡಿಕೊಳ್ಳುವ ಬುದ್ದಿವಂತಿಕೆ ಕ್ರಮವಾಗಿದೆ.
ಇದನ್ನು ಓದಿರಿ : PROTEIN RICH VEGETARIAN FOOD : ನೀವು ಸಸ್ಯಾಹಾರಿಯಾಗಿದ್ದರೆ ಯಾವ ಆಹಾರ ಸೇವಿಸಬೇಕು ಗೊತ್ತೇ?