ಕಡಬ: 2023 ನೇ ಸಾಲಿನ ಮುಂಗಾರು ವಿಳಂಬವಾದರೂ, ಅಬ್ಬರಿಸಿ ಬೊಬ್ಬಿರಿದಿದೆ. ರಾಜ್ಯದಲ್ಲಿಉಂಟಾದ ಅತಿವೃಷ್ಠಿ ಪ್ರವಾಹದಿಂದಾಗಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಮನೆಗಳ ಪುನರ್ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ನೀಡುವ ಪರಿಹಾರ ಮೊತ್ತವನ್ನು ರಾಜ್ಯ ಸರಕಾರ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
2023 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿಉಂಟಾದ ಅತಿವೃಷ್ಠಿ ಪ್ರವಾಹದಿಂದಾಗಿ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ನೀಡುವ ಪರಿಹಾರ ಮೊತ್ತವನ್ನು ರಾಜ್ಯ ಸರಕಾರ ಹೆಚ್ಚಿಸಿ ಆದೇಶ ಹೊರಡಿಸಿದೆ.
ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ದರ ಪ್ರಕಾರ ಶೇ. 75 ರಷ್ಟು ಹಾನಿಯಾದ ಮನೆಗೆ (ಎ ವರ್ಗ) ನಿಗದಿಯಾದ 120,000 ರೂ ಇದೆ, ರಾಜ್ಯ ಸರಕಾರದ ಪರಿಷ್ಕೃತ ಹೆಚ್ಚುವರಿ ದರ 3,80,000 ರೂ ಆಗಿದೆ, ಪರಿಷ್ಕೃತ ಒಟ್ಟು ಮೊತ್ತ 3,00,000 ಆಗಿದೆ.
ಶೇ. 25 ರಿಂದ 75 ರಷ್ಟು ತೀವ್ರ ಮನೆಹಾನಿಯಾದರೆ(ಬಿ1 ವರ್ಗ, ದುರಸ್ತಿ) ಎಸ್‌ಡಿಆರ್‌ಎಫ್/ ಎನ್‌ಡಿಆರ್‌ಎಫ್ ದರ 1,20,000 ರೂ, ರಾಜ್ಯ ಸರಕಾರದ ಹೆಚ್ಚುವರಿ ದರ 3,80,000 ರೂ, ಪರಿಷ್ಕೃತ ಮೊತ್ತ 3,00,000 ರೂ ಆಗಿರುತ್ತದೆ.
ಅತಿವೃಷ್ಠಿ, ಪ್ರವಾಹದಿಂದ ಮನೆಗಳು ಹಾನಿಯಾದಂತಹ ಕುಟುಂಬಗಳಿಗೆ ಕೇಂದ್ರದ ಎಸ್‌ಡಿಆರ್‌ಎಫ್/ ಎನ್‌ಡಿಆರ್‌ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರ ಪಾವತಿಸಲು ರಾಜ್ಯ ಸರಕಾರ ಮಂಜೂರಾತಿ ನೀಡಿ ಆದೇಶಿಸಿದೆ.
ಶೇ. 25 ರಿಂದ 75ರಷ್ಟು ತೀವ್ರ ಮನೆ ಹಾನಿ (ಬಿ2 ವರ್ಗ, ಕೆಡವಿ ಹೊಸದಾನಿ ನಿರ್ಮಿಸುವುದು) ಎಸ್‌ಡಿಆರ್‌ಎಫ್/ ಎನ್‌ಡಿಆರ್‌ಎಫ್ ದರ ಪ್ರಕಾರ 1,20,000 ರೂ, ರಾಜ್ಯ ಸರಕಾರದ ಹೆಚ್ಚುವರಿ ದರ 3,80,000 ರೂ, ಪರಿಷ್ಕೃತ ದರ 5,00,000 ರೂ ಆಗಿರುತ್ತದೆ. ಶೇ. 15 ರಿಂದ 25 ರಷ್ಟು ಭಾಗಶಃ ಮನೆ ಹಾನಿಯಾದರೆ (ಸಿವರ್ಗ) ಎಸ್‌ಡಿಆರ್‌ಎಫ್/ ಎನ್‌ಡಿಆರ್‌ಎಫ್ ದರ ಪ್ರಕಾರ 6500 ರೂ, ಹೆಚ್ಚುವರಿ ದರ 43,500 ರೂ, ಪರಿಷ್ಕೃತ ಮೊತ್ತ 50,000 ರೂ ಎಂದು ಸರಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.