ಕನ್ನಡ ಕಿರುತೆರೆ ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ನಿನ್ನೆ ರಾತ್ರಿ ಅಪಘಾತಕ್ಕೀಡಾಗಿದೆ. ಇದಕ್ಕೂ ಮುನ್ನ ಅನಾಥರಿಗೆ ಅನ್ನ ಹಾಕಿ ವಾಪಸ್ ಹೋಗುತ್ತಿದ್ದಾಗ ಮುದ್ದೇನಾಪಾಳ್ಯದಲ್ಲಿ ಆಕ್ಸಿಡೆಂಟ್ ಸಂಭವಿಸಿದೆ. ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ನಿನ್ನೆ ಭೇಟಿ ಕೊಟ್ಟಿದ್ದರು.
ಈ ವೇಳೆ ಭೇಟಿ ಕೊಟ್ಟು, ಊಟ ಬಡಿಸಿ, ಚೇರ್ ವ್ಯವಸ್ಥೆ ಮಾಡಿಸುತ್ತೇನೆ ಅಂತ ಭರವಸೆ ನೀಡಿದ್ದರು. ಜೊತೆಗೆ ನಿರಾಶ್ರಿತರ ಸೇವಾಶ್ರಮದಲ್ಲಿ ಇದ್ದವರ ಯೋಗ ಕ್ಷೇಮ ವಿಚಾರಿಸಿದ್ದರಂತೆ. ನಾಳೆ ರಿಲೀಸ್ ಆಗುತ್ತಿದ್ದ ಸಿನಿಮಾದ ಬಗ್ಗೆಯೂ ಮಾತಾಡಿದ್ದರು. ಇದೇ ವಿಚಾರದ ಬಗ್ಗೆ ಮಾಧ್ಯಮ ಒಂದರಲ್ಲಿ ಮಾತನಾಡಿದ ರಾನಿ ಸಿನಿಮಾ ನಿರ್ದೇಶಕ ಗುರುತೇಜ್ ಶೆಟ್ಟಿ, ನಾಳೆ ಸಿನಿಮಾ ರಿಲೀಸ್ ಆಗುವ ಸಲುವಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ವಿ. ಈ ವೇಳೆ ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ಊಟ ಕೊಡಲು ಹೋಗಿದ್ದರು. ಇದೇ ವೇಳೆ ದಾರಿ ಮಧ್ಯೆ ಮುಂಗುಸಿ ಬಂದಿದೆ. ಹೀಗಾಗಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಇದೇ ವೇಳೆ ಕಿರಣ್ ರಾಜ್ ಅವರು ಹಿಂದೆ ಕುಳಿತುಕೊಂಡು ವಿಡಿಯೋ ಎಡಿಟಿಂಗ್ ಮಾಡ್ತಿದ್ದರು. ಅಪಘಾತದವಾಗುತ್ತಿದ್ದಂತೆ ಅವರಿಗೆ ಜೋರಾಗಿ ಪೆಟ್ಟು ಬಿದ್ದಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾನು ನೋಡಿದಾಗ ಅವರಿಗೆ ಪ್ರಜ್ಞೆ ಇರಲಿಲ್ಲ. ಅಭಿಮಾನಿಗಳು ಗಾಬರಿ ಪಡಬೇಡಿ ಅಂತ ಹೇಳಿದ್ದಾರೆ.