Ratan Tata Death
ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಗಳಲ್ಲಿ ಒಬ್ಬರಾದ ರತನ್ ಟಾಟಾ. ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು ಸರಳ ಜೀವನ ನಡೆಸುತ್ತಿದ್ದ ಸರಳ ವ್ಯಕ್ತಿತ್ವದ ಕಾರ್ಪೊರೇಟ್ ವ್ಯಕ್ತಿ ೧೯೬೨ ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನ ಕಾರ್ನೆಲ್ ವಿವಿಯಿಂದ ಆರ್ಕಿಟೆಕ್ಟ್ ಇಂಜಿನಿಯರ್ ಪದವಿ ಪಡೆದುಕೊಂಡರು.
ರತನ್ ಟಾಟಾ ಮೊದಲಿಗೆ ಈಗಿನ ಟಾಟಾ ಮೋಟರ್ಸ್ ಕಂಪನಿ ಆದ ಟಾಟಾ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ ಲಿಮಿಟೆಡ್ ಕಂಪನಿಗೆ ಸೇರಿದರು. ಜನ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದ ರತನ್ ಟಾಟಾ ಅವರಿಗೆ NELCO (National Radio & Electronics Company) ಜವಾಬ್ದಾರಿಯನ್ನು ವಹಿಸಲಾಯಿತು. 1971ರಲ್ಲಿ ಹಾರ್ವರ್ಡ್ ವಿವಿಯಿಂದ ಅಡ್ವಾನ್ಸ್ ಮ್ಯಾನೇಜ್ಮೆಂಟ್ ಪ್ರೊಗ್ರ್ಯಾಮ್ ಮುಗಿಸಿದರು. ರತನ ಟಾಟಾ ಅವರ ಕನಸು ಟಾಟಾ ಮೋಟಾರ್ಸ್ ‘ಟಾಟಾ ಇಂಡಿಕಾ’ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಗುರಿ ಹೊಂದಿ ೧೯೯೮ ರಲ್ಲಿ ಯೋಜನೆ ಪೂರ್ತಿಗೊಳಿಸಿದರು.
ಕೇವಲ ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಸೀಮಿತವಾಗಿದ್ದ ನ್ಯಾನೋ ಕಾರುಗಳು ಮಧ್ಯಮವರ್ಗಕ್ಕೂ ಸಿಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ರತನ್ ಟಾಟಾ ಆರಂಭಿಸಿದ್ದ ನ್ಯಾನೋ ಕಾರು. ಒಂದು ಲಕ್ಷದ ಕಾರು ಎಂದು ಹೆಸರುವಾಸಿಯಾದ ನ್ಯಾನೋ ಕಾರು ಮಾರುಕಟ್ಟೆಗೆ ಬರುತ್ತಿದ್ದಂತೆ ಮಧ್ಯಮ ವರ್ಗವು ಸಹ ಮುಗಿಬಿದ್ದು ಖರೀದಿಸಿತ್ತು. ಈಗಲೂ ಟಾಟಾ ಕಂಪನಿಯ ಕಾರುಗಳು ಗುಣಮಟ್ಟದಿಂದಾಗಿಯೇ ಮನೆ ಮಾತಾಗಿದೆ.
2012ರಲ್ಲಿ ಟಾಟಾ ಸನ್ಸ್‌ನಿಂದ ಹೊರಬಂದಿದ್ದ ರತನ್ ಟಾಟಾ ಯುವ ಸಮೂಹದ ಸ್ಟಾರ್ಟಪ್‌ಗಳಿಗೆ ಹೂಡಿಕೆ ಮಾಡಲು ಶುರು ಮಾಡಿದ್ದರು. ಇದೇ ಟಾಟಾ ನೆರಳಲ್ಲೇ ಪೇಟಿಎಂ, ಓಲಾ ಎಲೆಕ್ಟ್ರಿಕ್, ಅರ್ಬನ್ ಕಂಪನಿ ಹೀಗೆ, ಹತ್ತು ಹಲವು ಸ್ಟಾರ್ಟಪ್ ಕಂಪನಿಗಳಿಗೆ ಹೂಡಿಕೆ ಮಾಡಿದ್ದರು. ಜೆಆರ್‌ಡಿ ಟಾಟಾ ಸ್ಥಾಪಿಸಿದ್ದ ಏರ್ ಇಂಡಿಯಾ ಕಂಪನಿ ಬಳಿಕ 1953ರಿಂದ ಭಾರತ ಸರ್ಕಾರದ ಅಧೀನದಲ್ಲಿತ್ತು. 2022ರಲ್ಲಿ 18 ಸಾವಿರ ಕೋಟಿ ಮೊತ್ತದ ಡೀಲ್‌ನಲ್ಲಿ ಏರ್ ಇಂಡಿಯಾ ಕಂಪನಿಯನ್ನ ಟಾಟಾ ಗ್ರೂಪ್ ಮರಳಿ ಖರೀದಿಸಿತ್ತು. ಟೆಟ್ಲಿ ಟೀ, ಬಿಗ್ ಬ್ಯಾಸ್ಕೆಟ್, ಸ್ಟಾರ್ ಬಕ್ಸ್, ಹೀಗೆ ನೂರಾರು ಕಂಪನಿಗಳನ್ನ ಖರೀದಿಸಿ, ಕೋಟ್ಯಂತರ ನೌಕರರ ಜೀವನಕ್ಕೆ ಆಧಾರ ಸ್ತಂಭವಾಗಿದ್ದರು. ಈಗ ಇಂತಹ ದೈತ್ಯ ಉದ್ಯಮಿಯನ್ನ ಕಳೆದುಕೊಂಡು ಟಾಟಾ ಗ್ರೂಪ್ ಅನಾಥವಾಗಿದೆ.