How Many Liters of Water to Drink: ಅತಿ ಹೆಚ್ಚು ನೀರು ಕುಡಿದರೆ ಅನೇಕ ತೊಂದರೆಗಳು ಬರುತ್ತವೆ. ನೀರನ್ನು ಹೊರತುಪಡಿಸಿ ಹಣ್ಣು, ತರಕಾರಿಗಳನ್ನು ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ನಮ್ಮ ದೇಹದಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಇರುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ನೀರು ಕುಡಿದರೆ ಸೌಂದರ್ಯ, ಆರೋಗ್ಯ ಹಾಗೂ ಫಿಟ್ ನೆಸ್ ಹೆಚ್ಚುತ್ತದೆ ಎನ್ನುವ ನಂಬಿಕೆಯಿಂದ ಕೆಲವು ಜನರು ಹೆಚ್ಚು ನೀರು ಕುಡಿಯುತ್ತಾರೆ.
ಹೆಚ್ಚು ನೀರು ಕುಡಿಯುವುದು ಒಳ್ಳೆಯದು. ಆದರೆ, ಅದನ್ನು ಮಿತವಾಗಿ ನೀರು ಕುಡಿಯುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕೆಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ. ಅತಿ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ. ಇದರಿಂದ ದಿನಕ್ಕೆ ಎಷ್ಟು ಲೀಟರ್ ನೀರು ಕುಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳೋಣ.
ಮಹಿಳೆಯರು ಪ್ರತಿದಿನ ಸರಾಸರಿ 2.7 ಲೀಟರ್ ನೀರು ಕುಡಿಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೆಲವರು ಇದಕ್ಕಿಂತ ಹೆಚ್ಚು ನೀರು ಕುಡಿಯುತ್ತಾರೆ. ಈ ಕಾರಣದಿಂದಾಗಿ, ಉಳಿದ ನೀರಿನಲ್ಲಿ ಸೋಡಿಯಂ ಸಾಂದ್ರತೆಯು ಮೂತ್ರಪಿಂಡಗಳಿಂದ ಹೊರಹಾಕಲ್ಪಡುತ್ತದೆ ಹಾಗೂ ರಕ್ತವನ್ನು ಪ್ರವೇಶಿಸುತ್ತದೆ.
ಅಂಗಾಂಶಗಳ ಊತದಿಂದ ಹೈಪೋನಾಟ್ರೀಮಿಯಾ ಉಂಟಾಗುತ್ತದೆ. ಕೆಲವೊಮ್ಮೆ ಈ ಉರಿಯೂತವು ಮೆದುಳಿನ ಅಂಗಾಂಶಗಳಲ್ಲಿಯೂ ಉಂಟಾಗಬಹುದು.
ಕೆಲವು ಸಂದರ್ಭಗಳಲ್ಲಿ ಮೂರ್ಛೆರೋಗದಂತಹ ಸಮಸ್ಯೆಗಳ ಜೊತೆಗೆ ಮಾರಣಾಂತಿಕವಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡುತ್ತಾರೆ ಆರೋಗ್ಯ ತಜ್ಞರು.
ಅನ್ನಲ್ಸ್ ಆಫ್ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ಅಂಡ್ ಮೆಟಾಬಾಲಿಸಂ (Annals of Pediatric Endocrinology & Metabolism) ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯ ತಿಳಿದುಬಂದಿದೆ. ಕೊರಿಯಾದ ಚೋಸುನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಡಾ. ಮಿನ್ ಎ ಜೂ (Chosun University School of Medicine in Korea Dr. Min A Joo) a case of symptomatic hyponatremia caused by excessive water intake ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.
ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ ಎಂಬ ಅಂಶವನ್ನು ಕೆಲವು ಲಕ್ಷಣಗಳ ಮೂಲಕ ತಿಳಿಯಬಹುದು ಎನ್ನುತ್ತಾರೆ ಸಂಶೋಧಕರು. ಜೊತೆಗೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಈ ಕೆಲವು ಲಕ್ಷಣಗಳನ್ನೂ ಕಂಡು ಬರುತ್ತವೆ. ಅವುಗಳು ತಲೆನೋವು, ಸ್ನಾಯು ದೌರ್ಬಲ್ಯ, ಹೊಟ್ಟೆನೋವು , ಹೊಟ್ಟೆ ಉಬ್ಬುವುದು, ವಾಂತಿ, ಬಾಯಾರಿಕೆ ,ಅಲಸ್ಯ ಹಾಗೂ ಆಯಾಸ , ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು ,ಮೂತ್ರವು ಸಂಪೂರ್ಣವಾಗಿ ಬಿಳಿ ಬಣ್ಣ/ ಪಾರದರ್ಶಕವಾಗಿರುತ್ತದೆ, ಕೈ, ಕಾಲು, ಮುಖದಲ್ಲಿ ಊತ ಕಂಡುಬರುತ್ತದೆ.