Hyderabad News:
ನಿಜವೆಂದು ತೋರುವ ಈ ನಕಲಿ ವೆಬ್ಸೈಟ್ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಬೇಕು, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಇಲ್ಲಿದೆ ಮಾಹಿತಿ.ಆದರೆ, ಇದುವೇ CYBER ವಂಚನೆಗೆ ಒಳಗಾಗುವ ರಹದಾರಿ ಆಗಿದೆ ಎಂಬುದನ್ನು ಕೂಡ ಅನೇಕ ವೇಳೆ ಮರೆತು ಬಿಡುತ್ತೇವೆ.ಯಾವುದೋ ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸಿಕೊಳ್ಳಲು ಕಸ್ಟಮರ್ ಕೇರ್ ನಂಬರ್ ಬೇಕಾದಾಗ ಅಥವಾ ಯಾವುದಾದರೂ ಬುಕ್ಕಿಂಗ್ ಮಾಡುವಾಗ ಆನ್ಲೈನ್ ಸೇವೆ ಸುಲಭವಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ. ಆನ್ಲೈನ್ಲ್ಲಿ ನೈಜವೆಂದು ತೋರುವ ಈ ನಕಲಿ ವೆಬ್ಸೈಟ್ಗಳು ಅನೇಕ ಬ್ರಾಂಡ್, ಸೇವಾ ಮಾಹಿತಿ ಅಥವಾ ಇ ಕಾಮರ್ಸ್ ಜಾಲತಾಣದ ಅಸಲಿ ಎಂಬಂತೆ ಕಾಣಬಹುದು.
ಈ ರೀತಿಯ ವಂಚನೆಗಳು ಹಬ್ಬದ ಋತುಮಾನದಲ್ಲಿ ಹೆಚ್ಚು ಎಂಬುದು ಗಮನದಲ್ಲಿರಲಿ.ಯಾವುದನ್ನೂ ಸರಿಯಾಗಿ ಪರಿಶೀಲಿಸದೇ ವಂಚನೆಗೆ ಒಳಗಾಗುತ್ತೇವೆ. ಪರಿಶೀಲನೆಗೆ ಒಳಪಡದ ಕಸ್ಟಮರ್ ಕೇರ್ ನಂಬರ್ ಅಥವಾ ಬುಕ್ಕಿಂಗ ಮಾಡಲು ವೆರಿಫೈಡ್ ಮಾಡದ ಆನ್ ಲೈನ್ ಸೈಟ್ಗಳಿಗೆ ವಿಸಿಟ್ ಮಾಡಿ ಕೋಟ್ಯಾಂತರ ರೂ ನಷ್ಟ ಮಾಡಿಕೊಳ್ಳಲಾಗುತ್ತಿದೆ.ಹಾಗಾದರೆ ಈ ನಿಜವೆಂದು ತೋರುವ ಈ ನಕಲಿ ವೆಬ್ಸೈಟ್ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಿ, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
Check the URL: ಅಸಲಿ ವೆಬ್ಸೈಟ್ಗಳ ಯುಆರ್ಎಲ್ https://, ಇದರಿಂದ ಪ್ರಾರಂಭವಾಗಿದ್ದು, ಇದು ಸಂಪರ್ಕವನ್ನು ಸುಭದ್ರಗೊಳಿಸುತ್ತದೆ. ಈ ಯುಆರ್ಎಲ್ ಅಲ್ಲಿ ಗೊತ್ತು ಆಗದಂತೆ ಸಣ್ಣ ಬದಲಾವಣೆ ನಡೆಸುವ ಮೂಲಕ ಅದು ಅಸಲಿಯೇ ಎಂಬುವಂತೆ ನಕಲಿ ಜಾಲತಾಣಗಳು ಭಾಸವಾಗುತ್ತದೆ. ಉದಾರಣೆಗೆ ಅದರಲ್ಲಿ ಒಂದು ಸಣ್ಣ ತಪ್ಪು ಅಕ್ಷರ ಅಥವಾ ಹೆಚ್ಚುವರಿ ಅಕ್ಷರಗಳನ್ನು ಬಳಕೆ ಮಾಡಲಾಗುತ್ತದೆ. ಇದು ನಕಲಿಯಾಗಿರುತ್ತದೆ.
Check the padlock: ಯುಆರ್ಎಲ್ ಆರಂಭದಲ್ಲಿ ಪ್ಯಾಡ್ಲಾಕ್ ಐಕಾನ್ಗಳು ಭದ್ರತೆ ಗುಣಮಟ್ಟವನ್ನು ಪ್ರದರ್ಶಿಸುತ್ತದೆ. ನಕಲಿ ವೆಬ್ಸೈಟ್ಗಳನ್ನು ಪರಿಶೀಲಿಸದೇ ಹೋದರೆ ಇವು ನಿಮ್ಮ ಡೇಟಾ ಕಳವು ಮಾಡಬಹುದು. ಅಸಲಿ ವೆಬ್ಸೈಟ್ಗಳು ಸುರಕ್ಷತಾ ಗುಣಮಟ್ಟವನ್ನು ಹೊಂದಿರುತ್ತದೆ.
Growing threat: ಬಳಕೆದಾರರ ನಂಬಿಕೆ ಮೂಡಿಸಲು ಇವರು ಬ್ರಾಂಡ್, ಶೋರೂಮ್ ಅಥವಾ ವಾಹನ ಡೀಲರ್ಶಿಪ್ನಂಹಹ ಸೇವೆ ನೀಡುವ ಜಾಲತಾಣದಂತೆ ಬಿಂಬಿಸಿಕೊಳ್ಳುತ್ತಾರೆ.ಸೈಬರ್ ಅಪರಾಧಗಳು ಆಗಾಗ್ಗೆ ಆನ್ಲೈನ್ ಶಾಪಿಂಗ್ ಮಾಡುವ, ಕಸ್ಟಮರ್ ಸರ್ವೀಸ್ ಎದುರು ನೋಡುವರು. ಪ್ರಯಾಣದ ಟಿಕೆಟ್ ರದ್ದು ಮಾಡುವಂತಹರನ್ನು ಗುರಿಯಾಗಿಸಿಕೊಂಡಿರುತ್ತದೆ.
Be warned:
ಈ ರೀತಿಯ ವಂಚನೆ ತಪ್ಪಿಸಿಲು ಈ ಅಂಶಗಳನ್ನು ಮರಿಬೇಡಿ.
ನೇರವಾಗಿ ಅಧಿಕೃತ ಕಂಪನಿಯ ವೆಬ್ಸೈಟ್ಗಳಿಗೆ ಮಾತ್ರವೇ ಭೇಟಿ ನೀಡಿ
ಬಹು ಮೂಲಗಳಿಂದ ಸಂಪರ್ಕ ಮಾಹಿತಿಗಳ ಕ್ರಾಸ್ ಚೆಕ್ ಮಾಡಿ.
ಅಪರಿಚಿತ ಅಥವಾ ಪರಿಶೀಲಿಸದ ಮೂಲದ ಲಿಂಕ್ ತಪ್ಪಿಸಿ
ದೊಡ್ಡ ಮಟ್ಟದ ನಷ್ಟ ತಪ್ಪಿಸಲು ಒಂದು ಸಣ್ಣ ಮುನ್ನೆಚ್ಚರಿಕೆ ಸಾಕು ಎಂಬುದನ್ನು ನಾವು ಮರೆಯಬಾರದು. ಆನ್ಲೈನ್ ಸೇವೆ ವಿಚಾರದಲ್ಲಿ ಎಚ್ಚರಿದಿಂದ ಇದ್ದು, ಅನುಮಾನಸ್ಪದ ವೆಬ್ಸೈಟ್ಗಳ ಕುರಿತು ಅಧಿಕಾರಿಗಳಿಗೆ ವರದಿ ಮಾಡುವಂತೆ ಸೈಬರ್ ತಜ್ಞರು ತಿಳಿಸಿದ್ದಾರೆ.
ಇದನ್ನು ಓದಿರಿ : COFFEE EXPORTS : 1.29 ಶತಕೋಟಿ ಡಾಲರ್ಗೆ ತಲುಪಿದ ಭಾರತದ ಕಾಫಿ ರಫ್ತು