spot_img
spot_img

HOW TO CONTROL BLOOD SUGAR LEVELS : ಟೈಪ್-2 ಡಯಾಬಿಟಿಸ್ಗೆ ಭಯಪಡಬೇಡಿ,

spot_img
spot_img

Share post:

How to Control Sugar Levels in Blood News :

ವಾಕಿಂಗ್ ಹಾಗೂ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಶುಗರ್​ ಲೆವಲ್ ನಿಯಂತ್ರಿಸಲು ಸಾಧ್ಯವಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.ಮಧುಮೇಹಕ್ಕೆ ಜೀವನಶೈಲಿ ಒಂದು ಕಾರಣವಾಗಿದ್ದು, ಪೋಷಕರ ಡಿಎನ್ಎ ಮತ್ತೊಂದು ಕಾರಣ ಆಗಿದೆ ಎಂದು ವೈದ್ಯರು ತಿಳಿಸುತ್ತಾರೆ.ಟೈಪ್ 2 SUGAR​ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಕಾಡುತ್ತಿದೆ. ಟೈಪ್ 2 SUGAR ರಕ್ತದಲ್ಲಿನ ಶುಗರ್​ ಲೆವಲ್​ ಅನ್ನು ಹೆಚ್ಚಿಸುತ್ತದೆ.

ಜೊತೆಗೆ ವಿವಿಧ ಕಾಯಿಲೆಗಳು ಬರಲು ಕಾರಣವಾಗುತ್ತದೆ.ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದಾಗ ಹಾಗೂ ದೇಹವು ಇನ್ಸುಲಿನ್ ಸರಿಯಾಗಿ ಬಳಸದಿದ್ದಾಗ ಟೈಪ್ 2 SUGAR​ ಸಮಸ್ಯೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ರಕ್ತದಲ್ಲಿನ ಶುಗರ್​ ಲೆವಲ್​ ನಿಯಂತ್ರಣದಲ್ಲಿಡಲು ತಜ್ಞರು ಸೂಚಿಸುವಂತಹ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Cortisol hormone: ಪ್ರತಿಯೊಬ್ಬರಿಗೂ ದೈಹಿಕ ಚಟುವಟಿಕೆಯ ಅಗತ್ಯವಿದೆ. ನಿಯಮಿತವಾದ ವಾಕಿಂಗ್​ ಹಾಗೂ ವ್ಯಾಯಾಮ ಮಾಡಬೇಕಾಗುತ್ತದೆ. ಇದರಿಂದ ಗ್ಲೂಕೋಸ್ ಉತ್ಪಾದನೆಯು ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಉತ್ಪಾದನೆ ನಮ್ಮಲ್ಲಿ ಹೆಚ್ಚಾದರೆ, ಅದು ರಕ್ತದಲ್ಲಿನ ಶುಗರ್​ ಲೆವಲ್​ ಹೆಚ್ಚಿಸುತ್ತದೆ. ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಬೇಕು. ಇದಕ್ಕಾಗಿ ಯೋಗ ಹಾಗೂ ಧ್ಯಾನ ಮಾಡಬೇಕಾಗುತ್ತದೆ.

Tips for staying hydrated: ಯಾವುದೇ ವಯಸ್ಸಿನವರು ಕನಿಷ್ಠ 8 ಗಂಟೆಗಳವರೆಗೆ ನಿದ್ದೆ ಮಾಡಬೇಕಾಗುತ್ತದೆ. ನಿದ್ರೆಯ ಸಮಯದಲ್ಲಿ ದೇಹವು ಹಾನಿಗೊಳಗಾದ ಜೀವಕೋಶಗಳನ್ನು ಪುನಃಸ್ಥಾಪಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.ವಿಶೇಷವಾಗಿ ದೇಹದಲ್ಲಿ ಸಾಕಷ್ಟು ನೀರು ಇದ್ದಾಗ ಪೋಷಕಾಂಶಗಳು ಹೀರಲ್ಪಡುತ್ತವೆ. ಇದರಿಂದ ರೋಗಗಳು ಬರುವುದಿಲ್ಲ. ಹೈಡ್ರೇಟೆಡ್ ಆಗಿರುವುದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

Food with low glycemic index: ಹೊಟ್ಟು ಹೊಂದಿರುವ ಧಾನ್ಯಗಳು, ಓಟ್ಸ್, ಬಾರ್ಲಿ ಹಾಗೂ ಕಾಳುಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ. ದಾಳಿಂಬೆ, ಸೇಬಿನಂತಹ ಹಣ್ಣುಗಳನ್ನು ಮಿತವಾಗಿ ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.ಅಧಿಕ ಫೈಬರ್ ಹಾಗೂ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರ ಸೇವಿಸಬೇಕು.

ಇವುಗಳ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ. 2017ರಲ್ಲಿ Journal of Nutritionನಲ್ಲಿ ಪ್ರಕಟವಾದ ‘ಆರೋಗ್ಯಕರ ವಯಸ್ಕರಲ್ಲಿ ರಕ್ತದಲ್ಲಿನ ಶುಗರ್​ ನಿಯಂತ್ರಣದ ಮೇಲೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹಣ್ಣುಗಳ ಪರಿಣಾಮ: ಯಾದೃಚ್ಛಿಕ ನಿಯಂತ್ರಿತ ಪ್ರಯೋಗ’ (The Impact of Low-Glycemic Index Fruits on Blood Sugar Control in Healthy Adults: A Randomized Controlled Trial) ಎಂಬ ಅಧ್ಯಯನದಲ್ಲಿ ಇದೇ ವಿಷಯವು ತಿಳಿದುಬಂದಿದೆ.

ಇದನ್ನು ಓದಿರಿ : IHOLE BUILDING : ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಐಹೊಳೆ ಬ್ಲಾಕ್

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...