Huaveli Re-Launched Ultimate Design News:
ಇತ್ತೀಚೆಗೆ ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಆದ್ರೆ ಇದರ ಬೆಲೆ ಎರಡು ರಾಯಲ್ ಎನ್ಫೀಲ್ಡ್ಗೆ ಸಮ. ರಾಯಲ್ ಎನ್‌ಫೀಲ್ಡ್ ಹಂಟರ್ 350ಯ ಎಕ್ಸ್ ಶೋ ರೂಂ ಬೆಲೆ 1.49 ಲಕ್ಷ ರೂ ಇದೆ.ಹುವಾವೇಯ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಕೊನೆಗೂ ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಇದನ್ನು ‘ಹುವಾವೇ ಮೇಟ್ ಎಕ್ಸ್‌ಟಿ ಅಲ್ಟಿಮೇಟ್ ಡಿಸೈನ್’ ಹೆಸರಿನಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿದೆ. 2024ರಲ್ಲಿ ತನ್ನ ದೇಶಿಯ ಮಾರುಕಟ್ಟೆಯಾದ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು.
Display: ಡಬಲ್ ಸೈಡ್ ಮಡಚಿದಾಗ 6.4-ಇಂಚಿನ LTPO OLED ಡಿಸ್ಪ್ಲೇಗೆ ಕುಗ್ಗುತ್ತದೆ. ಸ್ಕ್ರೀನ್ 90 Hz ವರೆಗಿನ ಅಡಾಪ್ಟಿವ್ ಡೈನಾಮಿಕ್ ರಿಫ್ರೆಶ್ ರೇಟ್, 240 Hz ವರೆಗಿನ ಟಚ್ ಸ್ಯಾಂಪ್ಲಿಂಗ್ ರೇಟ್, 1440 Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಮತ್ತು 382 PPI ಪಿಕ್ಸೆಲ್ ಡೆನ್ಸಿಟಿ ಹೊಂದಿದೆ.
PHONE ಪೂರ್ಣ ಓಪನ್ ಮಾಡಿದಾಗ 10.2-ಇಂಚಿನ ಹೊಂದಿಕೊಳ್ಳುವ LTPO OLED ಡಿಸ್ಪ್ಲೇ ಇದೆ. ಫೊಲ್ಡಬಲ್ ಡಿವೈಸ್ ಒಂದು ಸೈಡ್ ಮಡಚಿದರೆ 7.9-ಇಂಚಿನ LTPO OLED ಡಿಸ್ಪ್ಲೇ ಹೊಂದಿದೆ.
Chipset, Storage: ಆದರೆ ಯುಎಇ ಸೈಟ್‌ನಲ್ಲಿ PHONE 16GB RAM ಮತ್ತು 1TB ಸ್ಟೋರೇಜ್ನೊಂದಿಗೆ “ಮಾಡರ್ನ್ ಪ್ರೊಸೆಸರ್” ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.ಕಂಪನಿಯು ಚೀನಾದಲ್ಲಿ ಮೇಟ್ XT ಅಲ್ಟಿಮೇಟ್ ಡಿಸೈನ್ನಲ್ಲಿ ಕಿರಿನ್ 9010 ಚಿಪ್‌ಸೆಟ್ ಪರಿಚಯಿಸಿದೆ. ಆದರೂ ಈ ಗ್ಲೋಬಲ್ ಎಡಿಷನ್ನ ಚಿಪ್‌ಸೆಟ್‌ನ ವಿವರಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.
Camera:‘ಮೇಟ್ ಎಕ್ಸ್‌ಟಿ ಅಲ್ಟಿಮೇಟ್ ಡಿಸೈನ್’ ಟ್ರೈ-ಫೋಲ್ಡ್ PHONE ರಿಯರ್ ಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. OIS ಹೊಂದಿರುವ 50MP ಮೇನ್ ಸೆನ್ಸಾರ್ ಮತ್ತು f/1.2 ಮತ್ತು f/4.0 ನಡುವಿನ ವೇರಿಯಬಲ್ ಅಪರ್ಚರ್ ಹೊಂದಿದೆ.
f/2.2 ಅಪರ್ಚರ್ ಹೊಂದಿರುವ 12MP ಅಲ್ಟ್ರಾವೈಡ್ ಸೆನ್ಸರ್ ಮತ್ತು 5.5x ಆಪ್ಟಿಕಲ್ ಜೂಮ್, OIS ಮತ್ತು f/3.4 ಅಪರ್ಚರ್ ಬೆಂಬಲದೊಂದಿಗೆ 12MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಸಹ ಇದೆ. ಫ್ರಂಟ್ ಕ್ಯಾಮೆರಾ f/2.2 ಅಪರ್ಚರ್‌ನೊಂದಿಗೆ 8MP ಸೆನ್ಸಾರ್ ಹೊಂದಿದೆ.
Battery: 66W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಜೊತೆ 5,600mAh ಬ್ಯಾಟರಿ ಹೊಂದಿದೆ.
Operating System:ಇದಲ್ಲದೆ, ಈ PHONE ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ.’ಮೇಟ್ ಎಕ್ಸ್‌ಟಿ ಅಲ್ಟಿಮೇಟ್ ಡಿಸೈನ್’ PHONE EMUI 14.2 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನು ಓದಿರಿ :Hyderabad To Host International Art Exhibition – Know The Date, Venue And Timings