ಜಪಾನ್‌ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಶಿನ್ ಕಂಡು ಹಿಡಿದಿದ್ದಾರೆ.
ತಂತ್ರಜ್ಞಾನದಲ್ಲಿ ಜಪಾನ್ ಬಹಳಷ್ಟು ಮುಂದಿರುವ ದೇಶ. ಜಪಾನ್ ಅಲ್ಲಿ ಆಗಾಗ ವಿಶೇಷ ವಿಜ್ಞಾನಗಳ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇತ್ತೀಚಿಗೆ ನಡೆದ ಆವಿಷ್ಕಾರದ ಬಗ್ಗೆ ನೀವೆನಾದ್ರೂ ತಿಳ್ಕೊಂಡ್ರೆ, ಅಬ್ಬಾ! ಹೀಗೂ ಉಂಟೆ ಎನ್ನುತ್ತೀರಿ. ಈ ಆವಿಷ್ಕಾರ ನಿಜಕ್ಕೂ ಅಷ್ಟೊಂದು ಸೋಜಿಗವಾಗಿದೆ.
ಜಪಾನ್‌ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಶಿನ್ ಕಂಡು ಹಿಡಿದಿದ್ದಾರೆ. ಇದು AI ಚಾಲಿತ ಯಂತ್ರವಾಗಿದ್ದು, ಮನುಷ್ಯರನ್ನು 15 ನಿಮಿಷದಲ್ಲಿ ಸ್ನಾನ ಮಾಡಿಸಿ, ಕ್ಲೀನ್ ಮಾಡುತ್ತದೆ.
ಜಪಾನ್‌ನ ಎಂಜಿನಿಯರ್‌ಗಳು ‘ಹ್ಯೂಮನ್ ವಾಷಿಂಗ್ ಮೆಷಿನ್ ಆಫ್ ದಿ ಫ್ಯುಚರ್ ‘ ಅಥವಾ ‘ಮಿರೈ ನಿಂಗೆನ್ ಸೆಂಟಕುಕಿ’ ಯನ್ನು ಅನಾವರಣಗೊಳಿಸಿದ್ದಾರೆ. ಜಪಾನಿನ ಶವರ್ ಹೆಡ್ ಕಂಪನಿ ಒಸಾಕಾದ ಸೈನ್ಸ್ ಕಂ ಈ ಯಂತ್ರವನ್ನು ಆವಿಷ್ಕಾರ ಮಾಡಿದೆ.
ಜಪಾನೀಸ್ ಪ್ರಕಟಣೆಯ ಅಸಾಹಿ ಶಿಂಬುನ್‌ನ ವರದಿಯ ಪ್ರಕಾರ, ಈ ಯಂತ್ರ AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಕೆಲಸ ಮಾಡುತ್ತದೆ ಎಂದು ತಿಳಿಸಿದೆ. ಯಂತ್ರದೊಳಗೆ ವ್ಯಕ್ತಿಯೊಬ್ಬ ಹೋದಾಗ ಮೊದಲು ಆತನ ದೇಹದ ಚರ್ಮದ ಬಗ್ಗೆ ತಿಳಿದುಕೊಳ್ಳುತ್ತದೆ. ಅದರ ಆಧಾರದ ಮೇಲೆ ಸೋಪ್ ಆಯ್ಕೆ ಮಾಡುತ್ತದೆ. ಬಳಿಕ ದೇಹಕ್ಕೆ ಸ್ನಾನ ಮಾಡಿಸಿ ದೇಹವನ್ನು ಒಣಗಿಸಿಯೇ ಆಚೆ ಕಳಿಸುತ್ತದೆಯಂತೆ.
ವ್ಯಕ್ತಿ ಯಂತ್ರದ ಬಾತ್ ಟಬ್‌ನಲ್ಲಿ ಹೋಗಿ ಕುಳಿತರೆ ಮೊದಲು ಸ್ನಾನಕ್ಕೆ ಸೂಕ್ತವಾಗುವಷ್ಟು ಬೆಚ್ಚಗಿನ ನೀರಿನಿಂದ ಟಬ್ ತುಂಬಲು ಪ್ರಾರಂಭವಾಗುತ್ತದೆ. ಬಳಿಕ ಸಣ್ಣ ಗಾಳಿಯ ಗುಳ್ಳೆಗಳು ಶಕ್ತಿಯುತ ಒತ್ತಡದ ತರಂಗವನ್ನು ಉಂಟುಮಾಡುತ್ತವೆ. ಅದು ಚರ್ಮದ ಮೇಲಿರುವ ಕೊಳೆಯನ್ನು ತೆಗೆದುಹಾಕುತ್ತದೆ. ನೀರಿನಿಂದ ನೀವು ಶುದ್ಧವಾದ ಬಳಿಕ ನಿಮ್ಮನ್ನು ಒಣಗಿಸಲು ಮುಂದಾಗುತ್ತದೆ.
ಇದರಲ್ಲಿ ನೀವು ಎಷ್ಟು ಬಿಸಿ ಗಾಳಿ ಬರಬೇಕು ಎಂಬುದನ್ನು ಕೂಡ ಆಯ್ಕೆ ಮಾಡಬಹುದು. ಇಲ್ಲವೆ ಎಐ ಮೂಲಕ ಹೊರಗಿನ ತಾಪಮಾನಕ್ಕೆ ಸರಿಯಾಗಿ ಅದಾಗಿಯೇ ಹೊಂದಿಸಿಕೊಳ್ಳುತ್ತದೆ. ಇದರ ಮಾಹಿತಿಯನ್ನು ಒದಗಿಸುತ್ತವೆ. ಅಲ್ಲದೇ, ಈ ಯಂತ್ರವು ದೇಹವನ್ನು ಮಾತ್ರವಲ್ಲ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮನಸ್ಸಿಗೂ ಆಹ್ಲಾದ ಉಂಟಾಗುವಂತೆ ಮಾಡುತ್ತದೆ.
ಇದು ಮಾನವನ ಮನಸ್ಸನ್ನು ಶಾಂತಗೊಳಿಸಿ ಒತ್ತಡದಿಂದ ಮುಕ್ತಗೊಳಿಸುತ್ತದೆ. ಸ್ನಾನದ ಪ್ರಕ್ರಿಯೆ ಇದರಲ್ಲಿ ತ್ವರಿತವಾಗಿ ನಡೆಯುತ್ತದೆ. ಮಾತ್ರವಲ್ಲದೆ ಇದು ದೈಹಿಕ ಮತ್ತು ಮಾನಸಿಕ ಮಾನವನಿಗೆ ಉಲ್ಲಾಸವನ್ನು ನೀಡುತ್ತದೆ.
ಹ್ಯೂಮನ್ ವಾಷಿಂಗ್ ಮೆಷಿನ್‌ನ ಮೊದಲ ಯಂತ್ರವನ್ನು 50 ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಇದನ್ನು ಮೊದಲ ಬಾರಿಗೆ 1970ರಲ್ಲಿ ಸ್ಯಾನ್ಯೊ ಎಲೆಕ್ಟ್ರಿಕ್ ಕಂ. ಪ್ಯಾನಾಸೋನಿಕ್ ಹೋಲ್ಡಿಂಗ್ಸ್ ಕಾರ್ಪೊರೇಷನ್ ನಿರ್ಮಿಸಿತ್ತು. ಜಪಾನ್ ವರ್ಲ್ಡ್ ಎಕ್ಸ್‌ಪೊಸಿಷನ್‌ನಲ್ಲಿ ಪ್ರದರ್ಶಿಸಲಾಗಿತ್ತು.
ಇದು ಬಿಸಿ ನೀರು, ಸೂಕ್ಷ್ಮ ಬಬಲ್ ಗಳು, ಪ್ಲಾಸ್ಟಿಕ್ ಮಸಾಜ್ ಬಾಲ್‌ಗಳನ್ನು ಒಳಗೊಂಡಿತ್ತು. ಆದರೆ ಇದು ಕೆಲವೊಂದು ಕಾರಣಗಳಿಂದ ಮಾರುಕಟ್ಟೆಗೆ ಬರಲಿಲ್ಲ. ಇದೀಗ ಹೊಸದಾಗಿ ಅನಾವರಣಗೊಳಿಸಲಾದ ಹ್ಯೂಮನ್ ವಾಷಿಂಗ್ ಮೆಷಿನ್ ವಿಶ್ವದ ಗಮನ ಸೆಳೆದಿದೆ.
ಹ್ಯೂಮನ್ ವಾಷಿಂಗ್ ಮೆಷಿನ್ ನಲ್ಲಿ ಸ್ನಾನ ಮಾಡಲು ಇಚ್ಛಿಸುವವರಿಗೆ ಕಂಪನಿಯು ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಕಾಯ್ದಿರಿಸುವ ಅವಕಾಶವನ್ನೂ ನೀಡುತ್ತಿದೆ.
ಈ ಯಂತ್ರವನ್ನು ಸಿದ್ಧಪಡಿಸಿರುವ ಜಪಾನ್‌ನ ಸೈನ್ಸ್ ಕೋ ಕಂಪನಿ, 2025ರಲ್ಲಿ ಒಸಾಕಾ ಕನ್ಸಾಯ್ನಲ್ಲಿ ನಡೆಯಲಿರುವ ಎಕ್ಸ್ಪೋದಲ್ಲಿ ಮೊದಲು 1 ಸಾವಿರ ಜನರಿಗೆ ಪ್ರಾಯೋಗಿಕವಾಗಿ ಸ್ನಾನ ಮಾಡಿಸುವ ಮೂಲಕ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಿದೆಯಂತೆ. 1 ಸಾವಿರ ಜನರಿಗೆ ಸ್ನಾನ ಮಾಡಿಸಿ ಅವರಿಂದ ಬಂದ ಪ್ರತಿಕ್ರಿಯೆ ಆಧಾರದ ಮೇಲೆ ಮತ್ತಷ್ಟು ಯಂತ್ರಗಳನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಚಿಸಿದೆ.