Hyderabad One Day Tour News:
ನೀವು HYDERABADನಲ್ಲಿರುವ ಪ್ರಸಿದ್ಧ ಸ್ಥಳಗಳನ್ನು ನೋಡಲು ಬಯಸುತ್ತೀರಾ? ವಾರಾಂತ್ಯದಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸ್ವಲ್ಪ ಮೋಜು ಮಸ್ತಿ ಮಾಡಲು ಬಯಸುವಿರಾ? ಹಾಗಾದ್ರೆ, ತೆಲಂಗಾಣ ಪ್ರವಾಸೋದ್ಯಮವು ನಿಮಗಾಗಿ ಗುಡ್ನ್ಯೂಸ್ ನೀಡಿದೆ.
ಹೌದು, ಒಂದೇ ದಿನದಲ್ಲಿ ಇಡೀ HYDERABAD ನಗರವನ್ನು ಅತ್ಯಂತ ಕಡಿಮೆ ದರದ ಪ್ಯಾಕೇಜ್‌ನಲ್ಲಿ ಘೋಷಣೆ ಮಾಡಲಾಗಿದೆ. ಪ್ರವಾಸದ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳೋಣ.ಐತಿಹಾಸಿಕ ಸ್ಮಾರಕಗಳು, ಪ್ರಾಚೀನ ಅರಮನೆಗಳು, ರಾಜಮನೆತನ ಪ್ರತಿಬಿಂಬಿಸುವ ಕೋಟೆಗಳು, ರುಚಿಕರವಾದ ಬಿರಿಯಾನಿಗೆ HYDERABAD ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಅನೇಕ ಜನರು ಸಾಧ್ಯವಾದಾಗಲೆಲ್ಲಾ ಇಲ್ಲಿ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ‘ HYDERABAD ಸಿಟಿ ಹೆರಿಟೇಜ್ ಕಮ್ ಮ್ಯೂಸಿಯಂ ಟೂರ್’ ಎಂಬ ಪ್ರವಾಸದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಪ್ರವಾಸದ ಸೌಲಭ್ಯವು ಪ್ರತಿದಿನ ಲಭ್ಯವಿದೆ. ಈ ಪ್ಯಾಕೇಜ್‌ನಲ್ಲಿ, ನೀವು ಬಿರ್ಲಾ ಮಂದಿರ, ಚೌಮಹಲ್ ಅರಮನೆ, ಚಾರ್ಮಿನಾರ್, ಮೆಕ್ಕಾ ಮಸೀದಿ, ಲಾಡ್ ಬಜಾರ್‌ನಲ್ಲಿ ಶಾಪಿಂಗ್ ಹಾಗೂ ಇನ್ನೂ ಹೆಚ್ಚಿನ ಸ್ಥಳಗಳನ್ನು ವೀಕ್ಷಿಸಿ ಆನಂದಿಸಬಹುದು. ಎಸಿ ಮತ್ತು ನಾನ್ ಎಸಿ ಬಸ್‌ಗಳ ಮೂಲಕ ಪ್ರಯಾಣ ಮಾಡಬಹುದು.
If you go on Friday, you will not see:ಶುಕ್ರವಾರ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವ ಬದಲು, ನೀವು ನೆಹರು ಪ್ರಾಣಿಶಾಸ್ತ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಈ ಒಂದು ದಿನದ ಪ್ರವಾಸವು ಪ್ರತಿದಿನ ಲಭ್ಯವಿದೆ. ಆದರೆ, ನೀವು ಶುಕ್ರವಾರ ಹೋದರೆ ನಗರದ ಎಲ್ಲಾ ವಸ್ತು ಸಂಗ್ರಹಾಲಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆ ದಿನ ಚೌಮಹಲ್ ಅರಮನೆ, ಸಾಲಾರ್ ಜಂಗ್ ವಸ್ತುಸಂಗ್ರಹಾಲಯ ಮತ್ತು ನಿಜಾಮ್ ವಸ್ತುಸಂಗ್ರಹಾಲಯಗಳು ಮುಚ್ಚಿರುತ್ತವೆ.
Tour Fares:ಹೈದರಾಬಾದ್ ನಗರ ಒಂದು ದಿನದ ಪ್ರವಾಸದ ಭಾಗವಾಗಿ ಎಸಿ ಮತ್ತು ಎಸಿ ಅಲ್ಲದ ಬಸ್‌ಗಳು ಲಭ್ಯವಿರುತ್ತವೆ. ಎಸಿ ಬಸ್‌ನಲ್ಲಿ ವಯಸ್ಕರಿಗೆ ₹500 ಹಾಗೂ ಮಕ್ಕಳಿಗೆ ₹400 ಪಾವತಿಸಬೇಕು. ನಾನ್ ಎಸಿ ಬಸ್ ಆಗಿದ್ದರೆ, ವಯಸ್ಕರು ₹380 ಹಾಗೂ ಮಕ್ಕಳು ₹300 ಪಾವತಿಸಬೇಕಾಗುತ್ತದೆ. ಪ್ರವಾಸಿಗರು ಆಹಾರ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವೇಶ ಟಿಕೆಟ್‌ಗಳನ್ನು ಅವರೇ ಪಾವತಿಸಬೇಕಾಗುತ್ತದೆ.
ಇದನ್ನು ಓದಿರಿ :DEEPIKA PADUKONE:ಒತ್ತಡದ ಕುರಿತು ಪೋಷಕರಲ್ಲಿ ಮನಬಿಚ್ಚಿ ಮಾತನಾಡಿ