WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Washington, USA News:
ಅಧ್ಯಕ್ಷರೇ, ಮರು ಚುನಾವಣೆಗೆ ಸ್ಪರ್ಧಿಸದಿರುವ ನಿಮ್ಮ ನಿರ್ಧಾರಕ್ಕೆ ನೀವು ವಿಷಾದಿಸುತ್ತೀರಾ? ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೈಡನ್ ಅವರನ್ನು ಪ್ರಶ್ನಿಸಲಾಯಿತು. ಮಾಧ್ಯಮಗಳ ಈ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹಾಗೆ ಯೋಚಿಸುವುದಿಲ್ಲ.
ಆದರೆ, TRUMP ಅವರನ್ನು ಸೋಲಿಸಬಹುದಿತ್ತು, ಕಮಲಾ ಹ್ಯಾರಿಸ್ ಕೂಡಾ TRUMPಅವರನ್ನ ಪರಾಜಯಗೊಳಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ ಎಂದರು.ಕಳೆದ ನವೆಂಬರ್ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಡೊನಾಲ್ಡ್ TRUMP ಅವರನ್ನು ಸೋಲಿಸುತ್ತಿದ್ದೆ ಎಂದು ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಒಗ್ಗಟ್ಟನ್ನು ಕಾಪಾಡುವ ನಿಟ್ಟಿನಲ್ಲಿ ಸ್ಪರ್ಧೆಯಿಂದ ಅರ್ಧದಲ್ಲೇ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.