India vs Pakistan, ICC Champions Trophy-2025:
2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಉಭಯ ತಂಡಗಳು ಎದುರುಬದುರಾಗಿದ್ದವು. ಇದೀಗ 15 ತಿಂಗಳ ನಂತರ ಎರಡೂ ತಂಡಗಳು ಪರಸ್ಪರ ಸೆಣಸಲಿವೆ. ICC CHAMPIONS TROPHY 2025 ಇದೇ ತಿಂಗಳು, ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕ್ ನಡುವೆ ಹೈ ವೋಲ್ಟೇಜ್ ಮ್ಯಾಚ್ ನಡೆಯಲಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಆದರೆ, ಭಾರತ ಪಾಕ್ಗೆ ತೆರಳಲು ಹಿಂದೇಟು ಹಾಕುತ್ತಿರುವ ಕಾರಣ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ.
ICC CHAMPIONS TROPHY 2025 ಭಾರತ ಆಡುವ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಎ ಗ್ರೂಪ್ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ ಇವೆ. ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಿರುವ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ರದ್ದಾಗಿ ವರ್ಷಗಳೇ ಕಳೆದಿವೆ. ಸದ್ಯ, ಇತ್ತಂಡಗಳು ಐಸಿಸಿ ಆಯೋಜಿತ ವಿಶ್ವಕಪ್ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
Ticket Soldout:
ಭಾರತ-ಪಾಕ್ ನಡುವಿನ ಮಹತ್ವದ ಪಂದ್ಯಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ.
ಒಂದೂವರೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಟಿಕೆಟ್‌ಗಳಿಗಾಗಿ ಆನ್‌ಲೈನ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದು, ಟಿಕೆಟ್ ಸಿಗದೆ ನಿರಾಶರಾಗಿದ್ದಾರೆ. ಈ ಮೈದಾನದಲ್ಲಿ 25,000 ಸಾವಿರ ಜನರು ಮಾತ್ರ ಕುಳಿತುಕೊಳ್ಳುವ ಸಾಮರ್ಥ್ಯವಿದ್ದ ಕಾರಣ ಹಲವಾರು ಜನರಿಗೆ ಟಿಕೆಟ್ ಸಿಗಲಿಲ್ಲ.
The ticket price is as follows:
- ಪ್ಲಾಟಿನಂ ವಿಭಾಗದ ಟಿಕೆಟ್‌ಗಳು 2,000 ದಿರ್ಹಮ್‌ಗಳು ಅಂದರೆ ಭಾರತೀಯ ರೂಪಾಯಿಯಲ್ಲಿ ₹47,434.
- ಗ್ರ್ಯಾಂಡ್ ಲೌಂಜ್ ವಿಭಾಗದ ಟಿಕೆಟ್‌ಗಳು 5,000 ದಿರ್ಹಮ್‌ಗಳು (₹1.8 ಲಕ್ಷ) ಆಗಿದ್ದರೂ ಅವು ಕೂಡಾ ಬೇಗನೆ ಮಾರಾಟವಾದವು.
India’s matches are as follows:
- ಮೊದಲ ಪಂದ್ಯ ಬಾಂಗ್ಲಾದೇಶ ವಿರುದ್ದ ಫೆ.20ರಂದು.
- ಪಾಕಿಸ್ತಾನ ವಿರುದ್ಧ ಫೆ.23ರಂದು.
- ನ್ಯೂಜಿಲೆಂಡ್ ವಿರುದ್ದ ಗುಂಪು ಹಂತದ ಕೊನೆಯ ಪಂದ್ಯ ಮಾ.2ರಂದು.
ಇದನ್ನು ಓದಿರಿ : Meet BabyAlpha And BooBoo, The AI Pets Young Chinese Are Buying For Emotional Relief