Hyderabad News:
ICC CHAMPIONS TROPHY ಮೊದಲೇ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ವೇಗದ ಬೌಲರ್ ಈ ಸರಣಿ ಆಡುವುದು ಅನುಮಾನ ಎನ್ನಲಾಗುತ್ತಿದೆ.ಪಾಕಿಸ್ತಾನ ಇದರ ಆತಿಥ್ಯ ವಹಿಸಿಕೊಂಡಿದೆ. ಭಾರತ ಹೊರತು ಪಡಿಸಿ ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲಿದೆ. ಫೆಬ್ರವರಿ 19ರಿಂದ ಪ್ರತಿಷ್ಠಿ ICC CHAMPIONS TROPHY ಪ್ರಾರಂಭವಾಗಲಿದೆ.
ಒಟ್ಟು 15 ದಿನಗಳ ಕಾಲ ನಡೆಯಲಿರುವ ಈ ಸರಣಿಯಲ್ಲಿ ಭಾರತ ಸೇರಿ 8 ತಂಡಗಳು ಭಾಗವಹಿಸುತ್ತಿವೆ.ಆದ್ರೆ ICC CHAMPIONS TROPHY ಆರಂಭಕ್ಕೂ ಮುನ್ನವೇ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಭಾರತದ ಸ್ಟಾರ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಈ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.ಈ ಸರಣಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಫೆ.20 ರಂದು ಆಡಲಿದೆ. ನಂತರ ಫೆ.23ಕ್ಕೆ ಪಾಕಿಸ್ತಾನ, ಮಾರ್ಚ್ 2ಕ್ಕೆ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.ಆದ್ರೆ ಭದ್ರತಾ ದೃಷ್ಟಿಯಿಂದಾಗಿ ಭಾರತ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.
ಅಂದರ ಭಾರತ ಆಡುವ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ನಡೆಯಲಿವೆ. ಒಂದು ವೇಳೆ ಭಾರತ ಫೈನಲ್ ತಲುಪುವಲ್ಲಿ ವಿಫಲವಾದ್ರೆ ಅಂತಿಮ ಪಂದ್ಯವನ್ನು ಪಾಕಿಸ್ತಾನದಲ್ಲೇ ಆಡಲಾಗುತ್ತದೆ.ಇದೇ ಕಾರಣಕ್ಕಾಗಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯಿಂದಲೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಸಧ್ಯ ಅವರ ಬೆನ್ನು ನೋವಿನ ಸಮಸ್ಯೆ ಗ್ರೇಡ್1 ಹಂತದಲ್ಲಿದೆ.
ಸಧ್ಯ ಅವರು ಇದರಿಂದ ಚೇತರಿಸಿಕೊಳ್ಳಲು 3 ವಾರಗಳ ಸಮಯ ಬೇಕಾಗುತ್ತದೆ ಎಂದು ವರದಿ ಆಗಿದೆ.ಹೌದು, ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಬುಮ್ರಾ ಕೊನೆಯ ಪಂದ್ಯದಲ್ಲಿ ಬೆನ್ನಿನ ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದ ಅರ್ಧದಲ್ಲೇ ಮೈದಾನವನ್ನು ತೊರೆದಿದ್ದರು.ಒಂದು ವೇಳೆ ಬುಮ್ರಾ ಅವರ ಸಮಸ್ಯೆ ಗ್ರೇಡ್ 2 ಎಂದಾದರೇ ಕನಿಷ್ಠ 6 ವಾರಗಳ ಕಾಲ ಕ್ರಿಕೆಟ್ನಿಂದ ಹೊರ ಉಳಿಯಲಿದ್ದಾರೆ.
ICC CHAMPIONS TROPHY ಆರಂಭಕ್ಕೂ ಮೊದಲು ಬುಮ್ರಾಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂಪೂರ್ಣವಾಗಿ ಚೇತರಿಸಿಕೊಂಡು ಫಿಟ್ನೆಸ್ ಹೊಂದಿದ್ದರೆ ಮಾತ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗಿಯಾಗಲಿದ್ದಾರೆ.
England series : ICC CHAMPIONS TROPHYಗೂ ಮೊದಲು ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಇದರಲ್ಲಿ ಉಭಯ ತಂಡಗಳ ನಡುವೆ 5 ಏಕದಿನ ಪಂದ್ಯ ಮತ್ತು 3 ಟಿ20 ಪಂದ್ಯಗಳು ನಡೆಯಲಿ. ಈ ಸರಣಿಯು ಜನವರಿ 22 ರಿಂದ ಶುರವಾಗಲಿದೆ.
ಇದನ್ನು ಓದಿರಿ : LPG CONNECTIONS : ಗೃಹಬಳಕೆ ಎಲ್ಪಿಜಿ ಸಂಪರ್ಕಗಳ ಸಂಖ್ಯೆ ದಶಕದಲ್ಲಿ ದ್ವಿಗುಣ