Jammu Kashmir News:
ಜಮ್ಮುವಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಸ್ಪೋಟ ಸಂಭವಿಸಿರುವುದನ್ನು ವೈಟ್ ನೈಟ್ ಕಾರ್ಪ್ಸ್ ದೃಢಪಡಿಸಿದೆ. IED BLAST NEAR LOC ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಲಾಲಿಯಾಲಿ ಅಖ್ನೂರ್ ಸೆಕ್ಟರ್ನಲ್ಲಿ ಗಡಿ ಗಸ್ತು ನಡೆಯುತ್ತಿದ್ದ ವೇಳೆ ಶಂಕಿತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಸೇನಾ ಪಡೆಗಳು ಈ ಪ್ರದೇಶದಲ್ಲಿ ನಿಯಂತ್ರಣ ಸಾಧಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಹುತಾತ್ಮರಾದ ಇಬ್ಬರು ಶೌರ್ಯಶಾಲಿ ಸೈನಿಕರ ಸರ್ವೋಚ್ಚ ತ್ಯಾಗಕ್ಕೆ ವೈಟ್ ನೈಟ್ ಕಾರ್ಪ್ಸ್ ವಂದಿಸುತ್ತದೆ ಮತ್ತು ಗೌರವ ಸಲ್ಲಿಸುತ್ತದೆ ಎಂದು ಹೇಳಿದೆ.
ಜಮ್ಮು ವಲಯದ ಗಡಿ ನಿಯಂತ್ರಣ ರೇಖೆ IED BLAST NEAR LOC ಬಳಿ ಮಂಗಳವಾರ ಸಂಭವಿಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಜಮ್ಮುವಿನ ಅಖ್ನೂರ್ ಸೆಕ್ಟರ್ನ ಲಾಲಿಯಾಲಿಯಲ್ಲಿ ಸೇನಾ ಸಿಬ್ಬಂದಿ ಗಡಿಯ ಬಳಿ ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಸೇನೆ ತಿಳಿಸಿದೆ.
IED BLAST NEAR LOC ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಇಂದು ಬೆಳಗ್ಗೆ ಅಖ್ನೂರ್ ಸೆಕ್ಟರ್ನಲ್ಲಿ ತುಕ್ಕು ಹಿಡಿದ ಮೋರ್ಟಾರ್ ಶೆಲ್ ಒಂದನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ.
ನಮಂದರ್ ಗ್ರಾಮದ ಬಳಿಯ ಪ್ರತಾಪ್ ಕಾಲುವೆಯಲ್ಲಿ ತುಕ್ಕು ಹಿಡಿದ ಶೆಲ್ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಎಎನ್ಐ ವರದಿ ಮಾಡಿದೆ. ಭಯೋತ್ಪಾದಕರು ಇರಿಸಿದ್ದ ಐಇಡಿಯಿಂದ ಸ್ಫೋಟ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.
ಇದನ್ನು ಓದಿರಿ : Turkish President Erdogan To Visit Pakistan