ಇತ್ತೀಚಿಗೆ ಯುವಕರ ಗಮನ ಮೆದುಳನ್ನು ಚುರುಕಾಗಿಸುವ ಕೆಲವೊಂದು ಪ್ರಶ್ನೆಗಳು ಮೆದುಳನ್ನು ಸಕ್ರಿಯಗೊಳಿಸುವ ಕಡೆಗೆ ಎಂಬುದು ತಪ್ಪಿಲ್ಲ.
ಇತ್ತೀಚಿನ ರೆಡ್ಟಿಟ್ ಪೋಸ್ಟ್ ಕೂಡ ಇದೇ ಅಂಶಕ್ಕೆ ಪುಷ್ಟಿ ನೀಡುವಂತಿದ್ದು ಮೆದುಳಿಗೆ ಸವಾಲು ಹಾಕುವ ರೀತಿಯಲ್ಲಿ ಬಳಕೆದಾರರಿಗೆ ಸವಾಲೊಡ್ಡಿದೆ.
ಜೆನಿಸಿಸ್ ಕ್ಯಾಪಿಟಲ್ ಗ್ರೂಪ್ ಸಿಇಒ ಡಿನೊ ಡಿಯೋನೆ ತಮ್ಮ ಸಂಸ್ಥೆಯ ಉದ್ಯೋಗ ಸಂದರ್ಶನದ ವೇಳೆಯಲ್ಲಿ ಡಿನೊ ಪ್ರತಿಯೊಬ್ಬ ಉದ್ಯೋಗಾಂಕ್ಷಿಗೂ ಈ ಮೆದುಳಿಗೆ ಕೆಲಸ ನೀಡುವ ಪ್ರಶ್ನೆಯನ್ನು ಕೇಳಿರುವುದಾಗಿ ತಿಳಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು ನಿಮಗೆ ಉದ್ಯೋಗ ಬೇಕಾದರೆ, ಸರಿಯಾದ ಉತ್ತರ ನೀಡಲು 3 ಸೆಕೆಂಡ್‌ಗಳಿವೆ.
ಮೆದುಳಿಗೆ ಕೆಲಸ ಕೊಡುವ ಈ ಪ್ರಶ್ನೆ ಗಣಿತ ವಿಷಯವಾಗಿದ್ದು 3*3-3/3+3, ಜೀನಿಯಸ್‌ಗೆ ಮಾತ್ರ ಎಂಬ ಬರಹ ಹೊಂದಿದೆ. ಇದೊಂದು ಸರಳವಾದ ಅಷ್ಟೇ ಟ್ರಿಕ್ಕಿಯಾದ ಸಮೀಕರಣವಾಗಿದ್ದು ಸಾಮಾಜಿಕ ತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಪೋಸ್ಟ್ ಅಪ್‌ಲೋಡ್ ಆಗಿದ್ದಾಗಿನಿಂದ 2.8 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದ್ದು 3.1 ಸಾವಿರಕ್ಕಿಂತ ಹೆಚ್ಚಿನ ಕಾಮೆಂಟ್‌ಗಳನ್ನು ಪಡೆದಿದೆ.
ತ್ವರಿತವಾಗಿ ಯೋಚಿಸಲು ಇದೊಂದು ಉತ್ತಮ ವಿಧಾನವಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಉಲ್ಲೇಖಿಸಿದ್ದಾರೆ. 3 ಸೆಕೆಂಡ್‌ಗಳಲ್ಲಿ ಈ ಗಣಿತದ ಸಮೀಕರಣಕ್ಕೆ ಉತ್ತರಿಸಲು ಖಂಡಿತ ನನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಕಾಮೆಂಟ್‌ಗಳು ಬರಲಾರಂಭಿಸುತ್ತಿದ್ದಂತೆ ಹಲವಾರು ಬಳಕೆದಾರರು ತಮ್ಮ ತಮ್ಮ ಕೆಲವೊಂದು ಪರಿಹಾರಗಳೊಂದಿಗೆ ಬಂದಿದ್ದು, ಕೆಲವರು ಸರಿಯಾದ ಉತ್ತರ ನೀಡಿದರೆ ಇನ್ನು ಕೆಲವರು ಸೋತಿದ್ದಾರೆ.
ಒಬ್ಬ ಬಳಕೆದಾರರು ಇದಕ್ಕೆ ಉತ್ತರ ನನಗೆ ತಿಳಿದಿದೆ ಇದರ ಸರಿಯಾದ ಉತ್ತರ 9 ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ನಾನು 5 ಸೆಕೆಂಡ್‌ಗಳ ನಂತರ ಇದಕ್ಕೆ ಉತ್ತರಿಸಲು ಸಾಧ್ಯವಾಗದೇ ಸೋತು ಬಿಟ್ಟೆ, ಗಣಿತ ನನಗೆ ಒಗ್ಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now