ಧಾರವಾಡ: ಮೂರು ವರ್ಷದ ಹಿಂದೆ ಸಾವಾಗಿ ಅಸ್ಥಿಪಂಜರವಾಗಿ ಸಿಕ್ಕ ವ್ಯಕ್ತಿಯ ಪ್ರಕರಣಕ್ಕೆ ಈಗ ತಿರುವು ಸಿಕ್ಕಿದೆ. ಮೃತ ಚಂದ್ರಶೇಖರನ ತಾಯಿ ಹಾಗೂ ಸಹೋದರರು ಪತ್ತೆಯಾಗಿದ್ದಾರೆ. ಮಾತ್ರವಲ್ಲದೇ ತನ್ನ ಪುತ್ರನು ಅನಾರೋಗ್ಯದಿಂದ ಸಾವಾಗಿಲ್ಲ. ಇದು ಮರ್ಡರ್ ಎಂದು ಶಂಕೆ ವ್ಯಕ್ತಪಡಿಸಿ, ಮೂವರ ಮೇಲೆ ಧಾರವಾಡ (Dharwad) ವಿದ್ಯಾಗಿರಿಯ ಪೋಲಿಸ್ ಠಾಣೆಯಲ್ಲಿ ಮೃತ ಚಂದ್ರಶೇಖರ್ ತಾಯಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದಲ್ಲಿ ನಟಿ ಸನ್ನಿ ಲಿಯೋನ್?
ಕಳೆದ ತಿಂಗಳು ಜುಲೈ 13 ಕ್ಕೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು, ಕಾಣೆಯಾದ ವ್ಯಕ್ತಿಯ ದೂರಿನ ತನಿಖೆಯ ಭಾಗವಾಗಿ ಧಾರವಾಡ ಮಾಳಮಡ್ಡಿಯಲ್ಲಿನ ಮನೆಯೊಂದರ ಬಾಗಿಲು ಮುರಿದು ನೋಡಿದ್ದರು. ಅಲ್ಲಿ ಆ ಮನೆ ಮಾಲೀಕ ಮಲಗಿದಲ್ಲಿಯೇ ಸತ್ತು ಅಸ್ಥಿಪಂಜರವಾಗಿದ್ದು ಪತ್ತೆಯಾಗಿತ್ತು. ಆ ವ್ಯಕ್ತಿ ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತೇ.?
ಮೃತನ ಪತ್ನಿಯ ಸೋದರಿಯ ಮಗ ರಾಣೇಬೆನ್ನೂರಿನ ಯಶವಂತ ಪಾಟೀಲ ಎಂಬಾತನೇ ಈ ಚಂದ್ರಶೇಖರ್ ಕಾಣೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕೋವಿಡ್ ಅವಧಿಯಲ್ಲಿ 3 ವರ್ಷಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಆತ ಹೇಳಿಕೊಂಡಿದ್ದ. ತನ್ನ ಕಾಕನಿಗೆ ತಾನು ಬಿಟ್ಟರೆ ಬೇರೆ ಯಾರೂ ಸಂಭಂಧಿಕರೇ ಇಲ್ಲ ಎಂದು ಹೇಳಿ ಎಲ್ಲ ಅಂತ್ಯಕ್ರಿಯೆಗಳನ್ನು ಪೂರ್ಣಗೊಳಿಸಿದ್ದ.
ಇದನ್ನೂ ಓದಿ : ಚಿಕ್ಕೋಡಿ : ಕೋಮುವಾದವೇ ತುಂಬಿರುವ ಸಮಾಜದಲ್ಲಿ ಮುಸ್ಲಿಂ ಬಾಂಧವರು ಮಾಡಿದ ಈ ಕಾರ್ಯ ಶ್ಲಾಘನಿಯ..!
ಮೃತನ ತಾಯಿ ಮಲ್ಲವ್ವ ಕೊಟ್ಟಿರುವ ದೂರಿನಲ್ಲಿ 3ರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಅದರಲ್ಲಿ ಈ ಹಿಂದೆ ತನ್ನ ಚಿಕ್ಕಪ್ಪ ಕಾಣೆಯಾಗಿದ್ದಾನೆಂದು ದೂರು ದಾಖಲಿಸಿದ್ದ ಯಶವಂತ ಪಾಟೀಲ, ಸೇರಿದಂತೆ ಅಸ್ಥಿಪಂಜರ ಸಿಕ್ಕ ಮನೆಯ ಪಕ್ಕದಲ್ಲಿಯೇ ಅದೇ ಆಸ್ಥಿಗೆ ಸಂಬಂಧಿಸಿ ಹಲವಾರು ವರ್ಷಗಳಿಂದ ಮನೆಯಲ್ಲಿ ಭೋಗ್ಯದಲ್ಲಿರೋ ಶಹಾಬುದ್ದೀನ್ ಬಳ್ಳಾರಿ ಹಾಗೂ ಮೃತನ ಪತ್ನಿಯ ಇನ್ನೋರ್ವ ಸೋದರಿ ಸಾಂಗ್ಲಿಯ ವಿನೋದಾ ಉತ್ತಪ್ಪನ್ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :Sandalwood Queen ರಮ್ಯಾ ಮದುವೆ ಫಿಕ್ಸ್.? ಹುಡುಗ ಯಾರು ಗೊತ್ತಾ.?
ಚಂದ್ರಶೇಖರ ಕುಟಂಬ ಧಾರವಾಡ ತಾಲ್ಲೂಕಿನ ಕವಲಗೇರಿ ಗ್ರಾಮದಲ್ಲಿದ್ದು, ಚಂದ್ರಶೇಖರ ಸೆಕ್ಯೂರಿಟಿ ಕೆಲಸಕ್ಕೆ ಅಂತಾ ಬಂದು ಧಾರವಾಡದಲ್ಲಿದ್ದರು. ಮಾಳಮಡ್ಡಿಯ ಸುರೇಖಾಳನ್ನು ಮದುವೆಯಾಗಿದ್ದ. 2015ರಲ್ಲಿ ಸುರೇಖಾ ಮೃತಪಟ್ಟ ಬಳಿಕ, ಹೆಂಡತಿಯ ಹೆಸರಿನಲ್ಲಿದ್ದ ಮನೆ ಮತ್ತು ಜಾಗವೆಲ್ಲ ಚಂದ್ರಶೇಖರ ಹೆಸರಿಗೆ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪತ್ನಿಯ ಸೋದರಿಯ ಮಗನಾದ ಯಶವಂತ ಮತ್ತು ಇನ್ನೋರ್ವ ಸೋದರಿ ವಿನೋದಾ ಆಗಾಗ ಬಂದು ಜಗಳ ತೆಗೆಯುತ್ತಿದ್ದರಂತೆ. ಇದಕ್ಕೆ ಈ ಮನೆಯ ಪಕ್ಕದಲ್ಲಿಯೇ ಇರೋ ಇನ್ನೊಂದು ಮನೆಯಲ್ಲಿ ಲೀಜ್‌ನಲ್ಲಿರುವ ಶಹಾಬುದ್ಧೀನ ಸಹ ಸಾಥ್ ನೀಡಿದ್ದಾನೆ. ಇವರ ವಿರುದ್ದ ಚಂದ್ರಶೇಖರ 2021ರ ಮಾರ್ಚ್‌ನಲ್ಲಿ ವಿದ್ಯಾಗಿರಿ ಠಾಣೆಗೆ ದೂರು ಸಹ ದಾಖಲಿಸಿದ್ದ.
ಇದನ್ನೂ ಓದಿ : ಬೆಳಗಾವಿ : ಹುಡುಗಿಯರೇ ಹುಷಾರ್! ಸ್ವಲ್ಪ ಯಾಮಾರಿದರೂ ನಿಮ್ಮನ್ನ ಬೆತ್ತಲಾಗಿಸಿ ಹಣ ಕೀಳುತ್ತಾರೆ ಈ ಖದೀಮರು
ಇದಾದ ಬಳಿಕವೇ ಚಂಧ್ರಶೇಖರ ತಾಯಿ ಮತ್ತು ಸೋದರರ ಭೇಟಿಗೂ ಬಾರದೇ ಕಾಣೆಯಾಗಿದ್ದನ್ನು. ಆತ ಊರುರು ತಿರುಗುವ ಖಯಾಲಿ ಇರೋದಕ್ಕೆ ಎಲ್ಲಿಗೋ ಹೋಗಿರಬಹುದು ಎಂದು ಸುಮ್ಮನಿದ್ದರಂತೆ. ಆದರೆ ಈಗ ಆತ ಸತ್ತು ಹೋಗಿರೋದು ಗೊತ್ತಾಗಿ, ಕಾನೂನು ಹೋರಾಟ ಆರಂಭಿಸುತ್ತಿದ್ದಾರೆ.
ಇದನ್ನೂ ಓದಿ : ಅಥಣಿ : ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಬಸ್; ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ
ಚಂದ್ರಶೇಖರ ಮನೆಯಲ್ಲಿಯೇ ಸಾವಾಗಿದ್ದರೇ, ಮೃತದೇಹ ಕೊಳೆತಾಗ ವಾಸನೆಯೇ ಬರಲಿಲ್ಲವಾ? ಅನ್ನೋದು ಆಸ್ಥಿಪಂಜರ ಸಿಕ್ಕಾಗಿನಿಂದಲೂ ಪೊಲೀಸರಿಗೂ ಕಾಡುತ್ತಿದ್ದಪ್ರಶ್ನೆಯಾಗಿತ್ತು. ಈಗ ಆತನ ತಾಯಿ ಮತ್ತು ಸೋದರರು ಇರೋದು ಸಹ ದೃಢಪಟ್ಟಿದ್ದು, ಈಗ ಕೊಲೆಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಾರಾ ಎನ್ನುವುದನ್ನು ನೋಡಬೇಕಿದೆ.