ಬೆಳಗಾವಿ: ಉತ್ತರ ಕರ್ನಾಟಕದ ರೈತರ ಜೀವನಾಡಿಯಾಗಿರುವ ಮಲಪ್ರಭಾ ಜಲಾಶಯದಲ್ಲಿ ಸದ್ಯ 37 ಟಿಎಂಸಿ ನೀರು ಸಂಗ್ರಹ ಈ ವರ್ಷ ಕುಡಿಯುವ ನೀರಿಗಾಗಲಿ ಅಥವಾ ಕೃಷಿ ಕಾರ‍್ಯಗಳಿಗಾಗಲಿ ನೀರಿನ ತೊಂದರೆ ಆಗುವುದಿಲ್ಲಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದರು.
ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯಕ್ಕೆ ಮಂಗಳವಾರ ಗಂಗಾಪೂಜೆ, ಬಾಗಿನ ಅರ್ಪಣೆ ಮಾಡಿ ಅವರು ಮಾತನಾಡಿದರು.
ರೈತರ ಬೇಡಿಕೆಗೆ ತಕ್ಕಂತೆ, ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲುವೆಗೆ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು.
ಜಲಾಶಯ ನಿರ್ಮಿಸಿ 52 ವರ್ಷಗಳಾಗಿದ್ದು, ಈ ಅವಧಿಯಲ್ಲಿ 10 ಬಾರಿ ಭರ್ತಿಯಾಗಿದೆ.
ಜಲಾಶಯ ಅಭಿವೃದ್ಧಿ ಜತೆಗೆ ಕೆಆರ್‌ಎಸ್ ಮಾದರಿಯಲ್ಲಿಗುಡ್ಡದ ಬಯಲು ಪ್ರದೇಶದಲ್ಲಿ ಉದ್ಯಾನವನ, ಪ್ರವಾಸಿಗರನ್ನು ಆಕರ್ಷಿಸುವಂಥ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕರ ಭರವಸೆ.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ”ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನಾಲ್ಕು ಏತ ನೀರಾವರಿ ಯೋಜನೆಗಳನ್ನು ನವೀಕರಣಗೊಳಿಸಿಬೇಕಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿಆದಷ್ಟು ಬೇಗನೆ ಈ ಕಾರ್ಯ ಆರಂಭಿಸಲಾಗುವುದು,” ಎಂದರು.
ಬಾದಾಮಿ ಶಾಸಕ ಬಿ.ಬಿ ಚಿಮ್ಮನಕಟ್ಟಿ, ಸವದತ್ತಿ ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಮುನವಳ್ಳಿ ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಮೃಣಾಲ್ ಹೆಬ್ಬಾಳಕರ, ರವೀಂದ್ರ ಯಲಿಗಾರ, ಸದಾಶಿವಗೌಡ ಪಾಟೀಲ, ಉಮೇಶ ಬಾಳಿ, ಚಂದ್ರು ಜಂಬ್ರಿ, ವಿ.ಎಸ್.ಮಧುಕರ, ಅಶೋಕ ವಾಸನದ, ವಿವೇಕ ಮುದಿಗೌಡರ, ರಮೇಶ ಮೊಕಾಶಿ, ಎಸ್.ಬಿ.ಮಲ್ಲಿಗವಾಡ, ಮಲ್ಲುಜಕಾತಿ, ಅಶ್ವತ ವೈದ್ಯ, ಮಹಾಂತೇಶ ನಡನಳ್ಳಿ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಾಳು ಹೊಸಮನಿ ನಿರೂಪಿಸಿ ವಂದಿಸಿದರು.
ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಶಾಸಕ ವಿಶ್ವಾಸ ವೈದ್ಯ ನವೀಕೃತ ಪ್ರವಾಸಿ ಮಂದಿರದ ಕಟ್ಟಡವನ್ನು ಉದ್ಘಾಟಿಸಿದರು.