ಮೈಸೂರು: ಕನ್ನಡ ಕಂಠೀರವ ಡಾ ರಾಜ್ ಕುಮಾರ್ ಅವರಿಗೆ ಚಿತ್ರದಲ್ಲಿ ಹಾಡುವಂತೆ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರಿಗೆ ಸೂಚಿಸಿದ್ದು ನಾನೇ ಎಂಬ ವಿಷಯವನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಳಯರಾಜ ಹೇಳಿದ್ದಾರೆ.
ದಸರಾ ಮ್ಯೂಸಿಕಲ್ ನೈಟ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿ ಕೆ ವೆಂಕಟೇಶ್ ಅವರು 1974 ರಲ್ಲಿ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಲು ಪಿಬಿ ಶ್ರೀನಿವಾಸ್ ಅಥವಾ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಆದ್ಯತೆ ನೀಡಿದ್ದರು.
ಡಾ. ರಾಜ್ ಕುಮಾರ ಅವರು ಹಾಡುವುದು ಸೂಕ್ತ ತಿಳಿದು ಅವಕಾಶ ನೀಡಲು ಸೂಚಿಸಿದೇವು. ಆರಂಭದಲ್ಲಿ ಪಿ ಬಿ ಶ್ರೀನಿವಾಸ್ ಅವರ ಜೀವನದ ಆಧಾರವಾಗಿದ್ದ ಗಾಯನವನ್ನು ಕಸಿದುಕೊಳ್ಳಲು ರಾಜ್ ಕುಮಾರ್ ಅವರಿಗೆ ಇಷ್ಟವಿಲ್ಲದೆ ಆರಂಭದಲ್ಲಿ ಒಪ್ಪಲು ಹಿಂದೇಟು ಹಾಕಿ ಕೊನೆಗೆ ಒತ್ತಾಯಪೂರ್ವಕವಾಗಿ ಒಪ್ಪಿಕೊಂಡರು.
ಕೊಲ್ಲೂರು ಮೂಕಾಂಬಿಕಾ ಭಕ್ತಿಗೀತೆಯೊಂದಿಗೆ ತಮ್ಮ ಕಾರ್ಯಕ್ರಮ ಆರಂಭಿಸಿದ ಇಳಯರಾಜಾ ಗೀತಾ, ನಮ್ಮೂರ ಮಂದಾರ ಹೂವೆ ಮತ್ತು ತಮ್ಮ ಚಿತ್ರದ ಕೆಲವು ಹಿಟ್ ಹಾಡುಗಳನ್ನು ಹಾಡಿದರು.
1973 ರಲ್ಲಿ ಮೈಸೂರಿನ ಟೌನ್ ಹಾಲ್ನಲ್ಲಿ ಪಿಬಿ ಶ್ರೀನಿವಾಸ್, ಸುಶೀಲಾ, ಜಾನಕಿ ಮತ್ತು ಇತರರೊಂದಿಗೆ ಪೂರ್ಣ ಪ್ರಮಾಣದ ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ವಾದಕನಾಗಿದ್ದೆ ಎಂದರು. ಇಂದು ನವರಾತ್ರಿ ಉತ್ಸವದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾರ್ಯಕ್ರಮ ನೀಡಲು ಚಾಮುಂಡೇಶ್ವರಿ ದೇವಿ ನನ್ನನ್ನು ಕರೆದಿರುವುದು ಸಂತಸ ತಂದಿದೆ ಎಂದರು.
ತಮ್ಮ ಹಾಡುಗಳು ಹಿಟ್ ಆದ ಕನ್ನಡ ಚಲನಚಿತ್ರಗಳಿಗೆ ಹೇಗೆ ಟ್ಯೂನ್ಗಳನ್ನು ಸಂಯೋಜಿಸಿದರು ಎಂಬುದನ್ನು ವಿವರಿಸಿದರು. ಇಳಯರಾಜ ಕನ್ನಡದ ಹಿಟ್ ಹಾಡುಗಳನ್ನು ಹಾಡಿದ್ದು ಮಾತ್ರವಲ್ಲದೆ, ಗೋಷ್ಠಿಯಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ.
ತಮಿಳಿನ ಹಿಟ್ ಹಾಡುಗಳನ್ನು ಹಾಡದಿರುವುದಕ್ಕೆ ಇಂದು ಕ್ಷಮೆಯಿರಲಿ ಏಕೆಂದರೆ ಇದು ದಸರಾ ಕಾರ್ಯಕ್ರಮ ಮತ್ತು ಕರ್ನಾಟಕದ ಕನ್ನಡದ ಕಾರ್ಯಕ್ರಮ ಎಂದು ಕನ್ನಡ ಪ್ರೀತಿ ಮೆರೆದರು.
ಹೊಟೇಲ್ನಲ್ಲಿ ಭಾವಚಿತ್ರ ನೀಡಿ ಗೌರವಿಸಿದ ಅಭಿಮಾನಿಗಳನ್ನು ಭೇಟಿ ಮಾಡಿದರು. ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮೈಸೂರು ನಗರದ ದೇವಾಲಯವೊಂದಕ್ಕೆ ಭೇಟಿ ನೀಡಿದರು.