New Delhi News:
ಕೇಂದ್ರ ಸರ್ಕಾರ ಮಂಡಿಸಿದ ನೂತನ ಐಟಿ ವಿಧೇಯಕವನ್ನು ಪರಿಶೀಲಿಸಲು ಪಾಂಡಾ ಅವರ ನೇತೃತ್ವದಲ್ಲಿ 31 ಸದಸ್ಯರ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಏನ್ ಮಾಡುತ್ತೆ ಈ ಸಮಿತಿ, ಇಲ್ಲಿದೆ ಮಾಹಿತಿ ಈ ಸಮಿತಿಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ 17 ಸದಸ್ಯರು ಸೇರಿದಂತೆ 31 ಸಂಸದರು ಇರಲಿದ್ದಾರೆ.
ಎನ್‌ಡಿಎ ಸಂಸದರಲ್ಲಿ ಬಿಜೆಪಿಯಿಂದ 14 ಮತ್ತು ಟಿಡಿಪಿ, ಜೆಡಿಯು ಮತ್ತು ಶಿವಸೇನೆಯ ತಲಾ ಒಬ್ಬರು ಸೇರಿದ್ದಾರೆ. INCOME TAX BILL PANEL 2025 ಅನ್ನು ಪರಿಶೀಲಿಸಲು ಕೇಂದ್ರ ಸರ್ಕಾರ, ಶುಕ್ರವಾರ ಲೋಕಸಭೆಯ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಬಿಜೆಪಿ ಸಂಸದ ಬೈಜಯಂತ್ ಜಯ್ ಪಾಂಡಾ ಅವರನ್ನು ನೇಮಕ ಮಾಡಲಾಗಿದೆ.
All the members of this committee are:
ಪಾಂಡಾ ಜೊತೆಗೆ ನಿಶಿಕಾಂತ್ ದುಬೆ, ಪಿಪಿ ಚೌಧರಿ, ಭರ್ತೃಹರಿ ಮಹತಾಬ್ ಮತ್ತು ಅನಿಲ್ ಬಲುನಿ ಬಿಜೆಪಿಯ ಸದಸ್ಯರಾಗಿದ್ದಾರೆ. ವಿರೋಧ ಪಕ್ಷದ ಸಂಸದರಲ್ಲಿ ಕಾಂಗ್ರೆಸ್‌ನ ದೀಪೇಂದರ್ ಸಿಂಗ್ ಹೂಡಾ, ಟಿಎಂಸಿಯ ಮಹುವಾ ಮೊಯಿತ್ರಾ, ಎನ್‌ಸಿಪಿ (ಎಸ್‌ಪಿ)ಯ ಸುಪ್ರಿಯಾ ಸುಳೆ ಮತ್ತು ಆರ್‌ಎಸ್‌ಪಿಯ ಎನ್‌ಕೆ ಪ್ರೇಮಚಂದ್ರನ್ ಸೇರಿದ್ದಾರೆ. ವಿರೋಧ ಪಕ್ಷಗಳಾಗಿರುವ ಕಾಂಗ್ರೆಸ್‌ನಿಂದ ಆರು, ಸಮಾಜವಾದಿ ಪಕ್ಷದ ಇಬ್ಬರು ಮತ್ತು ಡಿಎಂಕೆ, ಟಿಎಂಸಿ, ಶಿವಸೇನೆ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಮತ್ತು ಆರ್‌ಎಸ್‌ಪಿಯ ತಲಾ ಒಬ್ಬರು ಸೇರಿದಂತೆ 13 ಸಂಸದರನ್ನು ಹೊಂದಿವೆ. INCOME TAX BILL PANEL ಒಬ್ಬ ಸಂಸದ, ರಿಚರ್ಡ್ ವನ್‌ಲಾಲ್‌ಮಂಗೈಹ ಅವರು ಮಿಜೋರಾಂನ ಆಡಳಿತಾರೂಢ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ನಿಂದ ಇರಲಿದ್ದಾರೆ.
Notice to submit report during Monsoon session:
ಗುರುವಾರ ಲೋಕಸಭೆಯಲ್ಲಿ ವಿಧೇಯಕ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದ ಆಯ್ಕೆ ಸಮಿತಿಗೆ ಮಸೂದೆಯ ಕರಡನ್ನು ಒಪ್ಪಿಸುವಂತೆ ಸ್ಪೀಕರ್ ಓಂ ಬಿರ್ಲಾ ಬಿರ್ಲಾ ಅವರಿಗೆ ಮನವಿ ಮಾಡಿದ್ದರು.
ಮಾನ್ಸೂನ್ ಅಧಿವೇಶನದ ಮೊದಲ ದಿನದೊಳಗೆ ಸಮಿತಿಯು ತನ್ನ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. INCOME TAX BILL PANEL ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನವು ಏಪ್ರಿಲ್ 4 ರಂದು ಮುಕ್ತಾಯಗೊಳ್ಳಲಿದೆ ಮತ್ತು ಜುಲೈ ಮೂರನೇ ವಾರದಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗುವ ಸಾಧ್ಯತೆಗಳಿವೆ.
Coke for unnecessary explanation, language simplification:
ಪುಟಗಳ ಸಂಖ್ಯೆಯನ್ನು 622ಕ್ಕೆ ಇಳಿಸಲಾಗಿದೆ. ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ ಅರ್ಧಕ್ಕಿಂತ ಹೆಚ್ಚು ಭಾಗವು ತಿದ್ದುಪಡಿಗಳು, ಬದಲಾವಣೆಗಳು ಮತ್ತು ಸೇರ್ಪಡೆಗಳಿಂದ ಕೂಡಿದ್ದವು ಅವುಗಳನ್ನ ಎಲ್ಲವನ್ನು ತೆಗೆದು ಹಾಕಲಾಗಿದೆ. 1961 ರಲ್ಲಿ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದಾಗ, ಅದರ ಪುಟಗಳ ಸಂಖ್ಯೆ 880 ಆಗಿತ್ತು. ಅದನ್ನು ಈಗ 622 ಪುಟಗಳಿಗೆ ಇಳಿಕೆ ಮಾಡಲಾಗಿದೆ.
ಬಹು ನಿರೀಕ್ಷಿತ ವಿಧೇಯಕವು ಹಿಂದಿನ ತೆರಿಗೆ ಕಾಯಿದೆಯಲ್ಲಿದ್ದ ಕೆಲವು ನಿಬಂಧನೆಗಳು ಮತ್ತು ವಿವರಣೆಗಳನ್ನು ತೆಗೆದುಹಾಕುವಾಗ ಭಾಷೆಯನ್ನು ಸರಳಗೊಳಿಸುವ ಕ್ರಮದ ಭಾಗವಾಗಿ “ಮೌಲ್ಯಮಾಪನ ವರ್ಷ” ಮತ್ತು “ಹಿಂದಿನ ವರ್ಷ” ದಂತಹ ಪರಿಭಾಷೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು “ತೆರಿಗೆ ವರ್ಷ” ಎಂಬುದಾಗಿ ಬದಲಾಯಿಸಲಾಗಿದೆ.
ಇದನ್ನು ಓದಿರಿ : MI vs DC, WPL 2025 Live Streaming: Where To Watch Mumbai Indians vs Delhi Capitals Live Streaming