WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
New Delhi News:
New INCOME TAX SLABS 2025ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಡೀ ದೇಶದ ಮಧ್ಯಮ ವರ್ಗದ ಜನತೆ ನಿಟ್ಟುಸಿರು ಬಿಡುವಂತ ಮಹತ್ವದ ಘೋಷಣೆ ಮಾಡಿದೆ. ಮಧ್ಯಮ ವರ್ಗದ ಆದಾಯ ತೆರಿಗೆಯ ಹೊರೆಯನ್ನ ಇಳಿಸಿದ್ದು, ₹12 ಲಕ್ಷದವರೆಗೂ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದೆ.
2025ನೇ ಬಜೆಟ್‌ನಲ್ಲಿ ಆದಾಯ ತೆರಿಗೆದಾರರಿಗೆ ಬಂಪರ್ ಗಿಫ್ಟ್ ಸಿಕ್ಕಿದೆ. 12 ಲಕ್ಷ ರೂಪಾಯಿ ಆದಾಯದವರೆಗೆ ಯಾವುದೇ ಟ್ಯಾಕ್ಸ್ ಕಟ್ಟುವಂತಿಲ್ಲ. INCOME TAX SLABS ಕೇಂದ್ರ ಬಜೆಟ್ 2025ರಲ್ಲಿ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳಲ್ಲಿ ಅನುಕೂಲಕರ ಬದಲಾವಣೆಗಳನ್ನು ನಿರೀಕ್ಷಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆದಾರರಿಗಾಗಿ ಮುಂದಿನ ವಾರ ಹೊಸ ತೆರಿಗೆ ನೀತಿಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
12 ಲಕ್ಷದವರೆಗಿನ ಆದಾಯದಾರರು ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ.
ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಇನ್ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ತೆರಿಗೆದಾರರ ಆದಾಯವನು ಗರಿಷ್ಠಗೊಳಿಸಲು ಬಹು ತೆರಿಗೆ ಸುಧಾರಣೆಗಳನ್ನು ಪರಿಚಯಿಸಲು ನಿರ್ಧರಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ಹೆಚ್ಚು ಸರಳವಾಗಿರಲಿದೆ ಎಂದು ವಿತ್ತ ಸಚಿವರು ಭರವಸೆ ನೀಡಿದ್ದಾರೆ.
How much for whom in the new tax policy?
- ಆದಾಯ 0-4 ಲಕ್ಷ ರೂಪಾಯಿ – ತೆರಿಗೆ ಇಲ್ಲ
- ಆದಾಯ 4-8 ಲಕ್ಷ ರೂಪಾಯಿ – ಶೇಕಡಾ 5ರಷ್ಟು ತೆರಿಗೆ
- ಆದಾಯ 8-12 ಲಕ್ಷ ರೂಪಾಯಿ – ಶೇಕಡಾ 10ರಷ್ಟು ತೆರಿಗೆ
- ಆದಾಯ 12-16 ಲಕ್ಷ ರೂಪಾಯಿ – ಶೇಕಡಾ 15ರಷ್ಟು ತೆರಿಗೆ
- ಆದಾಯ 16 ಲಕ್ಷ ಮೇಲ್ಪಟ್ಟವರಿಗೆ ಶೇಕಡಾ 20ರಷ್ಟು ತೆರಿಗೆ
- ಆದಾಯ 20 ಲಕ್ಷದಿಂದ 24 ಲಕ್ಷದವರೆಗೆ ಶೇಕಡಾ 25ರಷ್ಟು ತೆರಿಗೆ
- ಆದಾಯ 24 ಲಕ್ಷ ಮೇಲ್ಪಟ್ಟವರಿಗೆ ಶೇಕಡಾ 30ರಷ್ಟು ತೆರಿಗೆ
ಇದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಹೊಸ ತೆರಿಗೆ ಸ್ಲ್ಯಾಬ್ ಆಗಿದ್ದು, ಆದಾಯ ತೆರಿಗೆ ಪಾವತಿದಾರರು 12 ಲಕ್ಷದವರೆಗೂ ಆದಾಯ ತೆರಿಗೆ ವಿನಾಯಿತಿ ಮಾಡಲು ಅವಕಾಶ ನೀಡಲಾಗಿದೆ.
ಇದನ್ನು ಓದಿರಿ : BJP DISSIDENT GROUP : ಅಧ್ಯಕ್ಷ ಸ್ಥಾನಕ್ಕೆ ಭಿನ್ನಮತೀಯ ಗುಂಪಿನಿಂದ ಅಭ್ಯರ್ಥಿ ಹಾಕಲು ನಿರ್ಧಾರ