spot_img
spot_img

ಅಡಮಾನ ರಹಿತ ಕೃಷಿ ಸಾಲ ಹೆಚ್ಚಳ : ಯುಪಿಐ ಅನುಮತಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮುಂಬೈ: ಕೇಂದ್ರ ಸರ್ಕಾರದಿಂದ ರೈತರಿಗೆ ನೀಡಲಾಗುವ ಅಡಮಾನ ರಹಿತ ಕೃಷಿ ಸಾಲದ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ಮತ್ತು ಯುಪಿಐ ಮೂಲಕ ಪೂರ್ವ-ಮಂಜೂರಾದ ಸಾಲಗಳನ್ನು ನೀಡಲು ಸಣ್ಣ ಹಣಕಾಸು ಬ್ಯಾಂಕುಗಳಿಗೆ ಅನುಮತಿ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ನಿರ್ಧರಿಸಿದೆ.
ಪ್ರಸ್ತುತ ಬ್ಯಾಂಕುಗಳು ಪ್ರತಿ ಸಾಲಗಾರನಿಗೆ 1.6 ಲಕ್ಷ ರೂ.ಗಳವರೆಗೆ ಮೇಲಾಧಾರ ಅಥವಾ ಅಡಮಾನ ರಹಿತ ಕೃಷಿ ಸಾಲವನ್ನು ನೀಡಬಹುದಾಗಿದೆ. ಈ ಮಿತಿಯನ್ನು 2010 ರಲ್ಲಿ ನಿಗದಿಪಡಿಸಿದ 1 ಲಕ್ಷ ರೂ.ಗಳಿಂದ 2019 ರಲ್ಲಿ 1.6 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಲದ ನೆರವನ್ನು ಹೆಚ್ಚಿಸಲು ಹಾಗೂ ಅಧಿಕ ಸಂಖ್ಯೆಯ ರೈತರನ್ನು ಸಾಲ ಸೌಲಭ್ಯದ ವ್ಯಾಪ್ತಿಗೆ ಒಳಪಡಿಸಲು ಆರ್​ಬಿಐ ಈ ಕ್ರಮ ಕೈಗೊಂಡಿದೆ. ಶುಕ್ರವಾರ ಇಲ್ಲಿ ನಡೆದ ಹಣಕಾಸು ನೀತಿ ಸಭೆಯ ನಂತರ ಈ ಎರಡು ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
“ಒಟ್ಟಾರೆ ಹಣದುಬ್ಬರ ಮತ್ತು ಕೃಷಿ ಇನ್ಪುಟ್ ವೆಚ್ಚಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಅಡಮಾನ ರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಔಪಚಾರಿಕ ಸಾಲ ವ್ಯವಸ್ಥೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು” ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ.
“ಯುಪಿಐನಲ್ಲಿನ ಕ್ರೆಡಿಟ್ ಲೈನ್ ಸಣ್ಣ ಮೊತ್ತದ, ಕಡಿಮೆ ಅವಧಿಯ ಸಾಲಗಳನ್ನು ಹೊಸದಾಗಿ ಸಾಲ ಪಡೆಯುವ ‘ನ್ಯೂ-ಟು-ಕ್ರೆಡಿಟ್’ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಸಮಾಜದ ಅಂಚಿನ ಗ್ರಾಹಕರನ್ನು ತಲುಪಲು ಎಸ್ಎಫ್​ಬಿಗಳು ಹೈಟೆಕ್, ಕಡಿಮೆ ವೆಚ್ಚದ ಮಾದರಿಯನ್ನು ಬಳಸಿಕೊಳ್ಳುತ್ತವೆ ಮತ್ತು ಯುಪಿಐನಲ್ಲಿ ಸಾಲದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಸಕ್ರಿಯ ಪಾತ್ರ ವಹಿಸಲಿವೆ” ಎಂದು ಆರ್​ಬಿಐ ಹೇಳಿದೆ.
ಯುಪಿಐ ಮೂಲಕ ಪೂರ್ವ-ಮಂಜೂರಾದ ಕ್ರೆಡಿಟ್ ಲೈನ್​ಗಳನ್ನು ಲಿಂಕ್ ಮಾಡಲು ಮತ್ತು ನಿಗದಿತ ವಾಣಿಜ್ಯ ಬ್ಯಾಂಕುಗಳು ಧನಸಹಾಯ ಖಾತೆಯಾಗಿ ಬಳಸಲು ಅನುವು ಮಾಡಿಕೊಡುವ ಮೂಲಕ ಸೆಪ್ಟೆಂಬರ್ 2023 ರಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಆದರೆ ಪೇಮೆಂಟ್ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು (ಎಸ್ಎಫ್​ ಬಿಗಳು) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.
“ಹೀಗಾಗಿ ಯುಪಿಐ ಮೂಲಕ ಪೂರ್ವ-ಮಂಜೂರಾದ ಕ್ರೆಡಿಟ್ ಲೈನ್​ಗಳನ್ನು ವಿಸ್ತರಿಸಲು ಎಸ್ಎಫ್​ಬಿಗಳಿಗೆ ಅನುಮತಿ ನೀಡಲು ಪ್ರಸ್ತಾಪಿಸಲಾಗಿದೆ. ಈ ಕುರಿತಾದ ಅಗತ್ಯ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...