spot_img
spot_img

IND VS ENG 2ND ODI : ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ

spot_img
spot_img

Share post:

Ind vs Eng 2nd ODI:

ಒಡಿಶಾದ ಬಾರಾಬತಿ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್​ ನೀಡಿದ್ದ 304 ರನ್​ಗಳ ಗುರಿಯನ್ನು ಬೆನ್ನತ್ತಿದ ಭಾರತ 33 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ತಂಡದ ಪರ ಬ್ಯಾಟಿಂಗ್​ಗೆ ಬಂದ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಆರಂಭದಿಂದಲೇ ಆಂಗ್ಲರನ್ನು ಬೆಂಡೆತ್ತಿದರು.

ಈ ಇಬ್ಬರು ಉತ್ತಮ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಬುನಾದಿ ಹಾಕಿದರು. ರೋಹಿತ್ ಶರ್ಮಾ ಶತಕ ಸಿಡಿಸಿದರೇ, ಶುಭಮನ್​ ಗಿಲ್​ ಅರ್ಧಶತ ಸಿಡಿಸಿ ಮಿಂಚಿದರು. IND VS ENG 2ND ODI 4 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.

ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.

136-run stand:

IND VS ENG 2ND ODI ಆರಂಭಿಕ ಜೋಡಿಯಾದ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ 100 ಎಸೆತಗಳಲ್ಲಿ 136 ರನ್​ಗಳ ಜೊತೆಯಾಟ ಆಡಿದರು. ರೋಹಿತ್​ ಶರ್ಮಾ ತಮ್ಮ ಇನ್ನಿಂಗ್ಸ್​ನಲ್ಲಿ 119 ರನ್​ ಚಚ್ಚಿದರೆ, ಶುಭಮನ್​ ಗಿಲ್ 52 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​​ ಸಹಾಯದಿಂದ 60ರನ್​ ಕಲೆಹಾಕಿದರು.

ಸತತ ಕಳಪೆ ಬ್ಯಾಟಿಂಗ್​ನಿಂದ ಕಂಗೆಟ್ಟಿದ್ದ ರೋಹಿತ್​ ಶರ್ಮಾ ಎರಡನೇ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದ್ದಾರೆ. ಈ ಪಂದ್ಯದಲ್ಲಿ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್​, 76 ಎಸೆತಗಳಲ್ಲಿ ಶತಕವನ್ನೂ ಬಾರಿಸಿದರು. ಒಟ್ಟಾರೆ 90 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 7 ಸಿಕ್ಸರ್​ ಸಹಾಯದಿಂದ 119 ರನ್​ ಗಳಿಸಿದರು.

ಒಂದೆಡೆ ರೋಹಿತ್ ಶರ್ಮಾ ಫಾರ್ಮ್​ಗೆ ಮರಳಿದರೆ ವಿರಾಟ್​ ಕೊಹ್ಲಿ ಮಾತ್ರ ಬ್ಯಾಟಿಂಗ್​ ದೌರ್ಬಲ್ಯ ಎದುರಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಲಯಕ್ಕೆ ಮರಳಲಿದ್ದಾರೆ ಎಂದುಕೊಂಡಿದ್ದ ಫ್ಯಾನ್ಸ್​​ಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. 8 ಎಸೆತಗಳನ್ನು ಆಡಿ ಕೇವಲ 5 ರನ್​ ಗಳಿಸಿ ಪೆವಿಲಿಯನ್​ ಸೇರಿದ್ದಾರೆ.

Jadeja Bowling Kamal:

ಮೊದಲ ಪಂದ್ಯದಲ್ಲಿ ಮೂರು ವಿಕೆಟ್​​ ಪಡೆದು ಮಿಂಚಿದ್ದ ಜಡೇಜಾ ಎರಡನೇ ಪಂದ್ಯದಲ್ಲೂ ತಮ್ಮ ಬೌಲಿಂಗ್​ ದಾಳಿ ಮುಂದುವರೆಸಿ ಆಂಗ್ಲರನ್ನು ಕಟ್ಟಿ ಹಾಕಿದರು.

ಬೆನ್​ ಡೆಕೆಟ್​ (65), ರೂಟ್​ (69), ಜೇಮಿ ಓವರ್​ಟನ್​ (6) ಪ್ರಮುಖ ಬ್ಯಾಟರ್​ಗಳ ವಿಕೆಟ್​ ಪಡೆಯುವಲ್ಲಿ ಜಡ್ಡು ಯಶಸ್ವಿಯಾದರು.

England lost 7 wickets for 85 runs:

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ್ದ ಆಂಗ್ಲ ಪಡೆ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭದಲ್ಲಿ ಇಂಗ್ಲೀಷರ ಬ್ಯಾಟಿಂಗ್​ ವೇಗ ಗಮನಿಸಿದರೆ 340+ ಸ್ಕೋರ್​ ಕಲೆಹಾಕಲಿದ್ದಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಬೆನ್​ ಡಕೆಟ್​ ಮತ್ತು ಜೋ ರೂಟ್​ ನಿರ್ಗಮನದ ನಂತರ ಕೇವಲ 85 ರನ್​ಗಳ ಅಂತರದಲ್ಲೇ ಇಂಗ್ಲೆಂಡ್​ ಅಂತಿಮ 7 ವಿಕೆಟ್​ಗಳನ್ನು ಕಳೆದುಕೊಂಡಿತು. ಇದರಿಂದಾಗಿ 304ರನ್​ಗಳಿಗೆ ತೃಪ್ತಿ ಪಟ್ಟಿತು.

Man of the Match:

ಪಂದ್ಯದಲ್ಲಿ ರೋಹಿತ್​ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದು ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನು ಓದಿರಿ : People Of Delhi Sought Resignation From Atishi: BJP Leader Sirsa

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...