IND vs NZ Final NEWS:
ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾಗವಾಗಿ ಭಾನುವಾರ (ನಾಳೆ) ಭಾರತ ಮತ್ತು ನ್ಯೂಜಿಲೆಂಡ್ IND VS NZ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತ ಅಜೇಯವಾಗಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಎರಡನೇ ಸೆಮಿಸ್ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿದ ಕಿವೀಸ್ ಪಡೆ ಭಾರತದ ವಿರುದ್ಧ ಅಂತಿಮ ಕಾದಾಟಕ್ಕೆ ಸಜ್ಜಾಗಿದೆ. ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ನಾಳೆಯ ಪಂದ್ಯ ರೋಚಕತೆಯಿಂದ ಕೂಡಿರಲಿದೆ.
Win-loss statistics:
ಭಾರತ ಮತ್ತು ನ್ಯೂಜಿಲೆಂಡ್ IND VS NZ ತಂಡಗಳು ಏಕದಿನ ಸರಣಿಯಲ್ಲಿ 119 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಕಿವೀಸ್ ಪಡೆ ಮೇಲೆ ಭಾರತ ಪ್ರಾಬಲ್ಯ ಸಾಧಿಸಿದೆ. ಈ ವರೆಗೂ ಭಾರತ ಒಟ್ಟು 61 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಇದೇ ವೇಳೆ, ಕಿವೀಸ್ ಪಡೆ ಕೂಡ ಭಾರತದ ವಿರುದ್ಧ 50 ಬಾರಿ ಗೆಲುವು ಸಾಧಿಸಿದೆ. ಉಭಯ ತಂಡಗಳ ನಡುವಿನ 7 ಪಂದ್ಯಗಳು ರದ್ದಾಗಿವೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.
Changes in the Indian team:
ನಾಳೆಯ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಸಾಧ್ಯತೆ ಇದೆ. ಬಹುತೇಕ ಹಿಂದಿನ ತಂಡವೆ ಕಣಕ್ಕಿಳಿಯಲಿದೆ. ಆದರೆ, ಎರಡನೇ ವೇಗಿ ಆಗಿ ಅರ್ಷದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆಯವು ಸಾಧ್ಯತೆ ಇದೆ.
Time change:
ಭಾರತ ಮತ್ತು ನ್ಯೂಜಿಲೆಂಡ್ IND VS NZ ನಡುವಿನ ಪಂದ್ಯದ ಸಮಯ ಬದಲಾಗಲಿದೆ ಎಂಬ ಗೊಂದಲ ಫ್ಯಾನ್ಸ್ಗಳಲ್ಲಿ ಮೂಡಿದೆ. ಆದರೆ ಈ ಪಂದ್ಯದ ಸಮಯದಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ. ಮಳೆ ಅಡ್ಡಿ ಪಡೆಸಿದರೆ ಮಾತ್ರ ಪಂದ್ಯದ ಸಮಯ ಬದಲಾಗುವ ಸಾಧ್ಯತೆ ಇದೆ. ಮಳೆ ಆಗದಿದ್ದರೆ, ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ಮಧ್ಯಾಹ್ನ 2:30ಕ್ಕೆ ಪ್ರಾರಭವಾಗಲಿದೆ. ಇದಕ್ಕೂ ಮೊದಲ 2 ಗಂಟೆಗೆ ಟಾಸ್ ನಡೆಯಲಿದೆ.
Possible Teams-India:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ / ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
New Zealand Team:
ವಿಲ್ ಯಂಗ್, ರಚಿನ್ ರವೀಂದ್ರ, ಟಾಮ್ ಲ್ಯಾಥಮ್ (ವಿ.ಕೀ), ಡ್ಯಾರಿಲ್ ಮಿಚೆಲ್, ಕೇನ್ ವಿಲಿಯಮ್ಸನ್, ಮೈಕೆಲ್ ಬ್ರೇಸ್‌ವೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ವಿಲಿಯಂ ಒರೂರ್ಕ್, ಮ್ಯಾಟ್ ಹೆನ್ರಿ/ನಾಥನ್ ಸ್ಮಿತ್.
ಇದನ್ನು ಓದಿ : India vs New Zealand Champions Trophy final: When & Where To Watch Live Streaming