spot_img
spot_img

INDIA BEAT BANGLADESH : ಬಾಂಗ್ಲಾ ಮಣಿಸಿ ಭಾರತ ಶುಭಾರಂಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Ind vs Ban:

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ನೀಡಿದ್ದ 228 ರನ್​ಗಳ ಸಾಮಾನ್ಯ ಗುರಿ ಬೆನ್ನತ್ತಿದ ಭಾರತ 21 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗಾರಿ ಬಾರಿಸಿತು.

INDIA BEAT BANGLADESH  ಚಾಂಪಿಯನ್ಸ್​ ಟ್ರೋಫಿ ಭಾಗವಾಗಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

Gill’s Century:

ಚೇಸಿಂಗ್​ ವೇಳೆ ಉತ್ತಮ ಆರಂಭ ಪಡೆದಿದ್ದ ಭಾರತ ರೋಹಿತ್​ ಶರ್ಮಾ (41) ನಿರ್ಗಮನದ ಬಳಿಕ ವಿರಾಟ್​ ಕೊಹ್ಲಿ (22), ಶ್ರೇಯಸ್​ ಅಯ್ಯರ್​ (15), ಅಕ್ಷರ್​ ಪಟೇಲ್​ (8) ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ

ಶುಭಮನ್​ ಗಿಲ್​, ರಾಹುಲ್​ ಜೊತೆಗೂಡಿ ಸಮಯೋಚಿತ ಬ್ಯಾಟಿಂಗ್​ ಮೂಲಕ ಶತಕ ಸಿಡಿಸಿದರು. ಇದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಗಿಲ್​ 129 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಾಯದಿಂದ ಅಜೇಯ 101 ರನ್​ ಕಲೆಹಾಕಿದರು.

Shami makes a comeback, takes 5 wickets:

ಚಾಂಪಿಯನ್ಸ್​ ಟ್ರೋಫಿಯ ಭಾರತದ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಶಮಿ ಮಿಂಚಿನ ಬೌಲಿಂಗ್​ ಮಾಡಿ 5 ವಿಕೆಟ್​ ಉರುಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 200 ವಿಕೆಟ್​ ಪಡೆದ ಬೌಲರ್​ ಎಂಬ ವಿಶ್ವದಾಖಲೆ ಬರೆದಿದ್ದಾರೆ.

Rahul finished the match:

ಅಕ್ಷರ್​ ಪಟೇಲ್​ ನಿರ್ಗಮಿಸುತ್ತಿದ್ದಂತೆ ಬ್ಯಾಟಿಂಗ್​ಗೆ ಆಗಮಿಸಿದ ರಾಹುಲ್, ಗಿಲ್​ ಜೊತೆ ಸೇರಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಜೊತೆಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

INDIA BEAT BANGLADESH  47 ಎಸೆತಗಳನ್ನೆದುರಿಸಿದ ರಾಹುಲ್​ 41 ರನ್​ ಬಾರಿಸಿದರು. ಇದರಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್​ ಸೇರಿವೆ. ಅಲ್ಲದೇ ಪಂದ್ಯದ ಗೆಲುವಿಗೆ 2 ರನ್​ ಬೇಕಿದ್ದಾಗ ಸಿಕ್ಸರ್​ ಸಿಡಿಸಿದರು.

Bangla innings was like this..:

ಇದಕ್ಕೂ ಮುನ್ನ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಬಾಂಗ್ಲಾ ಆರಂಭಿಕ ಆಘಾತ ಎದುರಿಸಿತು. ಕೇವಲ 35 ರನ್​ಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡಿತು. ಆರಂಭಿಕ ಬ್ಯಾಟರ್​ ಹಸನ್​ (25), ಮೆಹದಿ ಹಸನ್ (5)​ ಅಲ್ಪಮೊತ್ತಕ್ಕೆ ನಿರ್ಗಮಿಸಿದರೆ, ನಾಯಕ ನಜ್ಮುಲ್​ ಶಾಂಟೋ, ಸೌಮ್ಯ ಸರ್ಕಾರ್​, ಮುಶ್ಫಿಖರ್​ ರಹೀಮ್​ ಖಾತೆ ತೆರೆಯದೆ ಪೆವಿಲಿಯನ್​ ಸೇರಿದರು. ಆದರೆ ತೋಹಿದ್​ ಹೃದೊಯಿ ಮತ್ತು ಜಾಕರ್​ ಅಲಿ ಜೊತೆಗೂಡಿ ತಂಡದ ಸ್ಕೋರ್​ 200ರ ಗಡಿ ದಾಟುವಲ್ಲಿ ನೆರವಾದರು.

INDIA BEAT BANGLADESH  ಈ ಇಬ್ಬರೂ 150 ಎಸೆತಗಳಲ್ಲಿ 154 ರನ್​ ಸಿಡಿಸಿದರು. ಹೃದೊಯಿ 118 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್​ ಸಹಾಯದಿಂದ ಶತಕ ಸಿಡಿಸಿದರೆ, ಜಾಕೆರ್​ ಅಲಿ 114 ಎಸೆತಗಳಲ್ಲಿ 68 ರನ್ ಪೇರಿಸಿದರು.

ಇದನ್ನು ಓದಿರಿ : Ibrahim Ali Khan and Khushi Kapoor Starrer Nadaaniyan’s Release Date Locked

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...