spot_img
spot_img

INDIA BEAT PAKISTAN:ವಿರಾಟ್ ಕೊಹ್ಲಿ 51ನೇ ಶತಕ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Ind Was Pak News:

ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.ಈ ಇಬ್ಬರ ಬ್ಯಾಟಿಂಗ್​ ನೆರವಿನಿಂದ ಪಾಕ್​ ಸಾಮಾನ್ಯ ಗುರಿಯನ್ನು ಕಲೆಹಾಕಿತ್ತು. ಈ ಗುರಿಯನ್ನು ಪಡೆದ INDIA ವಿರಾಟ್​ ಕೊಹ್ಲಿ ಅವರ ಆಕರ್ಷಕ ಶತಕ ಮತ್ತು ಶ್ರೇಯಸ್​ ಅಯ್ಯರ್​ ಅವರ ಅರ್ಧಶತಕ ನೆರವಿನಿಂದ ಸುಲಭವಾಗಿ ಗೆಲುವು ಸಾಧಿಸಿತು.

ಇದರೊಂದಿಗೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.ದುಬೈ ಮೈದಾನದಲ್ಲಿ ಭಾನುವಾರ ನಡೆದ ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 241 ರನ್​ಗಳಿಗೆ ಸರ್ವಪತನ ಕಂಡಿತು. ಪಾಕ್​ ಪರ ಸೌದ್​ ಶಕೀಲ್​ (62) ಅರ್ಧಶತಕ ಸಿಡಿಸಿದರೆ, ರಿಜ್ವಾನ್​ 46 ರನ್​​ಗಳ ಇನ್ನಿಂಗ್ಸ್​ ಆಡಿದರು.ಚಾಂಪಿಯನ್ಸ್​ ಟ್ರೋಫಿಯಲ್ಲಿಂದು ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ INDIA ಜಯಭೇರಿ ಬಾರಿಸಿದೆ. ವಿರಾಟ್​ ಕೊಹ್ಲಿ ಶತಕದಾಟ, ಶ್ರೇಯಸ್​ ಅಯ್ಯರ್​ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದೆ.

Virat Kohli 51st century:ತಮ್ಮ ಇನ್ನಿಂಗ್ಸ್​ನಲ್ಲಿ 111 ಎಸೆತಗಳಲ್ಲಿ 7 ಬೌಂಡರಿ ಸಮೇತ 100 ರನ್​ ಬಾರಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ 51ನೇ ಶತಕವನ್ನು ಪೂರ್ಣಗೊಳಿಸಿದರು. ಉಳಿದಂತೆ ಶ್ರೇಯಸ್​ ಅಯ್ಯರ್​ (56) ಕೂಡ ಉತ್ತಮ ಸಾಥ್​ ನೀಡಿ ಅರ್ಧಶತಕ ಸಿಡಿಸಿದರು.

ರೋಹಿತ್​ ಶರ್ಮಾ ವಿಕೆಟ್​ ಕಳೆದುಕೊಂಡ ಬಳಿಕ ಕ್ರೀಸ್​ಗೆ ಎಂಟ್ರಿಕೊಟ್ಟ ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದರು. ಕೊನೆವರೆಗೂ ಕ್ರೀಸ್​ನಲ್ಲಿದ್ದು ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.

Deprived of Half-Century:ಆದರೆ 46 ರನ್​ಗಳಿಸಿದ್ದ ವೇಳೆ ಅಬ್ರಾರ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆಗಿ ಪೆವಿಲಿಯನ್​ ಸೇರಿದರು. ಇದರೊಂದಿಗೆ 4 ರನ್​ಗಳಿಂದ ಅರ್ಧಶತಕ ವಂಚಿತರಾದರು.ಆರಂಭಿಕ ಬ್ಯಾಟರ್​ ಶುಭಮನ್​ ಗಿಲ್ ರೊಹಿತ್​ ಜೊತೆಗೂಡಿ ಉತ್ತಮ ಇನ್ನಿಂಗ್ಸ್​ ಆರಂಭಿಸಿದರು.

Kuldeep Kamal:ಆದರೆ ಹ್ಯಾಟ್ರಿಕ್​ ಚಾನ್ಸ್​ ಸ್ವಲ್ಪದರಲ್ಲೇ ಮಿಸ್​ ಮಾಡಿಕೊಂಡರು. ಬೌಲಿಂಗ್​ನಲ್ಲಿ ಕುಲ್ದೀಪ್​ ಯಾದವ್​ ಕಮಾಲ್​ ಮಾಡಿದರು. ಅವರು 9 ಓವರ್​ಗಳಲ್ಲಿ 40 ರನ್​ ನೀಡಿ 3 ವಿಕೆಟ್​ಗಳನ್ನು ಉರುಳಿಸಿದರು.

Entry to Semi-Finals:ಇದೀಗ ಗ್ರೂಪ್​ ಲೀಗ್​ನ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ INDIA ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ.ಐಸಿಸಿ ಚಾಂಫಿಯನ್ಸ್​ ಟ್ರೋಫಿಯಲ್ಲಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಮೊದಲ ತಂಡ INDIA ಆಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 60 ರನ್​ಗಳಿಂದ ಗೆಲುವು ಸಾಧಿಸಿತ್ತು.

Pakistan Semis Entry Doubt:ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್​ ಗೆಲುವು ಸಾಧಿಸಿದರೆ ಪಾಕ್​ ಸೆಮಿಸ್​ ರೇಸ್​ನಿಂದ ಹೊರಬೀಳಲಿದೆ.ಭಾರತ ಸೆಮಿಫೈನಲ್​ಗೆ ಪ್ರವೇಶಿಸಿದರೆ ಮತ್ತೊಂದೆಡೆ ಪಾಕಿಸ್ತಾನದ ಸೆಮಿಸ್​ ಬಾಗಿಲು ಬಹುತೇಕ ಮುಚ್ಚಿದೆ. ನ್ಯೂಜಿಲೆಂಡ್​ ಮತ್ತು ಭಾರತ ವಿರುದ್ಧ ಸೋಲನ್ನು ಕಂಡಿರುವ ಪಾಕ್​ಗೆ ಭಾರೀ ಸಂಕಷ್ಟ ಎದುರಾಗಿದೆ.

 

ಇದನ್ನು ಓದಿರಿ :ICC Champions Trophy: Lockie Ferguson Ruled Out From Competition; Kyle Jamieson Roped In As Replacement

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...