ಭಾರತ ಮತ್ತು ಚೀನಾ ಗಡಿ ರೇಖೆಯ ಉದ್ದಕ್ಕೂ ಗಸ್ತು ಒಪ್ಪಂದವನ್ನು 2020ರಲ್ಲಿ ನಡೆದ ಗಲ್ವಾನ್ ಕಣಿವೆಯಲ್ಲಿ ಘರ್ಷಣೆಯ ಬಳಿಕ ಪುನರ್ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ.
ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಕಡಿಮೆ ಮಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಗಡಿ ಗಸ್ತು ಒಪ್ಪಂದದ ಹಿಂದೆ ಸಂಘರ್ಷದ ಸಂಭಾವ್ಯತೆ ಕಡಿಮೆ ಮಾಡುವ ಉದ್ದೇಶವಿದೆ.
ಈ ಮೂಲಕ 2020ರಲ್ಲಿ ಇದ್ದ ಗಸ್ತು ನಿಯಮ ಮರಳಿ ಸ್ಥಾಪಿಸಲಾಗುತ್ತದೆ.
ಗಡಿ ಸಮಸ್ಯೆಗಳ ಕುರಿತು ಮಾತುಕತೆಗೆ ಉತ್ತಮ ವಾತಾವರಣ ಕಲ್ಪಿಸುತ್ತದೆ. 2020ರ ಹಿಂದಿನ ನಿಯಮದಂತೆ ಗಸ್ತು ಪುನರಾರಂಭವು ಎರಡು ರಾಷ್ಟ್ರಗಳ ನಡುವೆ ವಿಶ್ವಾಸ ಮತ್ತೆ ಸ್ಥಾಪಿಸಲು ಸಹಾಯ ಮಾಡುತ್ತದೆ.
ಭಾರತ ಚೀನಾ ನಡುವೆ ಗಡಿ ಗಸ್ತು ಒಪ್ಪಂದದಿಂದಾಗಿ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳಿಗೆ ಅನುಕೂಲವಾಗಲಿದೆ.
ಭಾರತದೊಂದಿಗೆ ತನ್ನ ಗಡಿಗಳನ್ನು ಅಭಿವೃದ್ಧಿ ಪಡಿಸಲು ಚೀನಾ ಕೂಡ ಗಮನ ಹರಿಸಬಹುದು.
1975ರ ಬಳಿಕ ನಡೆದ ಮೊದಲ ಮಾರಣಾಂತಿಕ ಘರ್ಷಣೆ ಇದಾಗಿತ್ತು. ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮತ್ತು ಚೀನಾದ ನಾಲ್ಕು ಸೈನಿಕರು ಮೃತಪಟ್ಟಿದ್ದರು.
2020 ಜೂನ್ 15ರಂದು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ವ್ಯಾಪಿಸಿರುವ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾ ಸೈನಿಕರು ಬಂದೂಕುಗಳನ್ನು ಬಿಟ್ಟು ಕೋಲು, ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದರು.
ಗಡಿ ಭಾಗದಲ್ಲಿ ಕೈಗೊಂಡ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಮತ್ತು ಗಡಿ ರೇಖೆಯ ಕುರಿತಾದ ಗೊಂದಲಗಳು ಈ ಘರ್ಷಣೆಗೆ ಪ್ರಮುಖ ಕಾರಣವಾಗಿತ್ತು.
1962ರಲ್ಲಿ ನಡೆದ ಸಂಘರ್ಷದ ವೇಳೆ ಭಾರತ ಮತ್ತು ಚೀನಾ ಸೈನಿಕರು ಹೋರಾಡಿದ ವಿವಾದಿತ ಪ್ರದೇಶಗಳಾಗಿವೆ.
ಭಾರತ ಚೀನಾ ಗಡಿ ರೇಖೆಯ ಉದ್ದಕ್ಕೂ ಗಾಲ್ವಾನ್ ಸೇರಿದಂತೆ ನಾಲ್ಕು ಪ್ರದೇಶಗಳು ಘರ್ಷಣೆಗೆ ಕಾರಣವಾಗಿವೆ.
ಯಾವುದೇ ಆತಂಕವಿಲ್ಲದೆ ಭಾರತವು ಗಡಿ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ಹರಿಸಬಹುದು.