New Delhi News:
ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯಗಳಲ್ಲಿ ನೇಪಾಳದ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಸೋಲಿಸಿದ ಭಾರತದ ಪುರುಷರು, ಮಹಿಳೆಯರ ತಂಡಗಳು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.ಭಾನುವಾರ ಮೊದಲು ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು ಮಣಿಸಿದ ಭಾರತ ಟ್ರೋಫಿಯನ್ನು ಎತ್ತಿ ಹಿಡಿಯಿತು.
ನಂತರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿಯೂ ಕೂಡ ಭಾರತದ ಪುರುಷರ ತಂಡ ನೇಪಾಳ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.ಇಲ್ಲಿನ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದKHO KHO WORLD CUPಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಮಹಿಳಾ ಹಾಗೂ ಪುರುಷರ ತಂಡಗಳು ಚೊಚ್ಚಲ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿವೆ.
ಪ್ರಿಯಾಂಕಾ ಇಂಗ್ಲೆ ನಾಯಕತ್ವದ ಮಹಿಳಾ ತಂಡ ನೇಪಾಳವನ್ನು 78-40 ಅಂಕಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾರತ ಚೇಸ್ ಮತ್ತು ಡಿಫೆನ್ಸ್ ಎರಡರಲ್ಲೂ ಪ್ರಾಬಲ್ಯ ಮೆರೆಯಿತು. ಎರಡನೇ ಟರ್ನ್ನಲ್ಲಿ ನೇಪಾಳ ತಂಡ ಪ್ರತಿರೋಧ ನೀಡಿತ್ತಾದರೂ ಭಾರತದ ಡಿಫೆಂಡರ್‌ಗಳು ಸುಲಭವಾಗಿ ಅಂಕ ಗಳಿಸಲು ಅವಕಾಶ ನೀಡಲಿಲ್ಲ.
ಹೀಗಾಗಿ, ಎರಡನೇ ಟರ್ನ್ 35-24 ಅಂಕಗಳ ಮುನ್ನಡೆ ಸಾಧಿಸಿತು. ಮೂರನೇ ಟರ್ನ್ನಲ್ಲಿ ಮತ್ತೊಮ್ಮೆ ದಾಳಿಗಿಳಿದ ಟೀಂ ಇಂಡಿಯಾ 49 ಅಂಕಗಳ ಭಾರಿ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಟರ್ನ್-1ರಲ್ಲಿ ದಾಳಿಗಿಳಿದ ವುಮೆನ್ ಇನ್ ಬ್ಲೂ ತಂಡ ರಕ್ಷಣಾ ವಿಭಾಗದಲ್ಲಿ ನೇಪಾಳದ ಆಟಗಾರ್ತಿಯರು ಮಾಡಿದ ತಪ್ಪುಗಳ ಸಂಪೂರ್ಣ ಲಾಭ ಪಡೆದು, 34-0 ಅಂತರದ ಬೃಹತ್ ಮುನ್ನಡೆ ಸಾಧಿಸಿತು.ಅಂತಿಮವಾಗಿ ಭಾರತ ಮಹಿಳಾ ತಂಡ 78-40 ಅಂಕಗಳ ಅಂತರದಿಂದ ನೇಪಾಳವನ್ನು ಮಣಿಸಿ ಪ್ರಶಸ್ತಿ ಜಯಿಸಿತು.4ನೇ ಮತ್ತು ಕೊನೆಯ ಟರ್ನ್ನಲ್ಲಿ ನೇಪಾಳ ತಂಡ ಭಾರತ ತಂಡದ ಡಿಫೆಂಡರ್‌ಗಳನ್ನು ಔಟ್ ಮಾಡಲು ತುಂಬಾ ಕಷ್ಟಪಟ್ಟರು.