ನ್ಯೂಯಾರ್ಕ್ (ಅಮೆರಿಕ): ಭಾರತ ದೇಶದ ಮಟ್ಟಿಗೆ ಹಲವು ಆಘಾತಕಾರಿ ಅಂಕಿ ಅಂಶಗಳು ಇವೆ. ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಬಡವರು ಇದ್ದಾರೆ ಎಂದು ಬಡತನ ಸೂಚ್ಯಂಕ (ಎಂಪಿಐ) ತನ್ನ ಅಧ್ಯಯನ ವರದಿ ನೀಡಿದೆ.
ಬಡತನ ನಿರ್ಮೂಲನೆಗೆ ಹಲವು ವರ್ಷಗಳ ಕಾಲ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಕೂಡಾ, ಬಡತನ ಭಾರತದ ಪಾಲಿಗೆ ಇನ್ನೂ ಸವಾಲಾಗಿಯೇ ಇದೆ.
ಭಾರತ ದೇಶವೊಂದರಲ್ಲೇ 234 ಮಿಲಿಯನ್ ಜನರು ಬಡವರು ಎಂದು ಈ ಅಂಕಿ ಅಂಶ ಹೇಳಿದೆ.
ಭಾರತದ ಒಟ್ಟು ಜನಸಂಖ್ಯೆ 140 ಕೋಟಿಗೂ ಹೆಚ್ಚಿದೆ. ಇತ್ತ ಪಾಕಿಸ್ತಾನವನ್ನು ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿರುವ ದೇಶಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಈ ಮೂಲಕ ಬಡತನ ಅನ್ನೋದು ಯಾವ ರೀತಿ ಕೆಲವೇ ರಾಷ್ಟ್ರಗಳಿಗೆ ಸೀಮಿತ ಆಗಿದೆ. ವಿಶ್ವಾದ್ಯಂತ ಇರುವ ವಯಸ್ಕ ಬಡವರ ಸಂಖ್ಯೆ ಶೇ. 13.5 ರಷ್ಟು ಇದೆ.
ವಿಶ್ವಾದ್ಯಂತ ಇರುವ ಬಡವರ ಪೈಕಿ ಶೇ. 40 ರಷ್ಟು ಮಂದಿ ಅಮದರೆ 1.1 ಬಿಲಿಯನ್ ಜನರು ಸಂಘರ್ಷಮಯ ಸನ್ನಿವೇಶ ಇರುವ ರಾಷ್ಟ್ರಗಳಲ್ಲೇ ವಾಸಿಸುತ್ತಿದ್ದಾರೆ.