spot_img
spot_img

ವಿದೇಶಿ ಸಂಸತ್ ನಲ್ಲಿ ಅತಿಹೆಚ್ಚು ಭಾಷಣ ಮಾಡಿದ ಭಾರತದ ಪ್ರಧಾನಿಗಳು

spot_img
spot_img

Share post:

ಹೊಸದಿಲ್ಲಿ : ಮೊರಾರ್ಜಿ ದೇಸಾಯಿಂದ ಹಿಡಿದು ನರೇಂದ್ರ ಮೋದಿಯವರೆಗೆ ಎಂಟು ಪ್ರಧಾನಮಂತ್ರಿಗಳು ವಿದೇಶಿ ಸಂಸತ್ ನಲ್ಲಿ ಭಾಷಣವನ್ನು ಮಾಡಿದ್ದಾರೆ. ಇದರಲ್ಲಿ ಮೋದಿಯವರು ಅತಿಹೆಚ್ಚು ಬಾರಿ ಭಾಷಣ ಮಾಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೊರಾರ್ಜಿ ದೇಸಾಯಿ ಮೊದಲ ಬಾರಿಗೆ ವಿದೇಶದಲ್ಲಿ ಭಾಷಣವನ್ನು ಮಾಡಿದ್ದರು.

ವಿದೇಶಿ ಸಂಸತ್ ನಲ್ಲಿ ಅತಿಹೆಚ್ಚು ಭಾಷಣ ಮಾಡಿದ ಭಾರತದ ಪ್ರಧಾನಮಂತ್ರಿಗಳ ಪೈಕಿ, ಹಾಲೀ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನಕ್ಕೆ ಏರಿದ್ದಾರೆ.

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸದ್ಯ ದಕ್ಷಿಣ ಅಮೆರಿಕಾದ ಗಯಾನದಲ್ಲಿದ್ದಾರೆ. ಐವತ್ತು ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ಹೋಗುತ್ತಿರುವುದು ಇದೇ ಮೊದಲು.

ಕಳೆದ ಬುಧವಾರ (ನ 20) ಮೋದಿಗೆ ಅಲ್ಲಿನ ಅತ್ಯುನ್ನತ ಆರ್ಡರ್ ಆಫ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಅಲ್ಲಿನ ರಾಷ್ಟ್ರಪತಿ ಮೊಹಮ್ಮದ್ ಇರ್ಫಾನ್ ಆಲಿ ನೀಡಿದ್ದರು.

ಪ್ರಧಾನಿ ಮೋದಿಯವರ ಅಮೆರಿಕಾದ ಸಂಸತ್ ಅನ್ನು ಉದ್ದೇಶಿಸಿ 2016 ಮತ್ತು 2023ರಲ್ಲಿ ಎರಡು ಬಾರಿ ಭಾಷಣ ಮಾಡಿದ್ದರು. ಅದಕ್ಕೂ ಮುನ್ನ ಫಿಜಿ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ಸಂಸತ್ ನಲ್ಲೂ ಭಾಷಣವನ್ನು ಮಾಡಿದ್ದರು.

ಇದಲ್ಲದೇ, ಮಾರಿಸಸ್, ಉಗಾಂಡ, ಭೂತಾನ್, ನೇಪಾಳ, ಶ್ರೀಲಂಕಾ, ಮಂಗೋಲಿಯಾ, ಅಪಘಾನಿಸ್ತಾನ ಮತ್ತು ಮಾರಿಸಸ್ ದೇಶದ ಶಾಸಕಾಂಗ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದರು. ಇದುವರೆಗೆ, 14 ಬಾರಿ ವಿದೇಶಿ ಸಂಸತ್ ನಲ್ಲಿ ಭಾಷಣ ಮಾಡಿದ ಹಿರಿಮೆ ಮೋದಿಯವರದ್ದಾಗಿದೆ.

ಕಾಮನ್ವೆಲ್ತ್ ಆಫ್ ಡೊಮಿನಿಕಾ ದೇಶ ಕೂಡಾ ಮೋದಿಯರಿಗೆ ಇದೇ ವಾರದಲ್ಲಿ ಡೊಮಿನಿಕಾ ಅವಾರ್ಡ್ ಆಫ್ ಹಾನರ್ ನೀಡಿ ಗೌರವಿಸಿತ್ತು. ಕೋವಿಡ್ ಸಮಯದಲ್ಲಿ ಮೋದಿಯವರ ಕೆಲಸವನ್ನು ಗೌರವಿಸಿ ಈ ಪ್ರಶಸ್ತಿಯನ್ನು ಅಲ್ಲಿನ ಸರ್ಕಾರ ನೀಡಿದೆ.

ವಿದೇಶಿ ನೆಲದಲ್ಲಿ ಭಾರತದ ಪ್ರಾತಿನಿಧ್ಯವನ್ನು ಸ್ಥಾಪಿಸಲು ಮೋದಿಯವರ ವಿದೇಶಿ ಪ್ರವಾಸ ಸಾಕಷ್ಟು ಪರಿಣಾಮವನ್ನು ಬೀರಿದೆ ಎಂದು ವಿದೇಶಿ ಪತ್ರಿಕೆಗಳು ಬಣ್ಣಿಸಿವೆ. ಮೋದಿಯವರ ನಂತರ ವಿದೇಶಿ ಸಂಸತ್ ನಲ್ಲಿ ಅತಿಹೆಚ್ಚು ಭಾಷಣ ಮಾಡಿದವರೆಂದರೆ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್.

2014ರಲ್ಲಿ ಪ್ರಧಾನಿಯಾದ ನಂತರ ಮೋದಿ, ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ನಂತರ ಫಿಜಿ ದೇಶದ ಸಂಸತ್ ನಲ್ಲಿ ಭಾಷಣವನ್ನು ಮಾಡಿದರು. ಇದಾದ ನಂತರ 2015ರಲ್ಲಿ ಬ್ರಿಟನ್ ಸಂಸತ್ ಅನ್ನು ಉದ್ದೇಶಿಸಿಯೂ ಮೋದಿ ಭಾಷಣವನ್ನು ಮಾಡಿದ್ದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...