New Delhi News:
ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯೂರಿಟಿಯ 2023ರ ವರದಿ ಪ್ರಕಾರ, 2022ರಲ್ಲಿ ಅಮೆರಿಕದಲ್ಲಿ 2.2 ಲಕ್ಷ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ತಿಳಿಸಿದೆ.ಅಮೆರಿಕದಲ್ಲಿ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿರುವ 18,000 ಭಾರತೀಯ ವಲಸಿಗರನ್ನು ಅಮೆರಿಕ ಪತ್ತೆ ಮಾಡಿದ್ದು, ಈ ಬೆಳವಣಿಗೆ ಬೆನ್ನಲ್ಲೇ ವಿದೇಶಾಂಗ ಸಚಿವರು ಈ ಕುರಿತು ಮಾತನಾಡಿದ್ದಾರೆ.ಅಮೆರಿಕ ಅಕ್ರಮ ವಾಸಿಗಳ ಕುರಿತು DEPORTATION ಮಾಡುವುದಾಗಿ ಟ್ರಂಪ್ ಹೇಳಿಕೆ ಬೆನ್ನಲ್ಲೇ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ್ದಾರೆ.
ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರನ್ನು ಕಾನೂನುಬದ್ಧವಾಗಿ ಕರೆತರಲಾಗುವುದು ಎಂದಿದ್ದಾರೆ.ಈ ಅಕ್ರಮ ವಲಸಿಗರ ವಿಚಾರವನ್ನು ಒಪ್ಪಿರುವ ವಿದೇಶಾಂಗ ಸಚಿವರು, ಈ ಬಗ್ಗೆ ಭಾರತ ಸ್ಥಿರವಾಗಿದೆ. ಮಾತುಕತೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದಿದ್ದಾರೆ.ಈ ವೇಳೆ ಟ್ರಂಪ್ ಆಡಳಿತವು ಭಾರತೊಂದಿಗೆ ಸುಧಾರಿತ ಆರ್ಥಿಕ ಸಂಬಂಧವನ್ನು ವ್ಯಕ್ತಪಡಿಸುತ್ತದೆ ಎಂದ ಅವರು ಅಕ್ರಮ ವಲಸಿಗರ ವಿಚಾರ ಕುರಿತು ಮಾತನಾಡಿದರು.
ಅಮೆರಿಕದಲ್ಲಿ ಹೊಸದಾಗಿ ನೇಮಕವಾಗಿರುವ ರಾಜ್ಯ ಕಾರ್ಯದರ್ಶಿ ಮೊರ್ಕೊ ರೂಬಿಯೊ ಮಂಗಳವಾರ ಮೊದಲ ಬಾರಿಗೆ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಸಭೆ ನಡೆಸಿದರು. ಇದಾದ ಬಳಿಕ ನಡೆದ ವಾಷಿಂಗ್ಟನ್ ಡಿಸಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿ ಮಾತನಾಡಿದ ಜೈಶಂಕರ್, ಭಾರತದ ಕೌಶಲ್ಯ ಮತ್ತು ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಅವಕಾಶ ದೊರೆಯಬೇಕು. ಇದೇ ವೇಳೆ ಭಾರತವು ಕಾನೂನಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ.
ಎರಡು ದೇಶಗಳ ನಡುವೆ ಕಾನೂನುಬದ್ಧ ಚಲನೆಯನ್ನು ನಾವು ಒತ್ತಿ ಹೇಳುತ್ತೇವೆ ಎಂದರು.ಆದರೆ, ನಾವು ಸ್ಥಿರತೆ ಹೊಂದಿದ್ದು, ಇದರ ಬಗ್ಗೆ ನಾವು ಬದ್ಧವಾಗಿದ್ದು, ಅದೇ ಸ್ಥಾನದಲ್ಲಿ ನಾವು ಉಳಿಯಲಿದ್ದೇವೆ. ಇದನ್ನು ನಾನು ಅಮೆರಿಕ ರಾಜ್ಯ ಕಾರ್ಯದರ್ಶಿ ಮೊರ್ಕೊ ರೂಬಿಯೊ ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದರು.ನಮ್ಮ ನಾಗರಿಕರು ಇಲ್ಲಿ ಕಾನೂನುಬದ್ಧವಾಗಿ ನೆಲೆಸಿಲ್ಲ ಎಂದಾದರೆ ಈ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ನಾವು ಅವರಿಗೆ ಸದಾ ಕಾನೂನುಬದ್ಧವಾಗಿ ಹಿಂದಿರುಗಲು ಮುಕ್ತ ಅವಕಾಶ ನೀಡಿದ್ದು, ಈ ಸಂಬಂಧ ನಿಲುವು ಕೈಗೊಳ್ಳುತ್ತೇವೆ.
ಇದೀಗ ಅವರು ಎಲ್ಲಿಗೆ ಹೋಗಬೇಕು ಎಂಬ ಸೂಕ್ಷ್ಮ ವಿಚಾರದ ಕುರಿತು ಚರ್ಚೆ ಆರಂಭವಾಗಿದೆ ಎಂಬುದು ನಮಗೆ ಅರ್ಥವಾಗುತ್ತಿದೆ. ಭಾರತವು ಅಕ್ರಮ ವಲಸೆಯನ್ನು ಖಂಡಿತವಾಗಿ ವಿರೋಧಿಸುತ್ತದೆ. ಇದು ಗೌರವಾನ್ವಿತವಾಗಿ ಒಳ್ಳೆಯದಲ್ಲ. ಇದು ಅನೇಕ ಅಕ್ರಮ ಚಟುವಟಿಕೆಗೆ ಕಾರಣವಾಗುತ್ತದೆ. ಅನೇಕ ಅಕ್ರಮ ಚಟುವಟಿಕೆಗಳು ಇದರೊಂದಿಗೆ ಸೇರುತ್ತದೆ ಎಂದರು.ಜ. 20 ರಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿರುವ ಡೋನಾಲ್ಡ್ ಟ್ರಂಪ್ ಅವರು ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಮ್ಮ ಪ್ರಚಾರದ ವೇಳೆ ನೀಡಿದ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆ.
ಅಮೆರಿಕ ಮೆಕ್ಸಿಕೊ ಗಡಿಯಲ್ಲಿ ನೆಲೆಸಿರುವ ಪಡೆ ಮತ್ತು ಜನ್ಮಜಾತ ಪೌರತ್ವ ಹಕ್ಕನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದ್ದಾರೆ.ಬ್ಲೂಬರ್ಗ್ ವರದಿ ಪ್ರಕಾರ, ಪಂಜಾಬ್ ಮತ್ತು ಗುಜರಾತ್ನ ಸುಮಾರು 18,000 ಭಾರತೀಯರು ಅಕ್ರಮವಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಈ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ ಎಂದಿದೆ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯೂರಿಟಿಯ 2023ರ ವರದಿ ಪ್ರಕಾರ, 2022ರಲ್ಲಿ ಅಮೆರಿಕದಲ್ಲಿ 2.2 ಲಕ್ಷ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ತಿಳಿಸಿದೆ.
ಇದನ್ನು ಓದಿರಿ : ROOPESH SHETTY : ಗುಣದಿಂದ ಸುನೀಲ್ ಶೆಟ್ಟಿ ರಿಯಲ್ ಹೀರೋ,