spot_img
spot_img

INDIAS E WASTE:ಭಾರತದ ಇ – ತ್ಯಾಜ್ಯದಿಂದ $6 ಬಿಲಿಯನ್ ಮೊತ್ತದ ವಹಿವಾಟು ಸಾಧ್ಯತೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಚೀನಾ ಮತ್ತು ಯುಎಸ್ ನಂತರ INDIAS ಈಗ ವಿಶ್ವದ ಮೂರನೇ ಅತಿದೊಡ್ಡ ಇ-ತ್ಯಾಜ್ಯ ಉತ್ಪಾದಕ ರಾಷ್ಟ್ರವಾಗಿದೆ. ನಗರೀಕರಣ ಮತ್ತು ಹೆಚ್ಚುತ್ತಿರುವ ಆದಾಯದಿಂದಾಗಿ ದೇಶದ ಇ-ತ್ಯಾಜ್ಯವು 2014 ರಲ್ಲಿ ಇದ್ದ 2 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ನಿಂದ 2024 ರಲ್ಲಿ 3.8 ಎಂಎಂಟಿಗೆ ದ್ವಿಗುಣಗೊಂಡಿದೆ ಎಂದು ರೆಡ್ ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ವರದಿ ತಿಳಿಸಿದೆ.INDIAS ಇ – ತ್ಯಾಜ್ಯ ಮಾರುಕಟ್ಟೆಯು ದೊಡ್ಡ ಮಟ್ಟದ ಬೆಳವಣಿಗೆಯ ಅವಕಾಶವನ್ನು ಹೊಂದಿದೆ ಎಂದು ವರದಿ ಹೇಳಿದೆ.

INDIAS ಇ-ತ್ಯಾಜ್ಯವು (ಎಲೆಕ್ಟ್ರಾನಿಕ್ ತ್ಯಾಜ್ಯ) ಉತ್ತಮ ಆರ್ಥಿಕ ಲಾಭದ ಅವಕಾಶವನ್ನು ಹೊಂದಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. INDIASಲ್ಲಿ ಉತ್ಪಾದನೆಯಾಗುವ ಇ-ತ್ಯಾಜ್ಯದಿಂದ ಹೊರತೆಗೆಯಬಹುದಾದ ಲೋಹ ಮತ್ತು ಇತರ ವಸ್ತುಗಳಿಂದ ಅಂದಾಜು 6 ಬಿಲಿಯನ್ ಡಾಲರ್​ ಮೌಲ್ಯದ ಆರ್ಥಿಕ ವಹಿವಾಟು ನಡೆಯಬಹುದು ಎಂದು ವರದಿ ಹೇಳಿದೆ.ಉಪಕರಣಗಳು ಹೆಚ್ಚು ಕಾಂಪ್ಯಾಕ್ಟ್ ಮತ್ತು ಹಗುರವಾಗುತ್ತಿರುವ ಮಧ್ಯೆ ತ್ಯಜಿಸಿದ ವಸ್ತುಗಳ ಪರಿಮಾಣವು ಹೆಚ್ಚುತ್ತಿದೆ.

ಹೀಗಾಗಿ ಪರಿಣಾಮಕಾರಿ ಮರುಬಳಕೆ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.2024 ರ ಹಣಕಾಸು ವರ್ಷದಲ್ಲಿ ಉತ್ಪಾದನೆಯಾದ ಒಟ್ಟು ಇ – ತ್ಯಾಜ್ಯದ ಸುಮಾರು 70 ಪ್ರತಿಶತದಷ್ಟು ಕುಟುಂಬಗಳು ಮತ್ತು ವ್ಯವಹಾರಗಳಿಂದ ಉತ್ಪತ್ತಿಯಾಗಿದೆ. ಜನತೆ ವಸ್ತುಗಳನ್ನು ಬಹಳ ಬೇಗ ಬದಲಾಯಿಸುತ್ತಿರುವುದು ಇ-ತ್ಯಾಜ್ಯ ಉತ್ಪಾದನೆಯಲ್ಲಿ ಒಂದು ಗಮನಾರ್ಹ ಪ್ರವೃತ್ತಿಯಾಗಿದೆ.

“ಮುಂಬರುವ ವರ್ಷಗಳಲ್ಲಿ ಇ – ತ್ಯಾಜ್ಯದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಇ-ತ್ಯಾಜ್ಯದಲ್ಲಿನ ಲೋಹಗಳ ಹೆಚ್ಚುತ್ತಿರುವ ಮೌಲ್ಯವು ಲೋಹಗಳ ಹೊರತೆಗೆಯುವಿಕೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರ ಲೋಹ ಹೊರತೆಗೆಯುವಿಕೆಯಲ್ಲಿ ಮುಂಚೂಣಿಗೆ ಬರಲು INDIAS ಪ್ರಮುಖ ಅವಕಾಶವನ್ನು ಒದಗಿಸುತ್ತದೆ “ಎಂದು ರೆಡ್ ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ನ ಪಾಲುದಾರ ಜಸ್ ಬೀರ್ ಎಸ್ ಜುನೇಜಾ ಹೇಳಿದರು.

2035ರ ಹಣಕಾಸು ವರ್ಷದ ವೇಳೆಗೆ ಔಪಚಾರಿಕ ಮರುಬಳಕೆ ಕ್ಷೇತ್ರದಲ್ಲಿ ಶೇಕಡಾ 17 ರಷ್ಟು ಸಿಎಜಿಆರ್ ದರದಲ್ಲಿ ಬೆಳವಣಿಗೆಯಾಗುವ ಮುನ್ಸೂಚನೆಗಳ ಹೊರತಾಗಿಯೂ, INDIASಲ್ಲಿ ಶೇ 40ರಷ್ಟು ಮಾತ್ರ ಇ-ತ್ಯಾಜ್ಯದ ಮರುಬಳಕೆ ಸಾಧ್ಯವಾಗುವ ನಿರೀಕ್ಷೆಯಿದೆ.ಪ್ರಸ್ತುತ, INDIASಲ್ಲಿ ಕೇವಲ 16 ಪ್ರತಿಶತದಷ್ಟು ಗ್ರಾಹಕ ಇ-ತ್ಯಾಜ್ಯವನ್ನು ಔಪಚಾರಿಕ ಮರುಬಳಕೆದಾರರು ಸಂಸ್ಕರಿಸುತ್ತಿದ್ದಾರೆ.

ಇ-ತ್ಯಾಜ್ಯದ 10-15 ಪ್ರತಿಶತದಷ್ಟು ಮನೆಗಳಲ್ಲಿ ಸಂಗ್ರಹವಾಗುತ್ತದೆ ಮತ್ತು 8-10 ಪ್ರತಿಶತದಷ್ಟು ಇ-ತ್ಯಾಜ್ಯ ಮಣ್ಣಿನಡಿ ಹೂತು ಹೋಗುತ್ತದೆ. ಒಟ್ಟಾರೆ ಮರುಬಳಕೆ ದಕ್ಷತೆಯು ಕಡಿಮೆಯಾಗುವುದಕ್ಕೆ ಇದೂ ಒಂದು ಕಾರಣವಾಗಿದೆ.ಕಡಿಮೆ ಅನುಸರಣೆ ವೆಚ್ಚಗಳು ಮತ್ತು ವ್ಯಾಪಕ ಸಂಗ್ರಹ ಜಾಲಗಳಿಂದ ಪ್ರಯೋಜನ ಪಡೆಯುವ ಅನೌಪಚಾರಿಕ ಸಂಸ್ಕರಣಾ ಘಟಕಗಳಿಂದ ಈ ವಲಯದಲ್ಲಿ ತೀವ್ರ ಸ್ಪರ್ಧೆ ಎದುರಾಗಿದೆ.

 

ಇದನ್ನು ಓದಿರಿ :A boat carrying nine devotees capsized during the ongoing Maha Kumbh Mela on Tuesday.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...