ಬಾಂಗ್ಲಾದೇಶವು ಪಾಕಿಸ್ತಾನದ ‘ಕಳೆದುಹೋಗಿದ್ದ ಸಹೋದರ’ ಎಂದು ಇಶಾಕ್ ದಾರ್ ಬಣ್ಣಿಸಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಡುವಿನ ಸರಣಿ ಸಭೆಗಳ ನಂತರ ಈಗ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಬಾಂಗ್ಲಾದೇಶದ ಭೇಟಿಗೆ ಬರಲಿದ್ದಾರೆ.
ಪಾಕಿಸ್ತಾನದಿಂದ ಮದ್ದುಗುಂಡು ಮತ್ತು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿರುವುದು ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಮುಂದಿನ ದಿನಗಳಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿರುವುದು ಈ ಪ್ರದೇಶದಲ್ಲಿ ಪರಿಸ್ಥಿತಿಗಳು ಬದಲಾಗುತ್ತಿರುವುದರ ಸೂಚನೆಯಾಗಿವೆ. ಯೂನುಸ್ ಅವರ ಈ ಬೇಡಿಕೆಯನ್ನು ಭಾರತ ನಿರ್ಲಕ್ಷಿಸುವುದು ಹೌದಾದರೂ, ಬಾಂಗ್ಲಾದೇಶದೊಂದಿಗೆ ಸಂಬಂಧಗಳ ಬಲವರ್ಧನೆಯ ಪ್ರಯತ್ನಗಳನ್ನು ಮಾತ್ರ ಮುಂದುವರಿಸುತ್ತದೆ.
ಸಾರ್ಕ್ ಅನ್ನು ಪುನರುಜ್ಜೀವನಗೊಳಿಸಬೇಕೆಂದು ಯೂನುಸ್ ನಿರಂತರವಾಗಿ ಬೇಡಿಕೆ ಇಡುತ್ತಿರುವುದು ಭಾರತಕ್ಕೆ ಅಸಮಾಧಾನ ಮೂಡಿಸಿದೆ. ಇದಲ್ಲದೆ, ಈ ವರ್ಷದ ಫೆಬ್ರವರಿಯಿಂದ ಪಾಕಿಸ್ತಾನ ಸೇನೆಯು ಬಾಂಗ್ಲಾದೇಶದ ಪಡೆಗಳಿಗೆ ತರಬೇತಿ ನೀಡಲಿದೆ. ಬಾಂಗ್ಲಾದೇಶದ ನಾಲ್ಕು ಕಂಟೋನ್ಮೆಂಟ್ ಗಳಲ್ಲಿ ಈ ತರಬೇತಿ ನಡೆಯಲಿದೆ. ಪಾಕಿಸ್ತಾನ ತಂಡದ ನೇತೃತ್ವವನ್ನು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿ ವಹಿಸಲಿದ್ದಾರೆ.ಅಲ್ಲದೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಮಿಲಿಟರಿ ಸಹಕಾರ ಕೂಡ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸಿವೆ. ಭಾರತದ ವಿರುದ್ಧ ರಕ್ಷಣಾತ್ಮಕ ಕ್ರಮವಾಗಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಅಬ್ದಾಲಿ ಅಲ್ಪ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಟರ್ಕಿಯಿಂದ ಟ್ಯಾಂಕ್ಗಳನ್ನು ಖರೀದಿಸಲು ಹವಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Pakistan Army Training for Bangladesh Army:ಬಾಂಗ್ಲಾದೇಶಕ್ಕೆ ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಿಂದ ಬೆದರಿಕೆ ಇಲ್ಲ. ಪಾಕಿಸ್ತಾನವು ಬಾಂಗ್ಲಾದೇಶದೊಂದಿಗೆ ಸಹಕಾರ ಸಾಧಿಸಿದ ಬೆನ್ನಲ್ಲೇ ಚೀನಾ ಕೂಡ ಬಾಂಗ್ಲಾದಲ್ಲಿ ತನ್ನ ಹಿತಾಸಕ್ತಿ ಸಾಧನೆಗೆ ಮುಂದಾಗಲಿದೆ. ಇದು ಭಾರತಕ್ಕೆ ಮತ್ತೊಂದು ಕಾಳಜಿಯ ವಿಷಯವಾಗಿದೆ.
ಪಾಕಿಸ್ತಾನವು ತನ್ನ ಕಾರ್ಯಸೂಚಿಯಲ್ಲಿ ಭಾರತ ವಿರೋಧಿ ವಿಷಯವನ್ನು ಸೇರಿಸಿ ಕೆಲಸ ಮಾಡುವುದರಿಂದ INDO-ಬಾಂಗ್ಲಾದೇಶ ಮಿಲಿಟರಿ ಸಂಬಂಧಗಳು ತೀವ್ರ ಹಾಳಾಗುವ ಸಾಧ್ಯತೆಗಳಿವೆ.ಪಾಕಿಸ್ತಾನ ಸೇನೆ ಬಾಂಗ್ಲಾ ಸೈನ್ಯಕ್ಕೆ ತರಬೇತಿ ನೀಡುವುದು ಭಾರತದ ಪಾಲಿಗೆ ಅಂಥ ಆತಂಕದ ವಿಚಾರವಲ್ಲವಾದರೂ, ಮೂಲಭೂತವಾದವನ್ನು ಹರಡುವ ಪಾಕಿಸ್ತಾನದ ಪ್ರಯತ್ನಗಳು ಭಾರತಕ್ಕೆ ಚಿಂತೆಯ ವಿಷಯವಾಗಿದೆ. ಕಾಶ್ಮೀರಿ ಉಗ್ರರನ್ನು ಭಾರತಕ್ಕೆ ಸಾಗಿಸಲು ಬಾಂಗ್ಲಾದೇಶವು ಒಂದು ಮಾರ್ಗವಾಗಬಹುದು.
ಇದು ಈಗಾಗಲೇ ಪ್ರಾರಂಭವಾಗಿದೆ ಎಂದು ದೃಢೀಕರಿಸದ ವರದಿಗಳು ಉಲ್ಲೇಖಿಸುತ್ತವೆ.ಇದಲ್ಲದೆ, ಇದು ಪಾಕಿಸ್ತಾನದ ಐಎಸ್ಐಗೆ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ದಂಗೆಕೋರ ಗುಂಪುಗಳಿಗೆ ತರಬೇತಿ ನೀಡಲು ನೆಲೆಗಳನ್ನು ಪುನಃ ಸ್ಥಾಪಿಸಲು ಬಾಗಿಲು ತೆರೆಯುತ್ತದೆ.
Crack in Pakistan-Afghanistan Relations:ಅಫ್ಘಾನಿಸ್ತಾನದಲ್ಲಿ ಯುಎಸ್ ಮತ್ತು ನ್ಯಾಟೋ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ತಾಲಿಬಾನ್ ಅನ್ನು ಬೆಂಬಲಿಸಿದ್ದರೂ, ಪ್ರಸ್ತುತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಂಬಂಧಗಳು ಸಂಪೂರ್ಣವಾಗಿ ಹದಗೆಟ್ಟಿವೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಮತ್ತು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವರ ನಡುವಿನ ಸಭೆ ಬಾಂಗ್ಲಾದೇಶವನ್ನು ಬಳಸಿಕೊಂಡು ಭಾರತವನ್ನು ಪ್ರಚೋದಿಸಲು ನಿರ್ಧರಿಸಿದರೆ ಏನಾಗಬಹುದು ಎಂಬುದರ ಬಗ್ಗೆ ಇಸ್ಲಾಮಾಬಾದ್ಗೆ ನೀಡಿರುವ ಸ್ಪಷ್ಟ ಎಚ್ಚರಿಕೆಯಾಗಿದೆ.ಇದರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದು, ಇವರು ಪಾಕಿಸ್ತಾನದಿಂದ ಹಿಂದಿರುಗಿದ ನಿರಾಶ್ರಿತರಾಗಿದ್ದು ಗಮನಾರ್ಹ.
ಈ ದಾಳಿಯ ನಂತರ ಕಾಬೂಲ್ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ದಾಳಿಗಳನ್ನು ಹೆಚ್ಚಿಸಿದೆ.ಹತಾಶೆಯಿಂದ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಟಿಟಿಪಿಯ ಅಡಗುತಾಣದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು ಐವತ್ತು ಜನ ಸಾವಿಗೀಡಾದರು.
ಅಫ್ಘಾನಿಸ್ತಾನದಲ್ಲಿ ನೆಲೆಗಳನ್ನು ಹೊಂದಿರುವ ಟಿಟಿಪಿ (ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್) ಮತ್ತು ಬಲೂಚ್ ಸ್ವಾತಂತ್ರ್ಯ ಹೋರಾಟಗಾರರಿಂದ ನಡೆಯುತ್ತಿರುವ ದಾಳಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪಾಕಿಸ್ತಾನ ಸೇನೆಗೆ ಆತಂಕ ಮೂಡಿಸಿದೆ. ಆದರೆ, ಪಾಕಿಸ್ತಾನ ಹಾಗೂ ರಾವಲ್ಪಿಂಡಿಯಿಂದ ಬೆಂಬಲಿತವಾದ ಐಸಿಸ್ ಬಗ್ಗೆ ಅಫ್ಘಾನಿಸ್ತಾನದಲ್ಲಿ ತೀವ್ರ ಆಕ್ರೋಶವಿದೆ.
ಭಾರತವು ತನ್ನ ಇತ್ತೀಚಿನ ಕ್ರಮಗಳ ಮೂಲಕ ಈ ಸದ್ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.ದುಬೈನಲ್ಲಿ ನಡೆದ ಸಭೆಗೆ ಸ್ವಲ್ಪ ಮೊದಲು ಈ ಒಗ್ಗಟ್ಟಿನ ಪ್ರದರ್ಶನವು ಗಮನಾರ್ಹವಾಗಿತ್ತು. ಪಾಕಿಸ್ತಾನದೊಂದಿಗಿನ ಹೋರಾಟದಲ್ಲಿ ಭಾರತವು ಅಫ್ಘಾನಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬುದನ್ನು ಇದು ತೋರಿಸಿದೆ. ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ಉತ್ತಮ ಭಾವನೆಯಿದೆ.
India has not yet recognized the Taliban regime:ಭಾರತದಲ್ಲಿನ ಅಫ್ಘಾನ್ ರಾಯಭಾರ ಕಚೇರಿಯು ಈಗಲೂ ಬಂದ್ ಆಗಿದೆ. ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರವಿದ್ದು, ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವಿನ ಬಗ್ಗೆ ಈ ಸಿಬ್ಬಂದಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ತಾಲಿಬಾನ್ ಆಡಳಿತಕ್ಕೆ ಭಾರತ ಈವರೆಗೂ ಮಾನ್ಯತೆ ನೀಡಿಲ್ಲ ಎಂಬುದು ಗಮನಾರ್ಹ.ಜಾಗತಿಕ ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ ಅಫ್ಘಾನಿಸ್ತಾನದೊಂದಿಗೆ ಕೆಲಸ ಮಾಡಲು ಮುಂದಾಗಿರುವ ಭಾರತದ ನಿರಂತರ ಬೆಂಬಲ ಮತ್ತು ಬದ್ಧತೆಗೆ ಅಫ್ಘಾನ್ ಹಂಗಾಮಿ ಸಚಿವರು ಕೃತಜ್ಞತೆ ಸಲ್ಲಿಸಿದರು.
ದುಬೈನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಮಧ್ಯೆ ನಡೆದ ಸಭೆಯಲ್ಲಿ ಮಾನವೀಯ ನೆರವು, ಅಭಿವೃದ್ಧಿ ಯೋಜನೆಗಳು, ಚಬಹಾರ್ ಬಂದರು ವಿಚಾರ, ಆರೋಗ್ಯ ವಲಯದಲ್ಲಿ ಬೆಂಬಲ ಮತ್ತು ಕ್ರಿಕೆಟ್ ಸಹಕಾರದ ಬಗ್ಗೆ ಚರ್ಚಿಸಲಾಯಿತು.
ನಮ್ಮ ಮಧ್ಯದ ಬಿಕ್ಕಟ್ಟು ಪರಿಹರಿಸಲು ಅಫ್ಘಾನಿಸ್ತಾನದೊಂದಿಗೆ ಮಾತುಕತೆ ನಡೆಸುವುದೊಂದೇ ದಾರಿ ಎಂದು ಅವರು ಹೇಳಿದರು.ಈ ಬಗ್ಗೆ ಮಾತನಾಡಿದ ಅಫ್ಘಾನಿಸ್ತಾನದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್, “ಪಾಕಿಸ್ತಾನ-ಅಫ್ಘಾನ್ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮತ್ತು ಉದ್ವಿಗ್ನತೆ ಉಂಟಾದಾಗಲೆಲ್ಲ ಭಾರತವು.
ಅದರ ಲಾಭ ಪಡೆಯಲು ಹವಣಿಸುತ್ತದೆ ಮತ್ತು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮಧ್ಯೆ ಒಳ್ಳೆಯ ಸಂಬಂಧ ಏರ್ಪಡದಂತೆ ಪ್ರಯತ್ನಿಸುತ್ತದೆ” ಎಂದು ಹೇಳಿದ್ದಾರೆಭಾರತವು ಅಫ್ಘಾನಿಸ್ತಾನದೊಂದಿಗೆ ನಿಕಟ ಸಂಪರ್ಕ ಸಾಧಿಸಿದರೆ ಆ ದೇಶದ ಭೂಪ್ರದೇಶದಿಂದ ತನ್ನ ಮೇಲೆ ನಡೆಯುತ್ತಿರುವ ದಾಳಿಗಳ ಸಂಖ್ಯೆ ಹೆಚ್ಚಾಗಬಹುದು ಎಂಬುದು ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದೆ.
ತಾಲಿಬಾನ್ ನೊಂದಿಗೆ ಮಾತುಕತೆ ನಡೆಸಿದ ಭಾರತದ ಕ್ರಮವನ್ನು ಪಾಕಿಸ್ತಾನ ಟೀಕಿಸಿದೆ. ‘ಅಮೆರಿಕವು ತಾಲಿಬಾನ್ಗೆ ಲಾಭವಾಗುವಂಥ ಯಾವುದೇ ಧನಸಹಾಯ ನೀಡಕೂಡದು. ಯುಎಸ್ ತೆರಿಗೆದಾರರ ಡಾಲರ್ಗಳು ತಾಲಿಬಾನ್ ಗೆ ಹೋಗುವುದನ್ನು ತಡೆಯಲು ಬೈಡನ್ ಆಡಳಿತವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು.
‘ ಎಂದು ಅವರು ಆಗ್ರಹಿಸಿದ್ದಾರೆ.ತೀರಾ ಇತ್ತೀಚಿನವರೆಗೆ ಅಮೆರಿಕವು ಅಫ್ಘಾನಿಸ್ತಾನಕ್ಕೆ ಪರೋಕ್ಷವಾಗಿ ಧನಸಹಾಯ ನೀಡುತ್ತಲೇ ಬಂದಿದೆ.
2021 ರ ಆಗಸ್ಟ್ನಲ್ಲಿ ಬೈಡನ್ ಆಡಳಿತವು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂಪಡೆದ ನಂತರ, ತಾಲಿಬಾನ್ ಆಡಳಿತದಿಂದ ಸೃಷ್ಟಿಯಾದ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಅಮೆರಿಕವು 2.8 ಬಿಲಿಯನ್ ಡಾಲರ್ಗಿಂತ ಹೆಚ್ಚು ಹಣ ನೀಡಿದೆ ಎಂದು ಯುಎಸ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಮೈಕೆಲ್ ಮೆಕ್ಕಾಲ್ ಕಳೆದ ವರ್ಷ ಮೇ ತಿಂಗಳಿನ ಸಮಿತಿಯ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಚಿಗುರುತ್ತಿರುವ ಇತರ ಭಯೋತ್ಪಾದಕ ಗುಂಪುಗಳಿಗೆ ಯುಎಸ್ ಧನಸಹಾಯದಿಂದ ಲಾಭವಾಗಬಹುದು ಎಂದು ಯುಎಸ್ ನಲ್ಲಿ ಅನೇಕರ ಭಾವನೆಯಾಗಿದೆ.ಬದಲಾಗಿ, ಅದು ಅಫ್ಘಾನಿಸ್ತಾನದ ಜನರಿಗೆ ನ್ಯಾಯಯುತವಾಗಿ ಸೇರಬೇಕಾದ ಶತಕೋಟಿ ಡಾಲರ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಮತ್ತು ಸ್ಥಗಿತಗೊಳಿಸಿದೆ.
ಏತನ್ಮಧ್ಯೆ ಅಫ್ಘಾನಿಸ್ತಾನಕ್ಕೆ ಅಂತಹ ಎಲ್ಲಾ ಸಹಾಯವನ್ನು ನಿಲ್ಲಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ.ಆದರೆ ಅಮೆರಿಕ ಧನ ಸಹಾಯ ನೀಡಿದೆ ಎನ್ನುವ ವರದಿಗಳನ್ನು ತಾಲಿಬಾನ್ ನಿರಾಕರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲಿಬಾನ್ ವಕ್ತಾರರು, ‘ವಾಸ್ತವವಾಗಿ, ಯುನೈಟೆಡ್ ಸ್ಟೇಟ್ಸ್ ಇಸ್ಲಾಮಿಕ್ ಎಮಿರೇಟ್ ಅಫ್ಘಾನಿಸ್ತಾನಕ್ಕೆ ಒಂದು ಪೈಸೆಯನ್ನೂ ನೀಡಿಲ್ಲ.
ಭಾರತದ ನೆರವು ಯುಎಸ್ ಅನ್ನು ಎದುರು ಹಾಕಿಕೊಳ್ಳುವ ಗುರಿಯನ್ನು ಹೊಂದಿಲ್ಲವಾದರೂ, ಅದನ್ನು ಪಾಕಿಸ್ತಾನಕ್ಕೆ ಎಚ್ಚರಿಕೆಯಾಗಿ ಬಳಸಿಕೊಳ್ಳಲಾಗುತ್ತದೆ.
ಯುಎಸ್ ಧನಸಹಾಯ ನೀಡಿರುವುದು ಎಷ್ಟರ ಮಟ್ಟಿಗೆ ನಿಜ ಎಂಬ ವಿಷಯ ಏನೇ ಇದ್ದರೂ ಈಗ ಭಾರತವು ಅಫ್ಘಾನಿಸ್ತಾನವನ್ನು ಬೆಂಬಲಿಸಲು ಮುಂದಾಗಲಿದೆಬಾಂಗ್ಲಾದೇಶವು ನೆರೆಯ ದೇಶವಾಗಿರುವುದರಿಂದ ಭಾರತವು ಅದನ್ನು ಹೇಗೋ ನಿಭಾಯಿಸಬಹುದು.
ಆದರೆ ಅಫ್ಘಾನಿಸ್ತಾನದ ದಾಳಿಗಳನ್ನು ತಡೆದುಕೊಳ್ಳುವುದು ಪಾಕಿಸ್ತಾನಕ್ಕೆ ತುಂಬಾ ಕಷ್ಟಕರವಾಗಲಿದೆ.ಪಾಕಿಸ್ತಾನವು ಬಾಂಗ್ಲಾದೇಶವನ್ನು ಭಾರತದ ವಿರುದ್ಧ ಬಳಸಿಕೊಂಡರೆ, ಇಸ್ಲಾಮಾಬಾದ್ ವಿರುದ್ಧ ಟಿಟಿಪಿ ಮತ್ತು ಬಲೂಚ್ ಅನ್ನು ಮತ್ತಷ್ಟು ಪ್ರಚೋದಿಸಲು ಕಾಬೂಲ್.
ಅನ್ನು ಬಳಸಿಕೊಳ್ಳುವ ಮೂಲಕ ಭಾರತವು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬುದು ಇತ್ತೀಚಿನ ಸಭೆ ಮತ್ತು ಅಫ್ಘಾನಿಸ್ತಾನಕ್ಕೆ ಭವಿಷ್ಯದಲ್ಲಿ ನೆರವು ನೀಡುವ ಭರವಸೆಗಳ ಮೌನ ಎಚ್ಚರಿಕೆಯಾಗಿದೆ.
Related