ಹೇ ಸೀತಾರಾಮ ನ್ಯೂಸ್ ಡೆಸ್ಕ್ : ಮೈಸೂರು ಮೂಲದ ಬೈಕ್ ತಯಾರಕ ಕಂಪನಿಯಾದ ಜಾವ ಯೆಜ್ಡಿ ತನ್ನ ಗ್ರಾಹಕರಿಗಾಗಿ ಹೊಸ ಅಡ್ವೆಂಚರ್ ಮಾದರಿಯನ್ನು ಪರಿಚಯಿಸಿದೆ. ನೂತನ ಮಾದರಿಯು ಮಾರುಕಟ್ಟೆಯಲ್ಲಿ ಗಮನ ಸೆಳೆದಿದ್ದು, ಸದ್ಯ ಬುಕ್ಕಿಂಗೂ ಕೂಡ ಆರಂಭವಾಗಿದೆ.
ಅಂದಹಾಗೆಯೇ ಕಂಪನಿ ರಾಯಲ್ ಎನ್ಫೀಲ್ಡ್ ಸೇರಿ ಕೆಲವು ಅಡ್ವೆಂಚರ್ ಬೈಕ್ಗೆ ಪೈಪೋಟಿ ನೀಡಲು ನೂತನ ಬೈಕನ್ನು ಪರಿಚಯಿಸಿದೆ. ಕಾಸ್ಮೆಟಿಕ್ ಲುಕ್ ಹಾಗೂ ಆಕರ್ಷಕ ಕಲರ್‌ನಿಂದ ಕೂಡಿದೆ.
ಇದನ್ನೂ ಓದಿ : ವಾಟ್ಸ್ಆ್ಯಪ್ ಹೊಸ ಫೀಚರ್! , ಇನ್ಮುಂದೆ ರೀಪ್ಲೈ ಮತ್ತಷ್ಟು ಸುಲಭ
ನೂತನ ಯೆಜ್ಡಿ ಅಡ್ವೆಂಚರ್ 334ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಗರಿಷ್ಠ 30 ಬಿಹೆಚ್ಪಿ ಮತ್ತು 30 ಎನ್ಎಮ್ ಟಾರ್ಕ್ ಉತ್ಪಾದಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಸಿಕ್ಸ್ ಗೇರ್ಸ್. ಕಚ್ಚಾ ರಸ್ತೆಯಲ್ಲಿಯೂ ಸರಾಗವಾಗಿ ಚಲಿಸಲು ಯೋಗ್ಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಅಡ್ವೆಂಜರ್ ಬೈಕ್ಗಳಿಗೆ ಇದು ಪೈಪೋಟಿ ನೀಡುತ್ತಿದೆ. ಗ್ರಾಹಕರಿಗಾಗಿ 2,09,900 ರೂಪಾಯಿಗೆ ಖರೀದಿಗೆ ಸಿಗುತ್ತಿದೆ.