WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
iPhone SE 4 Launch Date News:
IPHONE ಎಸ್ಇ 4ಕ್ಕಾಗಿ ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದೆ. ಫೆಬ್ರವರಿ 11ರಂದು ಮಾರುಕಟ್ಟೆ ಪ್ರಾರಂಭವಾಗಬಹುದು ಎಂದು ಈ ಹಿಂದೆ ವರದಿಯಾಗಿತ್ತು.
ಫೆಬ್ರವರಿ 11ರಂದು IPHONE ಎಸ್ಇ 4 ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಈಗ ಆ್ಯಪಲ್ ತನ್ನ ಬಿಡುಗಡೆಯನ್ನು ಮುಂದೂಡಿದೆ ಎಂದು ವರದಿಯೊಂದು ಹೇಳಿದೆ. ಈ ವಾರ ಆ್ಯಪಲ್ ವಿಷನ್ ಪ್ರೊ ಕುರಿತು ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ.
When is iPhone SE 4 Released?:ಇದಕ್ಕಾಗಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲಾಗುವುದಿಲ್ಲ ಮತ್ತು ಕಂಪೆನಿಯು ಪ್ರಿ-ರೆಕಾರ್ಡ್ ಮಾಡಿದ ವಿಡಿಯೋ ಮತ್ತು ಮಾಧ್ಯಮ ಪ್ರಕಟಣೆಯ ಮೂಲಕ ಬಿಡುಗಡೆ ಬಗ್ಗೆ ಮಾಹಿತಿ ನೀಡುತ್ತದೆ.ವರದಿಗಳ ಪ್ರಕಾರ, ಆ್ಯಪಲ್ ಮುಂದಿನ ವಾರದ ವೇಳೆಗೆ ಹೊಸ IPHONE ಘೋಷಿಸಬಹುದು.
iPhone SE 4 to come with a new design:ಇದು ಫುಲ್-ಸ್ಕ್ರೀನ್ ಡಿಸೈನ್ ಜೊತೆ ಬರಲಿದ್ದು, ಟಚ್ ಐಡಿ ಬದಲಿಗೆ ಫೇಸ್ ಐಡಿ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 18 ವರ್ಷಗಳ ನಂತರ ಹೋಮ್ ಬಟನ್ ವೈಶಿಷ್ಟ್ಯಕ್ಕೆ ವಿದಾಯ ಹೇಳಲಿದೆ. ಹಲವು ವರ್ಷಗಳ ನಂತರ ಆ್ಯಪಲ್ ಎಸ್ಇ ಸೀರಿಸ್ಫೋನ್ಗಳ ಡಿಸೈನ್ ಬದಲಾಯಿಸಲಿದೆ. ಈಗ IPHONE 8ರಂತೆಯೇ ವಿನ್ಯಾಸದ ಬದಲಿಗೆ, IPHONE SE 4 IPHONE 14 ಮತ್ತು IPHONE 16 ರ ವೈಶಿಷ್ಟ್ಯಗಳನ್ನು ಹೊಂದಿರಬಹುದು.
These could be the features of the new iPhone!:IPHONE 16ರಂತೆ ಇದು ಕಂಪೆನಿಯ ಪ್ರಮುಖ A18 ಚಿಪ್‌ಸೆಟ್ ಹೊಂದಬಹುದು. 8 GB RAMನೊಂದಿಗೆ ಜೋಡಿಸಲ್ಪಡುತ್ತದೆ. ಕನಿಷ್ಠ 128 GB ಇಂಟರ್ನಲ್ ಸ್ಟೋರೇಜ್ ಮತ್ತು ಆ್ಯಪಲ್ ಇಂಟೆಲಿಜೆನ್ಸ್ ಸಪೋರ್ಟ್ ಹೊಂದಿರುವ ನಿರೀಕ್ಷೆಯಿದೆ.
ಚಾರ್ಜಿಂಗ್ ಪೋರ್ಟ್‌ನಲ್ಲಿ ದೊಡ್ಡ ಬದಲಾವಣೆ ಕಂಡುಬರಲಿದ್ದು, USB-C ಪೋರ್ಟ್‌ನೊಂದಿಗೆ ಬಿಡುಗಡೆ ಮಾಡಲಾಗುವುದು. IPHONE ಎಸ್ಇ 4 6.1-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ರಿಯರ್ನಲ್ಲಿ 48MP ಸಿಂಗಲ್ ಕ್ಯಾಮೆರಾ ಲಭ್ಯ. ಪರ್ಫಾರ್ಮೆನ್ಸ್ ವಿಷಯದಲ್ಲಿ iPhone 16ನೊಂದಿಗೆ ಸ್ಪರ್ಧಿಸಲಿದೆ.
Price and Availability: ಭಾರತದಲ್ಲಿ IPHONE ಎಸ್ಇ 4 ಬೆಲೆ 49,900 ರೂ.ಗಳಿಂದ ಪ್ರಾರಂಭವಾಗಬಹುದು ಎಂದು ಊಹಿಸಲಾಗಿದೆ. ಆದರೆ ಇದನ್ನು ಕಂಪೆನಿ ಅಧಿಕೃತವಾಗಿ ದೃಢಪಡಿಸಿಲ್ಲ. ಬಿಡುಗಡೆಯಾದ ತಕ್ಷಣ ಅದರ ಪ್ರಿ-ಆರ್ಡರ್‌ಗಳು ಪ್ರಾರಂಭವಾಗುತ್ತವೆ. ಇದರ ಮಾರಾಟವೂ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.
ಇದನ್ನು ಓದಿರಿ :Google Pixel 9a Official Case Leakd