spot_img
spot_img

IPL 2025 RCB CAPTAIN : RCB ಮುಂದಿನ ನಾಯಕ ಯಾರು ಗೊತ್ತಾ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

IPL 2025 RCB Captain:

IPL 2025 RCB CAPTAIN ಇತ್ತೀಚೆಗೆ ಜೆಡ್ಡಾದಲ್ಲಿ 18ನೇ ಆವೃತ್ತಿ ಹಿನ್ನೆಲೆ ಆಟಗಾರರ ಮೆಗಾ ಹರಾಜು ನಡೆದಿತ್ತು. ಇದರಲ್ಲಿ ಎಲ್ಲಾ 10 ತಂಡಗಳು 639 ಕೋಟಿ ರೂಪಾಯಿ ಖರ್ಚು ಮಾಡಿ 182 ಆಟಗಾರರನ್ನು ಖರೀದಿ ಮಾಡಿವೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿ ಮುಗಿದ ಬೆನ್ನಲ್ಲೆ 18ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಪ್ರಾರಂಭವಾಗಲಿದೆ.

ಮಾರ್ಚ್​,21 ರಿಂದ ಚುಟುಕು ಕ್ರಿಕೆಟ್​ ಹಬ್ಬ ಪ್ರಾರಂಭವಾಗಲಿದ್ದು ಎರಡು ತಿಂಗಳು ಕಾಲ ನಡೆಯಲಿದೆ. ಕಳೆದ 17 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್​ ಗೆಲ್ಲಲು ಸಾಧ್ಯವಾಗಿರದ ಆರ್​ಸಿಬಿ ಈಬಾರಿ ಶತಾಯಗತ ಟ್ರೋಫಿ ಗೆಲ್ಲಲು ಪಣತೊಟ್ಟಿದೆ.

IPL 2025 RCB CAPTAIN  ಈ ಹಿನ್ನೆಲೆ ಮೆಗಾ ಹರಾಜಿನಲ್ಲಿ ಟಿ20ಗೆ ಅಂತಲೇ ಹೇಳಿ ಮಾಡಿಸಿರುವಂತಹ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನ ಕಟ್ಟಿದೆ. ಆದರೆ ಕಳೆದ ವರ್ಷ ಆರ್​ಸಿಬಿ ತಂಡವನ್ನು ನಾಯಕನಾಗಿ ಮುನ್ನಡೆಸಿ ಪ್ಲೇಆಪ್​ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದ ಫಾಪ್​ ಡು ಪ್ಲೆಸಿಸ್​ ಅವರನ್ನು ಈ ಬಾರಿ ಕೈಬಿಡಲಾಗಿದೆ. ಇದರ ಬೆನ್ನಲ್ಲೆ ಆರ್​ಸಿಬಿಯ ಮುನ್ನಡೆಸುವ ಜವಾಬ್ದಾರಿ ಯಾರ ಹೆಗಲಿಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.

ಏತನ್ಮಧ್ಯೆ, ಈಗಾಗಲೇ ನಾಲ್ಕು ತಂಡಗಳಾದ ಮುಂಬೈ ಇಂಡಿಯನ್​, ಪಂಜಾಬ್​ ಕಿಂಗ್ಸ್​, ಚೆನ್ನೈ ಸೂಪರ್​ ಕಿಂಗ್ಸ್​, ಗುಜರಾತ್​ ಟೈಟಾನ್ಸ್​ ನಾಯಕಗಳಿ ಘೋಷಣೆ ಆಗಿದ್ದು, ಉಳಿದ ನಾಲ್ಕು ತಂಡಗಳಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB), ಕೋಲ್ಕತ್ತಾ ನೈಟ್​ ರೈಡರ್ಸ್​, ಲಕ್ನೋ ಸೂಪರ್​ ಜೈಂಟ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ನಾಯಕನ ಹುಡುಕಾಟದಲ್ಲಿವೆ. ಇದರ ನಡುವೆಯೆ ಆರ್​ಸಿಬಿಯ ಮುಂದಿನ ನಾಯಕ ಯಾರಾಗಬಹುದು ಎಂಬುದರ ಬಗ್ಗೆ ಫ್ರಾಂಚೈಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಳಿವು ನೀಡಿದ್ದಾರೆ.

 Kohli-led RCB loss-win:

ವಿರಾಟ್ ಕೊಹ್ಲಿ (Virat Kohli) ಒಟ್ಟು 143 ಪಂದ್ಯಗಳಲ್ಲಿ ಆರ್​ಸಿಬಿ ನಾಯಕನಾಗಿ ಮುನ್ನಡೆಸಿದ್ದಾರೆ. ಈ ವೇಳೆ ಅವರ ನಾಯಕತ್ವದಲ್ಲಿ ಆರ್​ಸಿಬಿ 70 ಬಾರಿ ಸೋಲನ್ನು ಕಂಡಿದೆ ಮತ್ತು 66 ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ,

ಕೊಹ್ಲಿ ನಾಯಕತ್ವದ ಅವಧಿಯಲ್ಲಿ ಒಮ್ಮೆಯೂ ಆರ್‌ಸಿಬಿಯನ್ನು ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಆದರೆ, 2016ರಲ್ಲಿ ಆರ್​ಸಿಬಿ ಫೈನಲ್ ತಲುಪಿತ್ತು. ಕೊಹ್ಲಿ 2013 ರಿಂದ 2021 ರವರೆಗೆ ಆರ್​ಸಿಬಿ ನಾಯಕರಾಗಿದ್ದರು.

RCB Next Captain:

“ತಂಡವನ್ನು ಮುನ್ನಡೆಸಬಲ್ಲ ಅನೇಕ ಅನುಭವಿ ಆಟಗಾರರು ನಮ್ಮಲ್ಲಿದ್ದಾರೆ. ಆದ್ದರಿಂದ, ನಾವು ಮೌಲ್ಯಮಾಪನ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಐಪಿಎಲ್​ ಆರಂಭಕ್ಕೆ ಇನ್ನು ಸಮಯ ಇರುವ ಕಾರಣ ಮುಂದಿನ ನಾಯಕನ ಬಗ್ಗೆ ನಿರ್ಧರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ವಿರಾಟ್​ ಕೊಹ್ಲಿ RCB ಮುಂದಿನ ನಾಯಕ ಆಗಲಿದ್ದಾರೆ ಎಂಬ ಊಹಾಪೊಗಳು ಹರಿದಾಡುತ್ತಿವೆ. ಇದರ ನಡುವೆಯೇ RCB ಮುಂದಿನ ನಾಯಕ ಯಾರು ಎಂದು ಫ್ರಾಂಚೈಸಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಮೆನನ್​ಗೆ ಸ್ಪೋರ್ಟ್​ ಟುಡೆಗೆ ನೀಡಿದ ಸಂದರ್ಶನದಲ್ಲಿ ಬಿಗ್​ ಅಪ್ಡೇಟ್​ ನೀಡಿದ್ದಾರೆ.

ಇದನ್ನು ಓದಿರಿ : Healthcare Experts Hail Budget 2025 For Cancer Care Upgrade, 10,000 New Medical Seats

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...