IPL 2025 RQB Captain News:
ಮಾರ್ಚ್,21 ರಿಂದ ಚುಟುಕು ಕ್ರಿಕೆಟ್ ಹಬ್ಬ ಪ್ರಾರಂಭವಾಗಲಿದ್ದು ಎರಡು ತಿಂಗಳು ಕಾಲ ನಡೆಯಲಿದೆ.ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಗಿದ ಬೆನ್ನಲ್ಲೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದೆ.ಇತ್ತೀಚೆಗೆ ಜೆಡ್ಡಾದಲ್ಲಿ 18ನೇ ಆವೃತ್ತಿ ಹಿನ್ನೆಲೆ ಆಟಗಾರರ ಮೆಗಾ ಹರಾಜು ನಡೆದಿತ್ತು. ಇದರಲ್ಲಿ ಎಲ್ಲಾ 10 ತಂಡಗಳು 639 ಕೋಟಿ ರೂಪಾಯಿ ಖರ್ಚು ಮಾಡಿ 182 ಆಟಗಾರರನ್ನು ಖರೀದಿ ಮಾಡಿವೆ. ಇದರ ನಡುವೆಯೆ ಆರ್ಸಿಬಿಯ ಮುಂದಿನ ನಾಯಕ ಯಾರಾಗಬಹುದು ಎಂಬುದರ ಬಗ್ಗೆ ಫ್ರಾಂಚೈಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಳಿವು ನೀಡಿದ್ದಾರೆ.
ಏತನ್ಮಧ್ಯೆ, ಈಗಾಗಲೇ ನಾಲ್ಕು ತಂಡಗಳಾದ ಮುಂಬೈ ಇಂಡಿಯನ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ನಾಯಕಗಳಿ ಘೋಷಣೆ ಆಗಿದ್ದು, ಉಳಿದ ನಾಲ್ಕು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ CAPTAIN ನಾಯಕನ ಹುಡುಕಾಟದಲ್ಲಿವೆ.ಆದರೆ ಕಳೆದ ವರ್ಷ ಆರ್ಸಿಬಿ ತಂಡವನ್ನು ನಾಯಕನಾಗಿ ಮುನ್ನಡೆಸಿ ಪ್ಲೇಆಪ್ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದ ಫಾಪ್ ಡು ಪ್ಲೆಸಿಸ್ ಅವರನ್ನು ಈ ಬಾರಿ ಕೈಬಿಡಲಾಗಿದೆ.
ಇದರ ಬೆನ್ನಲ್ಲೆ ಆರ್ಸಿಬಿಯ ಮುನ್ನಡೆಸುವ ಜವಾಬ್ದಾರಿ ಯಾರ ಹೆಗಲಿಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.ಕಳೆದ 17 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿರದ ಆರ್ಸಿಬಿ ಈಬಾರಿ ಶತಾಯಗತ ಟ್ರೋಫಿ ಗೆಲ್ಲಲು ಪಣತೊಟ್ಟಿದೆ. ಈ ಹಿನ್ನೆಲೆ ಮೆಗಾ ಹರಾಜಿನಲ್ಲಿ ಟಿ20ಗೆ ಅಂತಲೇ ಹೇಳಿ ಮಾಡಿಸಿರುವಂತಹ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನ ಕಟ್ಟಿದೆ.
RCB Next Captain: “ತಂಡವನ್ನು ಮುನ್ನಡೆಸಬಲ್ಲ ಅನೇಕ ಅನುಭವಿ ಆಟಗಾರರು ನಮ್ಮಲ್ಲಿದ್ದಾರೆ. ಆದ್ದರಿಂದ, ನಾವು ಮೌಲ್ಯಮಾಪನ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಐಪಿಎಲ್ ಆರಂಭಕ್ಕೆ ಇನ್ನು ಸಮಯ ಇರುವ ಕಾರಣ ಮುಂದಿನ ನಾಯಕನ ಬಗ್ಗೆ ನಿರ್ಧರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ವಿರಾಟ್ ಕೊಹ್ಲಿ RCB ಮುಂದಿನ ನಾಯಕ ಆಗಲಿದ್ದಾರೆ ಎಂಬ ಊಹಾಪೊಗಳು ಹರಿದಾಡುತ್ತಿವೆ.ಇದರ ನಡುವೆಯೇ RCB ಮುಂದಿನ ನಾಯಕ ಯಾರು ಎಂದು ಫ್ರಾಂಚೈಸಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಮೆನನ್ಗೆ ಸ್ಪೋರ್ಟ್ ಟುಡೆಗೆ ನೀಡಿದ ಸಂದರ್ಶನದಲ್ಲಿ ಬಿಗ್ ಅಪ್ಡೇಟ್ ನೀಡಿದ್ದಾರೆ.
Kohli-led RCB loss-win:ಈ ವೇಳೆ ಅವರ ನಾಯಕತ್ವದಲ್ಲಿ ಆರ್ಸಿಬಿ 70 ಬಾರಿ ಸೋಲನ್ನು ಕಂಡಿದೆ ಮತ್ತು 66 ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ, ಕೊಹ್ಲಿ ನಾಯಕತ್ವದ ಅವಧಿಯಲ್ಲಿ ಒಮ್ಮೆಯೂ ಆರ್‌ಸಿಬಿಯನ್ನು ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ.
ಆದರೆ, 2016ರಲ್ಲಿ ಆರ್ಸಿಬಿ ಫೈನಲ್ ತಲುಪಿತ್ತು. ಕೊಹ್ಲಿ 2013 ರಿಂದ 2021 ರವರೆಗೆ ಆರ್ಸಿಬಿ ನಾಯಕರಾಗಿದ್ದರು.ವಿರಾಟ್ ಕೊಹ್ಲಿ (Virat Kohli) ಒಟ್ಟು 143 ಪಂದ್ಯಗಳಲ್ಲಿ ಆರ್ಸಿಬಿ ನಾಯಕನಾಗಿ ಮುನ್ನಡೆಸಿದ್ದಾರೆ.