JioHotstar Subscription:
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ ಗ್ರಾಹಕರನ್ನು ಸೆಳೆಯಲು ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಕೈಗೆಟುಕುವ ದರಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಹೊಸ ಪ್ಲಾನ್ಗಳನ್ನು ಘೋಷಿಸುತ್ತಿವೆ. IPL SUBSCRIPTION PLANS
ಸದ್ಯ ಜಿಯೋದ ಎರಡು ರೀಚಾರ್ಜ್ ಪ್ಲಾನ್ನಲ್ಲಿ ಮೂರು ತಿಂಗಳ ಕಾಲ ಜಿಯೋಹಾಟ್‌ಸ್ಟಾರ್‌ನ ಉಚಿತ ಸಬ್ಸ್ಕ್ರೀಪ್ಶನ್ ಅನ್ನು 200 ರೂ.ಗಿಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ವೊಡಾಫೋನ್ ಐಡಿಯಾ ಕೂಡ ತನ್ನ ಯೋಜನೆಗಳಲ್ಲಿ ಈ ಪ್ರಯೋಜನ ನೀಡುತ್ತಿದೆ.
ರಿಲಯನ್ಸ್ ಜಿಯೋ ತನ್ನ ಮೊಬೈಲ್ ಸಬ್ಸ್ಕ್ರೀಪ್ಶನ್ನ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಕಟಿಸಿದೆ. ಇದರಲ್ಲಿ ಬಳಕೆದಾರರು ಹೊಸ OTT ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ಗೆ ಸಬ್ಸ್ಕ್ರೀಪ್ಶನ್ ಪಡೆಯುತ್ತಾರೆ. ಇತ್ತೀಚೆಗೆ ಜಿಯೋ ಮತ್ತು ಹಾಟ್‌ಸ್ಟಾರ್ ಒಟ್ಟಾಗಿ ಜಿಯೋಹಾಟ್‌ಸ್ಟಾರ್ ಆಗಿರುವುದು ಗೊತ್ತಿರುವ ಸಂಗತಿ. ಈ OTT ಪ್ಲಾಟ್‌ಫಾರ್ಮ್‌ನ ಫ್ರೀ ಸಬ್ಸ್ಕ್ರೀಪ್ಶನ್ ಅನ್ನು ಅನೇಕ ರೀಚಾರ್ಜ್ ಯೋಜನೆಗಳೊಂದಿಗೆ ನೀಡಲಾಗುತ್ತಿದೆ.
ಜಿಯೋದ ಹೊಸ ಪ್ರಿಪೇಯ್ಡ್ ಯೋಜನೆಯ ಬೆಲೆ 100 ರೂ.
ಮಾನ್ಯತೆ 90 ದಿನಗಳು
5GB ಡೇಟಾ. ಈ ಡೇಟಾ ಮುಗಿದ ನಂತರ 64 GBPS ವೇಗದ ಡೇಟಾ
ಜಿಯೋಹಾಟ್‌ಸ್ಟಾರ್‌ನ ಸಬ್ಸ್ಕ್ರೀಪ್ಶನ್ ಲಭ್ಯ. ತಮ್ಮ ಸ್ಮಾರ್ಟ್‌ಫೋನ್‌ಗಳು ಅಥವಾ ಸ್ಮಾರ್ಟ್ ಟಿವಿಗಳಲ್ಲಿ ಜಿಯೋಹಾಟ್‌ಸ್ಟಾರ್ ಅನ್ನು ಉಚಿತವಾಗಿ ವೀಕ್ಷಿಸಬಹುದು.
ಬಳಕೆದಾರರು ಮೊಬೈಲ್‌ನಲ್ಲಿ ಮಾತ್ರವಲ್ಲದೆ ಸ್ಮಾರ್ಟ್ ಟಿವಿಯಲ್ಲಿ 90 ದಿನಗಳವರೆಗೆ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಪಡೆಯುತ್ತಾರೆ. ಆದರೂ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯು ಜಿಯೋ 195 ರೂ ಮತ್ತು 949 ರೂ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಉಚಿತವಾಗಿ ಲಭ್ಯವಿದೆ.
Jio’s Rs 195 prepaid plan:
ಮಾನ್ಯತೆ 90 ದಿನಗಳು.
15GB ಡೇಟಾ
90 ದಿನಗಳವರೆಗೆ JioHotstar ಮೊಬೈಲ್‌ನ ಸಬ್ಸ್ಕ್ರೀಪ್ಶನ್
ಜಿಯೋಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಗೆ ತಿಂಗಳಿಗೆ 149 ರೂ. ಇದೆ. ಅದೇ ಒಂದು ವರ್ಷಕ್ಕೆ 499 ರೂ. ಇದೆ.
720p ವಿಡಿಯೋ ಕ್ವಾಲಿಟಿಗೆ ಪ್ರವೇಶವಿದೆ. ಆದರೆ ಅದರ ಪ್ರಯೋಜನವನ್ನು ಮೊಬೈಲ್‌ನಲ್ಲಿ ಮಾತ್ರ ಪಡೆಯಬಹುದು.
Jio’s Rs 949 prepaid plan:
ಮಾನ್ಯತೆ 84 ದಿನಗಳು.
ದಿನಕ್ಕೆ 2GB ಡೇಟಾ
84 ದಿನಗಳಲ್ಲಿ ಒಟ್ಟು 168GB ಡೇಟಾ ಪಡೆಯುತ್ತಾರೆ.
ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್, 5G ಕನೆಕ್ಟ್ ಮತ್ತು ದಿನಕ್ಕೆ 100 SMS ಸೌಲಭ್ಯ.
ಜಿಯೋಹಾಟ್‌ಸ್ಟಾರ್, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನ ಚಂದಾದಾರಿಕೆಯನ್ನೂ ಪಡೆಯಬಹುದು.
Vi recharge Rs 469:
ಜಿಯೋದಂತೆ ವೊಡಾಫೋನ್ ಐಡಿಯಾ ಕೂಡ ತನ್ನ ರೀಚಾರ್ಜ್ ಯೋಜನೆಯಲ್ಲಿ ಜಿಯೋಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆ ನೀಡುತ್ತಿದೆ.
ಅನ್ಲಿಮಿಟೆಡ್ ಕಾಲ್ಸ್
ದಿನಕ್ಕೆ 2.5 ಜಿಬಿ ಡೇಟಾ
100 ಎಸ್‌ಎಂಎಸ್
ಮಧ್ಯರಾತ್ರಿ 12ರಿಂದ ಮಧ್ಯರಾತ್ರಿ 12ರವರೆಗೆ ಅನ್ಲಿಮಿಟೆಡ್ ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ಒದಗಿಸಲಾಗುತ್ತಿದೆ.
JioHotstar ಚಂದಾದಾರಿಕೆಯನ್ನು ಬಳಕೆದಾರರಿಗೆ 3 ತಿಂಗಳವರೆಗೆ ನೀಡಲಾಗುತ್ತಿದೆ.
ಸಿಂಧುತ್ವ 28 ದಿನಗಳಾಗಿದ್ದರೂ ಚಂದಾದಾರಿಕೆಯು ಪೂರ್ಣ ಮೂರು ತಿಂಗಳವರೆಗೆ ಇರುತ್ತದೆ.
ಇದನ್ನು ಓದಿ : 20-Year-Old Man Shot Dead On Busy Road In UP’s Lakhimpur Kheri