spot_img
spot_img

ಭಾರತದ ಮಾರುಕಟ್ಟೆಗೆ ಐಕ್ಯೂ 13

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್ ಲಗ್ಗೆಯಿಟ್ಟಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಐಕ್ಯೂ ತನ್ನ ಹೊಸ ‘ಐಕ್ಯೂ 13’ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇತ್ತೀಚೆಗೆ ಈ ಫೋನ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಈ ಮೊಬೈಲ್‌ ಪವರ್​ಫುಲ್​ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಒಳಗೊಂಡಿದೆ.

ಚೀನಾದಲ್ಲಿ ಬಿಡುಗಡೆಯಾದ ‘ಐಕ್ಯೂ 13’ ಗೆ ಹೋಲಿಸಿದರೆ, ಭಾರತೀಯ ರೂಪಾಂತರವು ಶಕ್ತಿಶಾಲಿಯಾದ ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್‌ಫೋನ್ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಖರೀದಿಗೆ

ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.
‘ಐಕ್ಯೂ 13’ ಫೀಚರ್​ಗಳು:
ಡಿಸ್​ಪ್ಲೇ: 6.82-ಇಂಚಿನ LTPO AMOLED ಫ್ಲಾಟ್ ಸ್ಕ್ರೀನ್
ರೆಸಲ್ಯೂಶನ್: 2K
ರಿಫ್ರೆಶ್ ರೇಟ್​: 144Hz
ಪ್ರೊಸೆಸರ್: Qualcomm Snapdragon 8 Elite
ರಿಯರ್​ ಕ್ಯಾಮೆರಾ: 50MP ಪ್ರಾಥಮಿಕ (ಸೋನಿ IMX921) + 50MP ಅಲ್ಟ್ರಾ-ವೈಡ್ + 50MP ಟೆಲಿಫೋಟೋ
ಫ್ರಂಟ್​ ಕ್ಯಾಮೆರಾ: 32MP
ಬ್ಯಾಟರಿ: 6,000mAh
ಚಾರ್ಜಿಂಗ್: 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್​
ಆಪರೇಟಿಂಗ್ ಸಿಸ್ಟಮ್: Android 15 ಆಧಾರಿತ FunTouchOS 15
ಅಪ್​ಡೇಟ್ಸ್​: 4 Android ಅಪ್​ಡೇಟ್ಸ್​, 5 ವರ್ಷಗಳ ಭದ್ರತಾ ಅಪ್​ಡೇಟ್ಸ್​
ಪ್ರೊಟೆಕ್ಷನ್​: IP68/IP69

ಇದರಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಜೊತೆಗೆ ಕ್ಯೂ2 ಸೂಪರ್ ಕಂಪ್ಯೂಟಿಂಗ್ ಅನ್ನು ಗೇಮಿಂಗ್‌ಗಾಗಿ ನೀಡಲಾಗಿದೆ. ಇದು 2K ಗೇಮ್ ಸೂಪರ್ ರೆಸಲ್ಯೂಶನ್ ಹೊಂದಿದೆ. ಇದು ಗ್ರಾಫಿಕ್ಸ್ ಅನ್ನು ಇನ್ನಷ್ಟು ಸುಧಾರಿಸುತ್ತದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್‌ನಲ್ಲಿರುವ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯು ಫೋನ್ ಅನ್ನು ಹೆಚ್ಚು ಬಿಸಿಯಾಗದಂತೆ ರಕ್ಷಿಸುತ್ತದೆ.

ಸ್ಮಾರ್ಟ್​ಫೋನ್​ 50MP ರಿಯರ್​ ಕ್ಯಾಮೆರಾ, 50MP ಅಲ್ಟ್ರಾವೈಡ್ ಸೆನ್ಸಾರ್​ ಮತ್ತು 50MP 2x ಟೆಲಿಫೋಟೋ ಸೆನ್ಸಾರ್​ ಹೊಂದಿದೆ. ಇದು ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್​ ಮಾಡುತ್ತದೆ. ಡಸ್ಟ್​ ಮತ್ತು ವಾಟರ್​ ರೆಸಿಸ್ಟೆನ್ಸಿ ಜೊತೆ ಫೋನ್ IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ಮಾರ್ಟ್ಫೋನ್ ‘ಮಾನ್ಸ್ಟರ್ ಹ್ಯಾಲೊ’ ಲೈಟ್​ ಎಪೆಕ್ಟ್​ ಹೊಂದಿದೆ. ಈ ಡಿಸೈನ್​ ಕ್ಯಾಮೆರಾ ಮಾಡ್ಯೂಲ್ ಸುತ್ತ ಸುತ್ತುತ್ತದೆ. ಕಾಲ್​, ಮೆಸೇಜ್​ ಅಥವಾ ಮೊಬೈಲ್‌ನಲ್ಲಿ ಚಾರ್ಜ್ ಮಾಡುವಂತಹ ಸೂಚನೆಗಳನ್ನು ನೀಡಲು ಇದು ಉಪಯುಕ್ತವಾಗಿದೆ.

ಇದು ಎರಡು ಬಣ್ಣದ ಆಯ್ಕೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ. ಮೊದಲನೆಯದು ‘ನಾರ್ಡೊ ಗ್ರೇ’ (ಇಟಾಲಿಯನ್ ರೇಸಿಂಗ್ ಕಾರ್ ವಿನ್ಯಾಸವನ್ನು ಆಧರಿಸಿದೆ) ಮತ್ತು ಎರಡನೆಯದು ‘ಲೆಜೆಂಡ್ ಎಡಿಷನ್​​’ (BMW ಮೋಟಾರ್‌ಸ್ಪೋರ್ಟ್‌ಗೆ ಹೋಲುವ ಮೂರು ಬಣ್ಣದ ಪಟ್ಟಿಗಳೊಂದಿಗೆ ಬರುತ್ತದೆ).

‘ಐಕ್ಯೂ 13’ 12GB RAM + 256GB ರೂಪಾಂತರದ ಬೆಲೆ 54,999 ರೂಪಾಯಿ ಒಳಗೊಂಡಿದೆ. ಆದ್ರೆ ಬ್ಯಾಂಕ್​ ಆಫರ್​ನಿಂದ ಈ ಫೋನ್​ 51,999 ರೂ.ಗೆ ಲಭ್ಯವಾಗಲಿದೆ. ‘ಐಕ್ಯೂ 13’ 16GB RAM + 512GB ರೂಪಾಂತರದ ಬೆಲೆ 59,999 ರೂಪಾಯಿ ಒಳಗೊಂಡಿದ್ದು, ಬ್ಯಾಂಕ್​ ಆಫರ್​ನಲ್ಲಿ 56,999 ರೂ.ಗೆ ಲಭ್ಯವಾಗಲಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

205 INDIANS DEPORTED BY US:ಅಕ್ರಮವಾಗಿ ಅಮೆರಿಕದಲ್ಲಿದ್ದ ಭಾರತೀಯರ ಗಡಿಪಾರು

Amritsar News: ಅಕ್ರಮ ವಲಸಿಗರ ವಿರುದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕಠಿಣಕ್ರಮ ಕೈಗೊಂಡಿದ್ದಾರೆ. ಅದರಂತೆ ದಾಖಲೆ ರಹಿತವಾಗಿ ಅಮೆರಿಕದಲ್ಲಿ ನೆಲೆನಿಂತಿದ್ದ INDIANSನ್ನು ಮರಳಿ ತವರಿಗೆ...

DONALD TRUMP ORDERS:ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಕ್ಕೆ ಟ್ರಂಪ್ ಆದೇಶ

Washington DC (USA) News: ಅಮೆರಿಕವನ್ನು ಡಬ್ಲ್ಯೂಎಚ್​​ಒದಿಂದ ಹೊರತಂದಿದ್ದ TRUMP ಇದೀಗ, ವಿಶ್ವವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದಲೂ ಹಿಂತೆಗೆದುಕೊಂಡಿದ್ದಾರೆ.ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರಕ್ಕೆ, ಪ್ಯಾಲೆಸ್ಟೈನ್​...

PREGNANCY AGE TIPS:ವಯಸ್ಸು 36, ಈಗ ಎರಡನೇ ಮಗುವಿಗೆ ಪ್ರಯತ್ನಿಸಬಹುದೇ?

Confused About Having Second Child News: ಅವಿಭಕ್ತ ಕುಟುಂಬದಲ್ಲಿ ಮನೆಯವರೆಲ್ಲ ಸೇರಿ ಮಕ್ಕಳಿಗೆ ಆಟ, ಪಾಠದ ನಡುವೆ ಜೀವನದ ಪಾಠವನ್ನು ಕಲಿಸುತ್ತಿದ್ದರು. ಆದರೆ ಕಾಲ...

VIRAT KOHLI RANJI TROPHY:ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್.

New Delhi News: ಇದರೊಂದಿಗೆ ಕೇವಲ 6 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ...