spot_img
spot_img

IQOO NEO 10R : ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕ್ಯೂ ನ್ಯೂ ಸ್ಮಾರ್ಟ್ಫೋನ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

iQOO Neo 10R India Launch Confirmed News:

ಐಕ್ಯೂ ತನ್ನ ಮುಂಬರುವ ಸ್ಮಾರ್ಟ್​ಫೋನ್​ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಬಗ್ಗೆ ಐಕ್ಯೂ ಕಂಪನಿ ಸಿಇಒ ಏನ್​ ಹೇಳಿದ್ದಾರೆ ಎಂಬುದು ತಿಳಿದುಕೊಳ್ಳೋಣ.ವಿವೋ ಸಬ್ ಬ್ರಾಂಡ್ ಕಂಪನಿ ಆದ ಐಕ್ಯೂನಿಂದ ಹೊಸ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಕಂಪನಿಯು ಇದನ್ನು ‘IQOO NEO 10R’ ಹೆಸರಿನಲ್ಲಿ ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯ ಸಿಇಒ ಖಚಿತಪಡಿಸಿದ್ದಾರೆ.ಸಿಇಒ ಪೋಸ್ಟ್ ಮಾಡಿದ ಈ ನಿಗೂಢ ಟ್ವೀಟ್‌ನಲ್ಲಿರುವ ಆರ್ ಅಕ್ಷರಗಳನ್ನು ದಪ್ಪಕ್ಷರಗಳಲ್ಲಿ ಹೈಲೈಟ್ ಮಾಡಲಾಗಿದೆ.

ಐಕ್ಯೂನ ಸಿಇಒ ಪೋಸ್ಟ್ ಮಾಡಿದ ಈ ಟ್ವೀಟ್ ಪ್ರಕಾರ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ‘iQoo Neo 10R’ ಅನ್ನು ಬಿಡುಗಡೆ ಮಾಡಲಿದೆ ಎಂದು ತೋರುತ್ತದೆ.ತಮ್ಮ ಹೊಸ ಸ್ಮಾರ್ಟ್​ಫೋನ್​ ಬಿಡುಗಡೆ ಬಗ್ಗೆ ಐಕ್ಯೂ ಸಿಇಒ ನಿಪುನ್ ಮರಿಯಾ ಶುಕ್ರವಾರ ಮಧ್ಯಾಹ್ನ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ, 2025ರ ಮೊದಲ ಅದ್ಭುತ ಐಕ್ಯೂ ಫೋನ್‌ಗೆ ನೀವು ಸಿದ್ಧರಿದ್ದೀರಾ?, ಆದರೆ ಇದನ್ನು ಓದಿ – ಈ ಟ್ವೀಟ್‌ಗೆ ಅದು ಸರಿಯಾಗಿರಬಹುದು ಎಂದು ಅವರು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.

Expected Features and Specifications: ಇದಲ್ಲದೇ ಈ ಫೋನ್‌ನಲ್ಲಿ 60fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಸಹ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6400mAh ಬ್ಯಾಟರಿಯೊಂದಿಗೆ ಬರಲಿದೆ ಎಂಬ ಮಾಹಿತಿಗಳು ಹೊರ ಬಿದ್ದಿವೆ. ಈ ಫೋನ್ 1.5K AMOLED ಡಿಸ್​ಪ್ಲೇಯನ್ನು ಹೊಂದಿರಬಹುದು. ಇದರ ರಿಫ್ರೆಶ್ ರೇಟ್​ 144Hz ಆಗಿರಬಹುದು.

ಈ ಫೋನಿನ ಹೆಚ್ಚಿನ ರೆಸಲ್ಯೂಶನ್ ಡಿಸ್​ಪ್ಲೇ ಬಳಕೆದಾರರಿಗೆ ಉತ್ತಮ 4K ವಿಡಿಯೋ ವೀಕ್ಷಣೆ ಅನುಭವ ಒದಗಿಸುತ್ತದೆ.ಈ ಫೋನ್ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ. ಈ ಸ್ಮಾರ್ಟ್‌ಫೋನ್ ಕೆಲವು ವಾರಗಳಲ್ಲಿ ಬಿಡುಗಡೆಯಾಗಬಹುದಾಗಿದೆ. ಕಂಪನಿಯು ಶೀಘ್ರದಲ್ಲೇ ಈ ಮುಂಬರುವ ತಮ್ಮ ಹೊಸ ಫೋನ್‌ನ ವಿವರಗಳನ್ನು ಹಂಚಿಕೊಳ್ಳಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ.

Price: ಅಂದಿನಿಂದ ಕಂಪನಿಯು ಈ ಶ್ರೇಣಿಯಲ್ಲಿ ಪ್ರಮುಖ ಕಾರ್ಯಕ್ಷಮತೆಯನ್ನು ಹೊಂದಿರುವ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ಇತ್ತೀಚಿನ ಸ್ಮಾರ್ಟ್​ಫೋನ್ ಮೂಲಕ ಬಳಕೆದಾರರು ಗೇಮಿಂಗ್ ಅನುಭವವನ್ನು ಸುಧಾರಿಸುವ ಗುರಿಯನ್ನು ಕಂಪನಿ ಹೊಂದಿದೆ.

ಕಂಪನಿಯು ಈ ‘IQOO NEO 10R​’ ಸ್ಮಾರ್ಟ್‌ಫೋನ್ 30 ಸಾವಿರ ರೂ. ರೇಂಜ್​ನಲ್ಲಿ ಬಿಡುಗಡೆ ಮಾಡಬಹುದು. iQoo Neo ಶ್ರೇಣಿಯಲ್ಲಿನ ಮೊದಲ ಫೋನ್ 2022 ರಲ್ಲಿ ಬಿಡುಗಡೆಯಾಗಿರುವುದು ಗಮನಾರ್ಹ.

ಇದನ್ನು ಓದಿರಿ : BITTER MELON HEALTH BENEFITS : ಹಾಗಲಕಾಯಿ ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಲು ಸಾಧ್ಯವಿದೆಯೇ?

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...