spot_img
spot_img

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ ತುಪ್ಪವೂ ಶುದ್ಧವಿಲ್ವಾ ಅನ್ನೋ ಸಂಶಯಗಳು ತಲೆ ಎತ್ತಿವೆ. ತುಪ್ಪ ಅನ್ನೋದು ಪ್ರತಿ ಭಾರತೀಯರ ಅಡುಗೆಮನೆಯಲ್ಲಿ ತನ್ನದೇ ಒಂದು ಸ್ಥಾನವನ್ನು ಸಹಸ್ರಾರು ವರ್ಷಗಳಿಂದ ಕಾಯ್ದುಕೊಂಡು ಬಂದಿದೆ.

ಇದನ್ನೂ ಓದಿ : ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ನೈವೇದ್ಯದಿಂದ ಹಿಡಿದು ಮಹಾಯಾಗದವರೆಗೂ ನಮಗೆ ತುಪ್ಪ ಬೇಕೇ ಬೇಕು. ಹೀಗಾಗಿ ಅದು ಅಶುದ್ಧಿಯಿಂದ ಕೂಡಿದ್ದರೆ. ನಾವು ಮಾಡುವ ಎಲ್ಲಾ ಪುಣ್ಯ ಕಾರ್ಯಗಳು ನೀರಲ್ಲಿ ಹೋಮ ಮಾಡಿದಂತೆಯೇ. ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ? ಇಲ್ಲವೇ ಕಲಬೆರಕೆಯಿಂದ ಕೂಡಿದೆಯಾ ಅನ್ನೋದನ್ನ ಕಂಡು ಹಿಡಿಯಲು ಇಲ್ಲಿ ಕೆಲವು ಟಿಪ್ಸ್​​ಗಳಿವೆ.

 

ನಿಮ್ಮ ತುಪ್ಪ ಶುದ್ಧವಿದೆಯಾ ಅನ್ನೋದು ತಿಳಿದುಕೊಳ್ಳಬೇಕಾದ ಮೊದಲ ಹೆಜ್ಜೆ ಅದರ ಬಂಗಾರದ ಹಳದಿ ಬಣ್ಣದಿಂದ ಕೂಡಿದೆಯಾ ಇಲ್ವಾ ಅನ್ನೋದು. ಶುದ್ಧ ತುಪ್ಪ ಅಪ್ಪಟ ಬಂಗಾರದ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರಾಚೆ ಇರುವ ಮೇಲೆ ಹರಳು ಹರಳು ಇದ್ದರೂ ಬಿಳಿ ಬಣ್ಣದಿಂದ ಕೂಡಿದ್ದರೆ ಅದು ಅಪ್ಪಟ ಕಲಬೆರಕೆ ತುಪ್ಪ ಎಂದು ತಿಳಿದುಕೊಳ್ಳಿ.

ಇದನ್ನೂ ಓದಿ : ಸದ್ಯದಲ್ಲೇ ಬರಲಿದೆ iPhone SE4 ನಿಮ್ಮ ಬಜೆಟ್ ಬೇಲೆಗೆ.!

ಇನ್ನೊಂದು ವಿಷಯ ಅಂದ್ರೆ ತುಪ್ಪವನ್ನು ಸಿದ್ಧಗೊಳಿಸಿ ಅದನ್ನು ತೆಗೆದಿಟ್ಟಾಗ ಮೇಲೆ ಎಣ್ಣೆಯಂತಹ ಹೊದಿಕೆ ಬಂದಿರುತ್ತದೆ. ಹಾಗಿದ್ದಲ್ಲಿ ಅದು ಪ್ಯೂರ್ ತುಪ್ಪ. ಕೊಬ್ಬಿನ ಅಂಶ ಕೂಡಿದ ತುಪ್ಪಕ್ಕೆ ಹೋಲಿಸಿದರೆ ಪ್ಯೂರ್ ತುಪ್ಪ ಹೆಚ್ಚು ಹರಳು ಹರಳಾಗಿರುತ್ತದೆ. ತುಪ್ಪ ಹರಳುಗಟ್ಟಿರುವುದರುವುದನ್ನ ನೋಡಿದರೆನೇ ಗೊತ್ತಾಗುತ್ತದೆ ಅದರ ಪರಿಶುದ್ಧತೆ. ಇನ್ನೂ ಶುದ್ಧ ತುಪ್ಪದ ಘಮದಲ್ಲಿ ಬೆಣ್ಣೆಯ ಘಮದ ಒಂದು ಸಾಮ್ಯತೆ ಇರುತ್ತದೆ. ಅದು ಇಲ್ಲದೇ ಹೋದಲ್ಲಿ ಅದು ಪರಿಶುದ್ಧ ತುಪ್ಪವಲ್ಲ ಎಂದು ಪರಿಗಣಿಸಬೇಕು.

ಇದೆಲ್ಲದರ ಆಚೆಯೂ ನೀವು ಯಾವುದೋ ಒಂದು ಅಪರಿಚಿತ ಬ್ರ್ಯಾಂಡ್​ನ ತುಪ್ಪವನ್ನು ಮನೆಗೆ ತಂದಿದ್ದು ಅದರ ಪರಿಶುದ್ಧತೆ ಬಗ್ಗೆ ಅನುಮಾನ ಇದ್ದಿದ್ದೇ ಆದಲ್ಲಿ, ನೀವು ಒಂದು ಪರೀಕ್ಷೆಯನ್ನು ಮಾಡಬಹುದು. ಒಂದು ಚಮಚ ಆ ತುಪ್ಪವನ್ನು ತೆಗೆದುಕೊಂಡು.

ಒಂದು ನೀರಿನ ಗ್ಲಾಸಿನಲ್ಲಿ ಅದನ್ನು ಹಾಕಬೇಕು. ಪರಿಶುದ್ಧ ತುಪ್ಪವಾದ್ರೆ ಮಜ್ಜಿಗೆಯ ಮೇಲೆ ಬೆಣ್ಣೆ ತೇಲಿದಂತೆ ತೇಲುತ್ತದೆ. ಇಲ್ಲವಾದಲ್ಲಿ ಅದು ಕೂಡ ನೀರಿನೊಂದಿಗೆ ಬೆರೆತು ನೀರಿನಲ್ಲಿ ಹರಡಿಕೊಳ್ಳುತ್ತದೆ. ಈ ಎಲ್ಲಾ ಗುಣಲಕ್ಷಣಗಳ ಮೂಲಕ ಹಾಗೂ ಪರೀಕ್ಷೆಯ ಮೂಲಕ ಕಂಡು ಹಿಡಿಯಬಹುದು.

WhatsApp Group Join Now
Telegram Group Join Now
Instagram Account Follow Now
spot_img

Related articles

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...

ಭರತನಾಟ್ಯದ 52 ಮುದ್ರೆ 3 ವರ್ಷದ ಮಗು ಪ್ರದರ್ಶನ : ಗಿನ್ನಿಸ್ ದಾಖಲೆ ನಿರ್ಮಾಣ

ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದೆ. "ನನ್ನ...

ಅಂಚೆ ಚೀಟಿ ಸಂಗ್ರಹ : ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್ ನಿಮಿಸಿದ ನಿವೃತ್ತ ನೌಕರ

ಉಡುಪಿ: ಕೆಲವೊಮ್ಮೆ ವ್ಯಕ್ತಿಗಳ ಹವ್ಯಾಸವೇ ಅವರನ್ನು ದೊಡ್ಡ ಸಾಧನೆಯತ್ತ ಕೊಂಡೊಯ್ಯುತ್ತದೆ. ಅದರಂತೆ ಕಾಲೇಜೊಂದರ ನಿವೃತ್ತ ಕಚೇರಿ ಸಹಾಯಕ ಡೇನಿಯಲ್​ ಮೊಂತೇರೊ ಅವರು ಅಂಚೆ ಚೀಟಿ...

ಎಸ್ ಸಿ ಎಸ್ ಟಿ ಗಳ ದೌರ್ಜನ್ಯ : ಸರ್ಕಾರದ ಬ್ರಹ್ಮಾಸ್ತ್ರ

ಬೆಂಗಳೂರು: SC/ ST ಸಮುದಾಯದ ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತಡೆಗೆ ಸರ್ಕಾರ ಬ್ರಹ್ಮಾಸ್ತ್ರ ರೆಡಿ ಮಾಡಿದೆ. SC/ST ಸಮುದಾಯದ ಜನರ ಮೇಲೆ...