ISROS 100th Mission News:
ಇಸ್ರೋದ 100ನೇ MISSION ಸಿದ್ಧವಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ನಭಕ್ಕೆ ಹಾರಲು ರಾಕೆಟ್ ತಯಾರಿಗೊಂಡಿದೆ. ಇದರ ಲೈವ್ ಸ್ಟ್ರೀಮಿಂಗ್, ಸಮಯ ಸೇರಿದಂತೆ ಇತ್ಯಾದಿ ವಿವರಗಳು ಇಲ್ಲಿವೆ.ಬುಧವಾರ ದೇಶ ಮತ್ತು ಇಸ್ರೋಗೆ ವಿಶೇಷ ದಿನವಾಗಲಿದೆ.
ಈ ದಿನ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಇಸ್ರೋ ತನ್ನ 100 ನೇ ಉಡಾವಣೆ ಮಾಡಲಿದೆ. ಈ ಸಾಧನೆ ಮಾಡಲು ಇಸ್ರೋಗೆ 46 ವರ್ಷಗಳು ಬೇಕಾಯಿತು. ಆದರೆ ಮುಂದಿನ 100 ಉಡಾವಣೆ ತಲುಪಲು ಇಸ್ರೋಗೆ ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ತಿಳಿದುಕೊಳ್ಳಬಹುದಾಗಿದೆ.
ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಐತಿಹಾಸಿಕ ಸಾಧನೆಗೆ ಒಂದೇ ಒಂದು ಹೆಜ್ಜೆ ದೂರದಲ್ಲಿದೆ. ಇಸ್ರೋ ತನ್ನ ಮಹತ್ವಾಕಾಂಕ್ಷೆಯ 100ನೇ MISSION ಭಾಗವಾಗಿ GSLV (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) -F15 ಎಂಬ ರಾಕೆಟ್ ಉಡಾವಣೆ ಮಾಡಲು ಸಜ್ಜಾಗಿದೆ.
ಈ ರಾಕೆಟ್ ಬಾಹ್ಯಾಕಾಶಕ್ಕೆ ಹಾರಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ.ಈ ರಾಕೆಟ್ ಜನವರಿ 29, 2025 ರಂದು ಅಂದ್ರೆ ಬುಧವಾರ ಬೆಳಗ್ಗೆ 6:23 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಇಸ್ರೋದ ಹೊಸ ಅಧ್ಯಕ್ಷರಾಗಿ ವಿ. ನಾರಾಯಣನ್ ನೇಮಕಗೊಂಡ ನಂತರದ ಮೊದಲ ಉಡಾವಣೆ ಇದಾಗಿದೆ.
ಈ ರಾಕೆಟ್ ಉಡಾವಣೆಯನ್ನು ಇಸ್ರೋದ ಅಧಿಕೃತ YouTube ಚಾನೆಲ್ ಮೂಲಕ ನೇರ ಪ್ರಸಾರ ನೋಡಬಹುದಾಗಿದೆ.ಆಗಸ್ಟ್ 10, 1979 ರಂದು ಇಸ್ರೋ ಉಪಗ್ರಹ ಉಡಾವಣಾ ವಾಹನ (SLV) ಅನ್ನು ಉಡಾವಣೆ ಮಾಡಿತು. ಈ ಮೊದಲ ಪ್ರಮುಖ ರಾಕೆಟ್ ಅನ್ನು ಶ್ರೀಹರಿಕೋಟಾದಿಂದ ಉಡಾಯಿಸಲಾಯಿತು.
ಈಗ 46 ವರ್ಷಗಳ ನಂತರ ಬಾಹ್ಯಾಕಾಶ ಇಲಾಖೆ ತನ್ನ 100ನೇ ಉಡಾವಣೆ ಪೂರ್ಣಗೊಳಿಸಲು ಸಿದ್ಧವಾಗಿದೆ. ಇಸ್ರೋ ವಿಜ್ಞಾನಿಗಳು ಜಿಎಸ್ಎಲ್ವಿ ರಾಕೆಟ್ ಬಳಸಿ ನ್ಯಾವಿಗೇಷನ್ ಉಪಗ್ರಹ ಉಡಾವಣೆ ಮಾಡಲಿದ್ದಾರೆ.ಇದೀಗ ಇಸ್ರೋ ತನ್ನ ಐತಿಹಾಸಿಕ ಬಾಹ್ಯಾಕಾಶ ಕೇಂದ್ರದಿಂದ 100ನೇ ರಾಕೆಟ್ ಉಡಾವಣೆ ಮಾಡಲಿದೆ.
ಈ ಐತಿಹಾಸಿಕ ಉಡಾವಣೆಯನ್ನು NVS-02 ಉಪಗ್ರಹದೊಂದಿಗೆ ಮಾಡಲಾಗುವುದು. ಇದನ್ನು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮೂಲಕ ಕಕ್ಷೆಗೆ ಕಳುಹಿಸಲಾಗುತ್ತದೆ.ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SHAR) ಆಂಧ್ರ ಪ್ರದೇಶದ ಪೂರ್ವ ಕರಾವಳಿಯ ದ್ವೀಪ ಶ್ರೀಹರಿಕೋಟಾದಲ್ಲಿದೆ. ಇದು ಚೆನ್ನೈನಿಂದ ಉತ್ತರಕ್ಕೆ ಸುಮಾರು 80 ಕಿಲೋ ಮೀಟರ್ ದೂರದಲ್ಲಿದೆ. ಈ ದ್ವೀಪವನ್ನು 1969ರಲ್ಲಿ ಉಪಗ್ರಹ ಉಡಾವಣಾ ಕೇಂದ್ರಕ್ಕಾಗಿ ಆಯ್ಕೆ ಮಾಡಲಾಯಿತು. ಶ್ರೀಹರಿಕೋಟಾ ನೆಲ್ಲೂರು ಜಿಲ್ಲೆಯ ಸುಳ್ಳೂರುಪೇಟೆಯ ಸಮೀಪದಲ್ಲಿದೆ.
Importance of NavIC System: ಇದು ಎರಡು ರೀತಿಯ ಸೇವೆಗಳನ್ನು ಒದಗಿಸುತ್ತದೆ. 20 ಮೀಟರ್‌ಗಳಿಗಿಂತ ಹೆಚ್ಚಿನ ಸ್ಥಾನಿಕ ನಿಖರತೆ ಒದಗಿಸುವ ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸರ್ವಿಸ್ (SPS) ಮತ್ತು ವಿಶೇಷ ಸಂಚರಣೆ ಸಾಮರ್ಥ್ಯಗಳನ್ನು ಒದಗಿಸುವ ರೆಸ್ಟ್ರಿಕ್ಟೆಡ್ ಸರ್ವಿಸ್ (RS).
NavIC ಭಾರತದ ಸ್ವದೇಶಿ ನ್ಯಾವಿಗೇಷನ್ ಉಪಗ್ರಹ ಸಿಸ್ಟಮ್ ಆಗಿದ್ದು, ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT) ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ವ್ಯವಸ್ಥೆಯು ಭಾರತ ಮತ್ತು ಭಾರತೀಯ ಉಪಖಂಡದಾದ್ಯಂತ 1500 ಕಿ.ಮೀ. ಪ್ರದೇಶವನ್ನು ಆವರಿಸುತ್ತದೆ.
Features of NVS-02 Satellite: ಈ ಉಪಗ್ರಹ 2,250 ಕೆಜಿ ತೂಕವಿದ್ದು, ಸುಮಾರು 3 ಕಿ.ವ್ಯಾಟ್ ವಿದ್ಯುತ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು L1, L5 ಮತ್ತು S ಬ್ಯಾಂಡ್‌ಗಳಲ್ಲಿ ನ್ಯಾವಿಗೇಷನ್ ಪೇಲೋಡ್‌ಗಳನ್ನು ಮತ್ತು C-ಬ್ಯಾಂಡ್‌ನಲ್ಲಿ ರೇಂಡಿಂಗ್ ಪೇಲೋಡ್ ಅನ್ನು ಹೊಂದಿರುತ್ತದೆ.NVS-02 ಉಪಗ್ರಹವು ಎರಡನೇ ತಲೆಮಾರಿನ NavIC ಉಪಗ್ರಹಗಳ ಭಾಗವಾಗಿದ್ದು, I-2K ಬಸ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.
Indigenous Technological Advancements:ಈ ಕಾರ್ಯಾಚರಣೆಯು ಶ್ರೀಹರಿಕೋಟಾದಿಂದ ಇಸ್ರೋದ 100 ನೇ ಉಡಾವಣೆ ಗುರುತಿಸಲಿದೆ. ಅಷ್ಟೇ ಅಲ್ಲ ಸ್ಥಳೀಯ ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ನ್ಯಾವಿಗೇಷನ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಯುಆರ್ ಸ್ಯಾಟಲೈಟ್ ಸೆಂಟರ್ (ಯುಆರ್‌ಎಸ್‌ಸಿ) ನಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಈ ಉಪಗ್ರಹವು ಬಾಹ್ಯಾಕಾಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಥರ್ಮೋವಾಕ್ ಮತ್ತು ಡೈನಾಮಿಕ್ ಪರೀಕ್ಷೆಗೆ ಒಳಪಡಿಸಲಾಯಿತು. NVS-02 ಉಡಾವಣೆಯು ಇಸ್ರೋದ ತಾಂತ್ರಿಕ ಪರಾಕ್ರಮ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.
ಇದನ್ನು ಓದಿರಿ :HOW MUCH SALT INTAKE DAILY:ಪ್ರತಿನಿತ್ಯ ಯಾವ ವಯಸ್ಸಿನವರು ಎಷ್ಟು ಉಪ್ಪು ಸೇವಿಸಬೇಕು ನಿಮಗೆ ಗೊತ್ತೇ? ತಜ್ಞರ ಸಲಹೆ ಹೀಗಿದೆ.