spot_img
spot_img

ISRO HLVM3 – 2025ರಲ್ಲಿ ಉಡಾವಣೆಯಾಗಲಿರುವ HLVM3 ನೌಕೆಯ ಜೋಡಣೆ ಆರಂಭಿಸಿದ ಇಸ್ರೋ

spot_img
spot_img

Share post:

New Delhi:

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (ಎಸ್​ಡಿಎಸ್​ಸಿ-ಶಾರ್) ಎಚ್ಎಲ್​ವಿಎಂ 3 ಜೋಡಣೆಯನ್ನು ಇಸ್ರೋ ಪ್ರಾರಂಭಿಸಿದೆ.ಮಹತ್ವಾಕಾಂಕ್ಷೆಯ ಗಗನಯಾನ ಮಾನವ ಬಾಹ್ಯಾಕಾಶಯಾನ ಕಾರ್ಯಕ್ರಮದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (ಎಸ್​ಡಿಎಸ್​ಸಿ-ಶಾರ್) ಎಚ್ಎಲ್​ವಿಎಂ 3 ನೌಕೆಯ ಜೋಡಣೆ ಕೆಲಸ ಪ್ರಾರಂಭಿಸಿದೆ.

ಡಿಸೆಂಬರ್ 18, 2014ರಂದು ಎಲ್​ವಿಎಂ 3-ಎಕ್ಸ್ /ಕೇರ್ ಮಿಷನ್​ ಉಡಾವಣೆಯಾಗಿತ್ತು. ಈಗ ಅದರ 10ನೇ ವಾರ್ಷಿಕೋತ್ಸವವಾದ ಇಂದು ಎಚ್ಎಲ್​ವಿಎಂ 3 ಜೋಡಣೆಯನ್ನು ಪ್ರಾರಂಭಿಸಿರುವುದು ವಿಶೇಷ.ಈ ಮಿಷನ್ 2025ರಲ್ಲಿ ಉಡಾವಣೆಯಾಗಲಿದ್ದು, ಇದು ಮಹತ್ವಾಕಾಂಕ್ಷೆಯ ಗಗನಯಾನ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಅಡಿಯಲ್ಲಿ ಮೊದಲ ಸಿಬ್ಬಂದಿರಹಿತ ಹಾರಾಟವಾಗಲಿದೆ.

ಬಾಹ್ಯಾಕಾಶ ಮಿಷನ್​ನಿಂದ ಪಡೆಯುವ ಮಾಹಿತಿಗಳು ಮಾನವಸಹಿತ ಮಿಷನ್​ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. “ಡಿಸೆಂಬರ್ 18ರಂದು ಎಸ್​ಡಿಎಸ್​ಸಿಯಲ್ಲಿ 8.45 ಗಂಟೆಗೆ, ಎಸ್ 200 ಮೋಟರ್​ನ ಪೂರ್ಣ ಫ್ಲೆಕ್ಸ್ ಸೀಲ್ ನಾಜಲ್‌ನೊಂದಿಗೆ ನಾಜಲ್ ಎಂಡ್ ಸೆಗ್ಮೆಂಟ್‌ನ ಸ್ಟ್ಯಾಕಿಂಗ್ ನಡೆಯಿತು. ಇದರೊಂದಿಗೆ ಎಚ್ಎಲ್​ವಿಎಂ 3-ಜಿ 1/ಒಎಂ-1 ಮಿಷನ್​ನ ಅಧಿಕೃತ ಉಡಾವಣಾ ಅಭಿಯಾನ ಪ್ರಾರಂಭವಾದಂತಾಗಿದೆ” ಎಂದು ಅದು ಹೇಳಿದೆ.

“ಎಲ್​ವಿಎಂ 3-ಎಕ್ಸ್ /ಕೇರ್‌ನ 10ನೇ ವಾರ್ಷಿಕೋತ್ಸವದಂದು ಗಗನಯಾನದ ಮೊದಲ ಸಿಬ್ಬಂದಿರಹಿತ ಹಾರಾಟಕ್ಕಾಗಿ ಇಸ್ರೋ ಎಚ್ಎಲ್​​ವಿಎಂ 3 ಅನ್ನು ಜೋಡಿಸಲು ಪ್ರಾರಂಭಿಸಲಾಗಿದೆ! ಭಾರತದ ಮೊದಲ ಮಾನವ ಬಾಹ್ಯಾಕಾಶಯಾನ ಮತ್ತು ಭವಿಷ್ಯದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳತ್ತ ಇದು ಪ್ರಮುಖ ಹೆಜ್ಜೆಯಾಗಿದೆ” ಎಂದು ಇಸ್ರೋ ಹೇಳಿದೆ.

ಥ್ರಸ್ಟರ್ ಗಳನ್ನು ಬಳಸಿ ಇದು ಸುಲಭವಾಗಿ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸಿತ್ತು. ನಂತರ ಬಂಗಾಳ ಕೊಲ್ಲಿಯಲ್ಲಿ ಸುಗಮವಾಗಿ ಇಳಿದಿತ್ತು. ಇದನ್ನು ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಿಂದ ಎತ್ತಿ ಹೊರತಂದಿದ್ದರು. 2019ರಲ್ಲಿ ಅಧಿಕೃತ ಗಗನಯಾನ ಯೋಜನೆಗೆ ಅನುಮೋದನೆ ನೀಡುವ ಮೊದಲೇ, ಮಾನವ ಬಾಹ್ಯಾಕಾಶ ಯೋಜನೆಯ ಪೂರ್ವ-ಯೋಜನಾ ಚಟುವಟಿಕೆಗಳ ಭಾಗವಾಗಿ ಕ್ರೂ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

2014ರ ಕಾರ್ಯಾಚರಣೆಯ ಸಮಯದಲ್ಲಿ ಎಲ್​ವಿಎಂ 3-ಎಕ್ಸ್ (ಈಗ ಇದನ್ನು ಎಚ್ಎಲ್​ವಿಎಂ 3 ಎಂದು ಹೆಸರಿಸಲಾಗಿದೆ) ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿತ್ತು ಮತ್ತು 3,775 ಕೆ.ಜಿ ತೂಕದ (ಎಲ್ವಿಎಂ 3-ಎಕ್ಸ್ /ಕೇರ್ ಮಿಷನ್) ಕ್ರೂ ಮಾಡ್ಯೂಲ್ ಅನ್ನು 126 ಕಿ.ಮೀ ಸಬ್ ಆರ್ಬಿಟಲ್ ಎತ್ತರಕ್ಕೆ ಏರಿಸಿತ್ತು.

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...