WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
ISRO Susssfuly Docs Satellite News:
ISRO ಮತ್ತೊಂದು ಸಾಧನೆ ಮಾಡಿದೆ. ಅಂತರಿಕ್ಷದಲ್ಲಿ ಎರಡು ಉಪಗ್ರಹಗಳ ಜೋಡಣೆ ಕಾರ್ಯ ಯಶಸ್ವಿಯಾಗಿದ್ದು, ಈ ಬಗ್ಗೆ ISRO ಮಾಹಿತಿ ನೀಡಿದೆ. ಸ್ಪಾಡೆಕ್ಸ್ (ಸ್ಪೇಸ್ ಡಾಕಿಂಗ್ ಎಕ್ಸರ್ಸೈಸ್) ಮಿಷನ್ ಅಡಿಯಲ್ಲಿ ಎರಡು ಉಪಗ್ರಹಗಳನ್ನು ಡಾಕಿಂಗ್ ಮಾಡುವ ಪ್ರಕ್ರಿಯೆಯನ್ನು ISRO ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ನಂತರ, ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ.
ISRO shared his happiness: ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಪಡುತ್ತೇವೆ! ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4 ನೇ ರಾಷ್ಟ್ರ ಭಾರತವಾಗಿದೆ. ಇಡೀ ತಂಡಕ್ಕೆ ಮತ್ತು ಭಾರತಕ್ಕೆ ಅಭಿನಂದನೆಗಳು ಎಂದು ISRO ‘ಎಕ್ಸ್’ ಪೋಸ್ಟ್ ಮೂಲಕ ತಿಳಿಸಿದೆ.
ಡಾಕಿಂಗ್ ಪ್ರಕ್ರಿಯೆ ಯಶಸ್ವಿ.. ಸ್ಪೇಸ್ ಕ್ರಾಫ್ಟ್ ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ. ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ದಾಖಲಿಸಿದೆ!
ISRO said: ಡಾಕಿಂಗ್ ನಂತರ ಎರಡು ಉಪಗ್ರಹಗಳನ್ನು ಒಂದೇ ವಸ್ತುವಾಗಿ ನಿಯಂತ್ರಿಸುವುದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಅನ್‌ಡಾಕಿಂಗ್ ಪ್ರಕ್ರಿಯೆ ಮತ್ತು ವಿದ್ಯುತ್ ಟ್ರಾನ್ಸ್ಪರ್ ಪರಿಶೀಲನೆಗಳು ನಡೆಯಲಿವೆ ಎಂದು ISRO ಪೋಸ್ಟ್ ಮೂಲಕ ತಿಳಿಸಿದೆ.
Spadex Mission Significance: ಸ್ಪಾಡೆಕ್ಸ್ ಮಿಷನ್ ಅನ್ನು ISRO ಡಿಸೆಂಬರ್ 30, 2024 ರಂದು ಪ್ರಾರಂಭಿಸಿತು. ಇದು ಎರಡು ಸಣ್ಣ ಉಪಗ್ರಹಗಳನ್ನು – SDX01 (ಚೇಸರ್) ಮತ್ತು SDX02 (ಟಾರ್ಗೆಟ್) ಭೂಮಿಯ ಕೆಳ ಕಕ್ಷೆಗೆ ಬಿಟ್ಟಿತು.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಡಾಕಿಂಗ್ ತಂತ್ರಜ್ಞಾನವನ್ನು ಪ್ರದರ್ಶಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು.ಅಲ್ಲದೆ ಈ ತಂತ್ರಜ್ಞಾನವು ಭಾರತದ ಬಾಹ್ಯಾಕಾಶ ಕೇಂದ್ರವು “ಭಾರತೀಯ ಬಾಹ್ಯಾಕಾಶ ನಿಲ್ದಾಣ” ಸ್ಥಾಪನೆಗೆ ಸಹ ಮಹತ್ವದ್ದಾಗಿದೆ.
ಇದನ್ನು 2028 ರ ವೇಳೆಗೆ ಉಡಾವಣೆ ಮಾಡಲು ಯೋಜಿಸಲಾಗಿದೆ.ಚಂದ್ರಯಾನ-4 ನಂತಹ ಕಾರ್ಯಾಚರಣೆಗಳಲ್ಲಿ ಡಾಕಿಂಗ್ ತಂತ್ರಜ್ಞಾನದ ಅಗತ್ಯವಿದೆ. ಇದು ಚಂದ್ರನಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿ ತರಲು ಪ್ರಮುಖವಾಗಿದೆ.
Challenges of Docking Process: ಇದಾದ ನಂತರ ಎರಡೂ ಉಪಗ್ರಹಗಳನ್ನು ಒಟ್ಟಿಗೆ ಸಂಪರ್ಕಿಸಲಾಯಿತು. ಡಾಕಿಂಗ್ ನಂತರ ಉಪಗ್ರಹಗಳ ನಡುವಿನ ವಿದ್ಯುತ್ ವರ್ಗಾವಣೆಯನ್ನು ಮಾಡಲಾಯಿತು. ನಂತರ ಅವುಗಳ ಸಂಬಂಧಿತ ಪೇಲೋಡ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಎರಡನ್ನೂ ಬೇರ್ಪಡಿಸಲಾಯಿತು.
ಕಾರ್ಯಾಚರಣೆಯ ಅಡಿಯಲ್ಲಿ ಮೊದಲು ಎರಡೂ ಉಪಗ್ರಹಗಳನ್ನು 20 ಕಿಲೋಮೀಟರ್ ದೂರದಲ್ಲಿ ಇರಿಸಲಾಯಿತು. ನಂತರ ಚೇಸರ್ ಉಪಗ್ರಹವು ಟಾರ್ಗೆಟ್ ಉಪಗ್ರಹವನ್ನು ಸಮೀಪಿಸಿ 5 ಕಿಮೀ, 1.5 ಕಿಮೀ, 500 ಮೀ, 225 ಮೀ, 15 ಮೀ ಮತ್ತು ಕೊನೆದಾಗಿ 3 ಮೀ ದೂರವನ್ನು ಕ್ರಮಿಸಿತು.
Future Plans: ಇವು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ನಲ್ಲಿ ಡಾಕ್ ಆಗುತ್ತವೆ. ಚಂದ್ರನ ಮೇಲೆ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿ ತರಲು ಡಾಕಿಂಗ್ ತಂತ್ರಜ್ಞಾನವನ್ನು ಬಳಸಲಾಗುವುದು.
ಚಂದ್ರಯಾನ-4 ಕಾರ್ಯಾಚರಣೆಯಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರ್ಯಾಚರಣೆಯಲ್ಲಿ ಎರಡು ಮಾಡ್ಯೂಲ್‌ಗಳನ್ನು ಪ್ರತ್ಯೇಕ ಉಡಾವಣಾ ವಾಹನಗಳಿಂದ ಉಡಾಯಿಸಲಾಗುವುದು. ಸ್ಪಾಡೆಕ್ಸ್ ಮಿಷನ್‌ನ ಯಶಸ್ವಿ ಡಾಕಿಂಗ್ ಪರೀಕ್ಷೆಯು ಭಾರತವು ಬಾಹ್ಯಾಕಾಶ ವಿಜ್ಞಾನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಲು ಸಹಾಯ ಮಾಡಿದೆ.
ಈ ಮಿಷನ್ ಭವಿಷ್ಯದಲ್ಲಿ ಇಸ್ರೋದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಗಳಿಗೆ ಒಂದು ಮೈಲಿಗಲ್ಲಾಗಲಿದೆ.ಇದಲ್ಲದೆ ಮಾನವ ಕಾರ್ಯಾಚರಣೆಗಳು ಮತ್ತು ಬಾಹ್ಯಾಕಾಶ ಕೇಂದ್ರಗಳಿಗೂ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಗಳಿವೆ.
ಇದನ್ನು ಓದಿರಿ : CEO ZUCKERBERG REMARK : ಚುನಾವಣೆ ಬಗ್ಗೆ ಸಿಇಒ ಜುಕರ್ ಬರ್ಗ್ ಹೇಳಿಕೆ