ಭೂಪಾಲ್ : ಮೆಗಾಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಅತ್ತೆ, ಜಯಾ ಬಚ್ಚನ್ ಅವರ ತಾಯಿ ಇಂದಿರಾ ಬಾಧುರಿ ವಿಧಿವಶರಾಗಿದ್ದಾರೆ.
ಅವರಿಗೆ 94 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇಂದಿರಾ ಬಾಧುರಿ ಅವರನ್ನು ಭೋಪಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಂದಿರಾ ಬಾಧುರಿ ಅವರ ಪತಿ ತರೂನ್ ಭಾದುರಿ ಅವರು 1996 ರಲ್ಲಿ ನಿಧನರಾಗಿದ್ದರು. ಅಭಿಷೇಕ್ ಬಚ್ಚನ್ ಭೋಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇಂದಿರಾ ಅವರು ಇಬ್ಬರು ಹೆಣ್ಣುಮಕ್ಕಳಾದ ಜಯಾ ಬಚ್ಚನ್ ಮತ್ತು ರೀಟಾ ಬಾಧುರಿ ಅವರನ್ನು ಅಗಲಿದ್ದಾರೆ.
ಫೆಬ್ರವರಿ 2020 ರಲ್ಲಿ, ಬಚ್ಚನ್ ಕುಟುಂಬ ಇಂದಿರಾ ಬಾಧುರಿ ಅವರ 90 ನೇ ಹುಟ್ಟುಹಬ್ಬವನ್ನು ಭೋಪಾಲ್ ನ ಅವರ ನಿವಾಸದಲ್ಲಿ ಆಚರಿಸಿತ್ತು. 2023 ರಲ್ಲಿ ಇಂದಿರಾ ಬಾಧುರಿ ಅವರನ್ನು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದ ಲಯವನ್ನು ನಿಯಂತ್ರಿಸಲು ಪೇಸ್‌ಮೇಕರ್ ಅನ್ನು ಅಳವಡಿಸಲಾಗಿತ್ತು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now