ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಮತ್ತು ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಕುಗ್ಗಿರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆಯಾಗಿದೆ.
ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ ದರವು 10 ಗ್ರಾಂಗೆ 1,790 ರೂ. ಇಳಿಕೆ ಕಂಡು 78,560 ರೂ.ಗೆ ತಲುಪಿತ್ತು. ಬೆಳ್ಳಿ ದರವು ಕೆ.ಜಿಗೆ 3,000 ರೂ. ಕಡಿಮೆಯಾಗಿ, 93,000 ರೂ.ಗೆ ಕುಸಿದಿತ್ತು.ಇದೀಗ ಗುರುವಾರವೂ ಬೆಲೆ ಇಳಿಕೆ ಮುಂದುವರಿದಿದೆ.
ಇದೇ ವೇಳೆ ಆಭರಣ ಚಿನ್ನ ಅಂದರೆ 22 ಕ್ಯಾರಟ್ (916) ಚಿನ್ನದ ದರ 10 ಗ್ರಾಂಗೆ 71,523 ರೂ.ಗೆ ಇಳಿಕೆಯಾಗಿದೆ. ಅಂದರೆ 1 ಗ್ರಾಂಗೆ 7,152 ರೂ.ಗೆ ಕುಸಿದಿದೆ.
ಗುರುವಾರ ಬೆಂಗಳೂರಿನಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ 10 ಗ್ರಾಂಗೆ 78,560 ರೂ. ಹಾಗೂ 1 ಗ್ರಾಂಗೆ 7,856 ರೂ. ಇತ್ತು. 22 ಕ್ಯಾರಟ್ ಆಭರಣ ಚಿನ್ನದ ದರ 10 ಗ್ರಾಂಗೆ 72,000 ರೂ. ಹಾಗೂ 1 ಗ್ರಾಂಗೆ 7,200 ರೂ. ಇತ್ತು.
”ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಡೊನಾಲ್ಡ್ ಟ್ರಂಪ್, ವ್ಯಾಪಾರ ವರ್ಗದ ಪರವಾಗಿ ಹೆಚ್ಚು ಒಲವು ಹೊಂದಿದ್ದಾರೆ. ಹಾಗಾಗಿ, ಹೂಡಿಕೆದಾರರು ಹಳದಿ ಲೋಹದ ಬದಲಿಗೆ ಬಿಟ್ ಕಾಯಿನ್ ಮತ್ತು ಈಕ್ವಿಟಿಗಳಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದ ಚಿನ್ನದ ಬೆಲೆಯು ಇಳಿಕೆಯಾಗಿದೆ,” ಎಂದು ಹೂಡಿಕೆ ತಜ್ಞ ಸೌಮಿಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ಬಾಂಡ್ ಗಳಿಕೆ ಮತ್ತು ಡಾಲರ್ ಮೌಲ್ಯದ ಏರಿಕೆ ಕೂಡ ಚಿನ್ನ, ಬೆಳ್ಳಿ ದರದ ಇಳಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ಸೌಮಲ್ ಗಾಂಧಿ ತಿಳಿಸಿದ್ದಾರೆ.
ಕಲ್ಯಾಣ್ ಜ್ಯುವೆಲ್ಲರ್ಸ್, ಮಲಬಾರ್ ಗೋಲ್ಡ್, ಜೋಯಾಲುಕ್ಕಾಸ್ ಮೊದಲಾದ ಚಿನ್ನದ ಮಳಿಗೆಗಳಲ್ಲೂ 22 ಕ್ಯಾರಟ್ ಚಿನ್ನದ ದರ ಗ್ರಾಂಗೆ 7,200 ರೂ. ಇತ್ತು. ಇದು ಶುಕ್ರವಾರ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಇಂಡಿಯನ್ ಬುಲಿಯನ್ ಆಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿ. ಪ್ರಕಾರ ಗುರುವಾರ ಸಂಜೆ ವೇಳೆಗೆ 24 ಕ್ಯಾರಟ್ ಶುದ್ಧ ಚಿನ್ನದ ದರವು 10 ಗ್ರಾಂಗೆ 430 ರೂ. ಇಳಿಕೆ ಕಂಡು 78,136 ರೂ.ಗೆ ತಲುಪಿತ್ತು. ಈ ಮೂಲಕ 1 ಗ್ರಾಂಗೆ 7,813 ರೂ.ಗೆ ಕುಸಿತ ಕಂಡಿದೆ ಎಂದು ತಿಳಿಸಿದ್ದಾರೆ.
ಬೆಳ್ಳಿ ಬೆಲೆ ಪ್ರತಿ ಒಂದು ಗ್ರಾಂಗೆ 50 ಪೈಸೆ ಕಡಿಮೆ ಆಗಿದೆ. ಅಂದರೆ ಪ್ರತಿ ಕೆಜಿ ಬೆಳ್ಳಿಗೆ 500 ರೂಪಾಯಿ ಇಳಿಕೆಯಾಗಿದೆ. ಪ್ರಸ್ತುತ ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 74 ರೂ. ಆಗಿದೆ. ಅಂದರೆ, ಪ್ರತಿ ಒಂದು ಕೆಜಿ ಬೆಳ್ಳಿ ಬೆಲೆ 74,000 ರೂ. ಆಸುಪಾಸಿನಲ್ಲಿ ವಹಿವಾಟಾಗುತ್ತಿದೆ.
ಬೆಂಗಳೂರಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 72.505 ರೂ. 7225 ಹಾಗೂ ರೂ. 72,250 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 76,500 ಆಗಿದ್ದರೆ, ಮುಂಬೈನಲ್ಲಿ ರೂ. 75,000 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 75000 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 75,000 ಆಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now