Block Spam Calls And SMS On Jio: ಸ್ಪ್ಯಾಮ್ ಕರೆಗಳು, ಮೆಸೇಜ್ಗಳು ದಿನದಿನಕ್ಕೆ ಹೆಚ್ಚುತ್ತಿವೆ. ಈ ಕರೆಗಳು ಮತ್ತು ಸಂದೇಶಗಳನ್ನು ಎಐ ಮತ್ತು ಮಷಿನ್ ಲರ್ನಿಂಗ್ ನಿಯಂತ್ರಿಸುತ್ತೆದೆ ಎಂದು ಎಂದಿಗೂ ಭಾವಿಸಬೇಡಿ. ಏಕೆಂದರೆ, ಸೈಬರ್ ಅಪರಾಧಿಗಳೂ ಸಹ ರೋಬೋಕಾಲ್‌ನಂತಹ ತಂತ್ರಜ್ಞಾನಗಳನ್ನು ಬಳಸಿ ವಂಚಿಸುತ್ತಿದ್ದಾರೆ. ಇದಕ್ಕಾಗಿಯೇ ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ಫೀಚರ್ವೊಂದನ್ನು ಪ್ರಸ್ತುತಪಡಿಸುತ್ತಿದೆ.
MyJio ಅಪ್ಲಿಕೇಶನ್ ಮೂಲಕ ಒಂದು ಕ್ಲಿಕ್‌ನಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್ಗಳನ್ನು ಭಾಗಶಃ ನಿಲ್ಲಿಸಬಹುದಾಗಿದೆ.
ಜಿಯೋ ನೆಟ್‌ವರ್ಕ್‌ನಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್ಗಳನ್ನು ನಿಲ್ಲಿಸಲು, ನೀವು ಡೂ ನಾಟ್ ಡಿಸ್ಟರ್ಬ್ (DND) ಸರ್ವಿಸ್ ಅನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬೇಕು. ಈ ಸಣ್ಣ ಸೆಟ್ಟಿಂಗ್‌ನೊಂದಿಗೆ, ನೀವು ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್ಗಳು ಹಾಗೂ ಟೆಲಿಮಾರ್ಕೆಟಿಂಗ್ ಕರೆಗಳನ್ನು ನಿಯಂತ್ರಿಸಲು ಮತ್ತು ನಿರ್ಬಂಧಿಸಲು ಸಾಧ್ಯವಿದೆ.
ಬಳಕೆದಾರರು ಡಿಎನ್ಡಿ ಸರ್ವಿಸ್ ಅನ್ನು ಕಸ್ಟಮೈಸ್ ಸಹ ಮಾಡಬಹುದಾಗಿದೆ. ನೀವು ನಿರ್ಬಂಧಿಸಬೇಕಾದ ಕರೆಗಳು ಮತ್ತು ಮೆಸೇಜ್ಗಳ ವರ್ಗವನ್ನು ಆಯ್ಕೆ ಮಾಡುವ ಮೂಲಕ ಮತ್ತು ಅವುಗಳನ್ನು ಫಿಲ್ಟರ್ ಮಾಡುವ ಮೂಲಕ ಡಿಎನ್ಡಿ ಸೇವೆಯನ್ನು ಕಸ್ಟಮೈಸ್ ಮಾಡಬಹುದಾಗಿದೆ. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಇತ್ಯಾದಿ ಆಯ್ಕೆಗಳು ಇದರಲ್ಲಿವೆ.
ಕೆಲವು ಜಾಹೀರಾತು ಕರೆಗಳನ್ನು ಬರಲು ಅನುಮತಿಸಲು ಈ ಕರೆಗಳನ್ನು ಭಾಗಶಃ ನಿರ್ಬಂಧಿಸುವ ಆಯ್ಕೆಯೂ ಇದರಲ್ಲಿದೆ. ಇದಕ್ಕಾಗಿ ಕೆಲವು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಅದರ ನಂತರ ಸ್ಪ್ಯಾಮ್ ಕರೆಗಳಿಂದ ಮುಕ್ತಿ ಪಡೆಯುವಿರಿ.
ದೇಶದಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಂದ ಜನರು ಪ್ರತಿದಿನ ಮೋಸ ಹೋಗುತ್ತಿದ್ದಾರೆ. ಈ ದೃಷ್ಟಿಯಿಂದ ಟೆಲಿಕಾಂ ಕಂಪನಿಗಳು ಬಳಕೆದಾರರ ಸುರಕ್ಷತೆಗಾಗಿ ಹೊಸ ಫೀಚರ್ಗಳನ್ನು ಒದಗಿಸುತ್ತಿವೆ.